ಪ್ರಗತಿಪರ ಕೃಷಿಕ ಸುಬ್ಬಣ್ಣ ಶೆಟ್ಟಿ ಅವರಿಗೆ ಗೌರವದ ಸನ್ಮಾನ
ಕುಂದಾಪುರ:ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಪ್ರಗತಿಪರ ಕೃಷಿಕರಾದ ಸುಬ್ಬಣ್ಣ ಶೆಟ್ಟಿ ಅವರನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟ ನಾಯ್ಕನಕಟ್ಟೆ ವತಿಯಿಂದ ಶ್ರೀಗೋಪಾಲಕೃಷ್ಣ ಕಲ್ಯಾಣ ಮಂಟಪ ನಾಗೂರುನಲ್ಲಿ ಭಾನುವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಪ್ರಗತಿಪರ ಕೃಷಿಕರಾದ ಸುಬ್ಬಣ್ಣ ಶೆಟ್ಟಿ ಅವರು ಪ್ರಸ್ತುತ ವರ್ಷದಲ್ಲಿ ಶ್ರೀ ಮೂಕಾಂಬಿಕಾ ಬೆಳೆಗಾರರ ಒಕ್ಕೂಟಕ್ಕೆ ಸುಮಾರು 250 ರಿಂದ 260 ಕ್ವಿಂಟಾಲ್ ಭತ್ತವನ್ನು ನೀಡುವುದರ ಮೂಲಕ ಬೈಂದೂರು ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.ಸುಬ್ಬಣ್ಣ […]



























































































































































































































































































































































































































































































































































































































































































































































































































































































































































































































































































































































































































































































































































































































































































