ಜ.26 ರಂದು ಬೃಹತ್ ರಕ್ತದಾನ ಶಿಬಿರ

ಕುಂದಾಪುರ:ರಕ್ತ ನಿಧಿ ಕೇಂದ್ರ ರೆಡ್‍ಕ್ರಾಸ್,ಸಹಕಾರ ಇಲಾಖೆ ಕುಂದಾಪುರ ಉಪವಿಭಾಗ,ಕುಂದಾಪುರ – ಬೈಂದೂರು ತಾಲೂಕಿನ ವಿವಿಧ ಸಹಕಾರ ಸಂಘ,ಜೆ.ಸಿ.ಐ ಸಿ.ಟಿ ಕುಂದಾಪುರ ಮತ್ತು ರೋಟರಿ ಸನ್‍ರೈಸ್ ಕುಂದಾಪುರ ಅವರ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ ಜ.26 ರಂದು ಶುಕ್ರವಾರ ಬೆಳಿಗ್ಗೆ 9 ರಿಂದ 1 ರ ತನಕ ಶ್ರೀಲಕ್ಷ್ಮೀ ನರಸಿಂಹ ಕಲಾಮಂದಿರ ಜೂನಿಯರ್ ಕಾಲೇಜು ಕುಂದಾಪುರದಲ್ಲಿ ನಡೆಯಲಿದೆ ಎಂದು ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ ಗಂಗೊಳ್ಳಿ ತಿಳಿಸಿದೆ.ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸಿಕೊಂಡಿದೆ.

ಬಡಾಕೆರೆ ಶಾಲೆ ದತ್ತು ಸ್ವೀಕಾರ,ಪೂರ್ವಭಾವಿ ಸಭೆ

ಕುಂದಾಪುರ:ಅವನತಿಯಲ್ಲಿರುವ ಸರಕಾರಿ ಶಾಲೆಗಳನ್ನು ಉದ್ಯಮಿಗಳು,ದಾನಿಗಳು,ಸಂಘ ಸಂಸ್ಥೆಗಳು ದತ್ತು ಸ್ವೀಕಾರ ಮಾಡುವುದರ ಮುಖೇನ ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಬಡಾಕೆರೆ ಶಾಲೆಯಲ್ಲಿ ಬುಧವಾರ ನಡೆದ ಶಾಲೆ ದತ್ತು ಸ್ವೀಕಾರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಸರಕಾರಿ ಶಾಲೆಗಳನ್ನು ಉಳಿಸಬೇಕು ಎನ್ನುವ ನೆಲೆಯಲ್ಲಿ 300 ಟ್ರಿಸ್ ಎನ್ನುವ ವಿನೂತನ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಇವೊಂದು ಪುಣ್ಯದ ಕೆಲಸದಲ್ಲಿ ಭಾಗಿದಾರರಾಗುವ ಮುಖೇನ ಮುಖೇನ ಸರಕಾರಿ […]

ಹೊಸೂರು ಪ್ರೌಢಶಾಲೆ: ಸೈಕಲ್ ಸ್ಟ್ಯಾಂಡ್,ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ಕುಂದಾಪುರ: ಹೊಸೂರು ಶ್ರೀ ಮೂಕಾಂಬಿಕಾ ಪ್ರೌಢಶಾಲೆಯ ರಜತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ನೂತನವಾಗಿ ನಿರ್ಮಿಸಿದ ಸೈಕಲ್ ಸ್ಟ್ಯಾಂಡ್ ಮತ್ತು ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನಾ ಸಮಾರಂಭ ನಡೆಯಿತು.ಮಾಜಿ ಆಡಳಿತ ಮಂಡಳಿ ಸದಸ್ಯ ವಂಡಬಳ್ಳಿ ಜಯರಾಮ ಶೆಟ್ಟಿಯವರು ನೂತನವಾಗಿ ನಿರ್ಮಿಸಿರುವ ಸೈಕಲ್ ಸ್ಟ್ಯಾಂಡ್ ಅನ್ನು ಉದ್ಘಾಟಿಸಿದರು.ಮಾಜಿ ಆಡಳಿತ ಮಂಡಳಿ ಸದಸ್ಯ ಸಬ್ಲಾಡಿ ಮಂಜಯ್ಯ ಶೆಟ್ಟಿ ಮತ್ತು ಮಾಜಿ ಆಡಳಿತ ಮಂಡಳಿ ಸದಸ್ಯರಾದ ಡಾ.ಅತುಲ್ ಕುಮಾರ ಶೆಟ್ಟಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಶುಭಹಾರೈಸಿದರು. ರಾಜ್ಯೋತ್ಸವ ಪ್ರಶಸ್ತಿ […]

You cannot copy content of this page