ಗಂಗೊಳ್ಳಿ:ಬೈಂದೂರು ವೃತ್ತ ನಿರೀಕ್ಷಕರಿಗೆ ಮನವಿ

ಕುಂದಾಪುರ:ಗಂಗೊಳ್ಳಿ ಮ್ಯಾಂಗನೀಸ್ ರಸ್ತೆ ಅಂಗಡಿಯೊಂದರಿಂದ ಲಕ್ಷಾಂತರ.ರೂ ಮೌಲ್ಯದ ಸೀಸ ಕಳವುಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸುವಂತೆ ಗಂಗೊಳ್ಳಿ ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘದ ವತಿಯಿಂದ ಬೈಂದೂರು ವೃತ್ತ ನಿರೀಕ್ಷ ಸವಿತ್ರತೇಜ ಅವರನ್ನು ಶುಕ್ರವಾರ ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಾಯಿತು.ಈ ಸಂದರ್ಭ ಗಂಗೊಳ್ಳಿ ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಯಶವಂತ ಗಂಗೊಳ್ಳಿ,ಗೌರವಾಧ್ಯಕ್ಷ ಗಣಪತಿ ಖಾರ್ವಿ,ಮೀನುಗಾರ ಮುಖಂಡ ರಮೇಶ ಕುಂದರ್, ಪರ್ಸಿನ್ ಬೋಟ್ ಹಾಗೂ ವಿವಿಧ ಮೀನುಗಾರ ಸಂಘಟನೆಯ ಪ್ರಮುಖರು,ಮೀನುಗಾರರು ಉಪಸ್ಥಿತರಿದ್ದರು.

ಮರವಂತೆ:ವಾರ್ಷಿಕೋತ್ಸವ ಸಂಭ್ರಮಾಚರಣೆ,ಸನ್ಮಾನ ಕಾರ್ಯಕ್ರಮ

ಕುಂದಾಪುರ:ಯುವ ನವ ಗೆಳೆಯರ ಬಳಗ ನೀರೋಣಿ ಮರವಂತೆ ಅದರ ಮೂರನೇ ವರ್ಷದ ವಾರ್ಷಿಕೀತ್ಸವ ಸಂಭ್ರಮಾಚರಣೆ ಮತ್ತು ಸನ್ಮಾನ ಕಾರ್ಯಕ್ರಮ ಮರವಂತೆಯಲ್ಲಿ ನಡೆಯಿತು.ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ರಂಗೋಲಿ ಕಲಾವಿದೆ ಸಂಶೋಧಕರಾದ ಭಾರತಿ ಮರವಂತೆ ಉದ್ಘಾಟಿಸಿದರು,ಮಾಜಿ ತಾ.ಪಂ ಸದಸ್ಯ ಹಕ್ಕಾಡಿ ಜಗದೀಶ್ ಪೂಜಾರಿ,ಶಿಕ್ಷಕಿ ಎನ್.ಸಿಂಗಾರಿ,ಮಹಿಳಾ ಮೀನುಗಾರರ ವಿವಿಧೋದ್ಧೇಶ ಸಹಕಾರ ಸಂಘ ಮರವಂತೆ ಮುಖ್ಯ ಕಾರ್ಯನಿರ್ವಾಹಕ ಆಧಿಕಾರಿ ಶ್ರೀನಿವಾಸ ಅಡಿಗ ಕಬ್ಬೈಲು,ಮರವಂತೆ ಶ್ರೀರಾಮ ಮಂದಿರ ಮೀನುಗಾರರ ಸೇವಾ ಸಮಿತಿ ಅದ್ಯಕ್ಷ ವಾಸುದೇವ ಖಾರ್ವಿ,ರವಿ ದೇವಾಡಿಗ ಉಪ್ಪಿನಕುದ್ರು,ಜ್ಯೋತಿ […]

ಗ್ರಾಮ ಚಲೋ ಅಭಿಯಾನ ಕಾರ್ಯಕ್ರಮ

ಕುಂದಾಪುರ:ಬಿಜೆಪಿ ಬೈಂದೂರು ಮಂಡಲ ವತಿಯಿಂದ ಗ್ರಾಮ ಚಲೋ ಅಭಿಯಾನ ಕಾರ್ಯಾಗಾರ ಹೆಮ್ಮಾಡಿ ಜಯಶ್ರೀ ಸಭಾಂಗಣದಲ್ಲಿ ನಡೆಯಿತು.ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು.ಮಂಗಳೂರು ವಿಭಾಗ ಸಹ ಪ್ರಭಾರಿ ರಾಜೇಶ್ ಕಾವೇರಿ ಅಭಿಯಾನದ ಕುರಿತು ಮಾಹಿತಿ ನೀಡಿದರು.ಗ್ರಾಮ ಚಲೋ ಅಭಿಯಾನದ ಮಂಡಲ ಸಹ ಸಂಚಾಲಕ ಸಾಮ್ರಾಟ್ ಶೆಟ್ಟಿ,ಬಿಜೆಪಿ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.ಮಹೇಂದ್ರ ಪೂಜಾರಿ ಸ್ವಾಗತಿಸಿದರು.ಜಿಲ್ಲಾ ಉಪಾಧ್ಯಕ್ಷ ಆನಂದ ಖಾರ್ವಿ ವಂದಿಸಿದರು.

You cannot copy content of this page