ಸೇನಾಪುರದಲ್ಲಿ ಫೆ.18 ರಂದು ಬೃಹತ್ ಪ್ರತಿಭಟನೆ

ಕುಂದಾಪುರ:ಎಕ್ಸ್‍ಪ್ರೆಸ್ ರೈಲು ನಿಲುಗಡೆ ಹೋರಾಟ ಸಮಿತಿ ನೇತೃತ್ವದಲ್ಲಿ ಸೇನಾಪುರ ನಿಲ್ದಾಣದಲ್ಲಿ ಎಕ್ಸ್‍ಪ್ರೆಸ್ ರೈಲು ನಿಲುಗಡೆಗೆ ಒತ್ತಾಯಿಸಿ ಸೇನಾಪುರ ಚಲೋ ಬೃಹತ್ ಪ್ರತಿಭಟನೆ ಫೆ.18 ರಂದು ಭಾನುವಾರ ಸಂಜೆ 3 ಗಂಟೆಗೆ ಸೇನಾಪುರ ರೈಲು ನಿಲ್ದಾಣದ ಎದುರುಗಡೆ ನಡೆಯಲಿದೆ ಎಂದು ಸೇನಾಪುರ ಎಕ್ಸ್‍ಪ್ರೆಸ್ ರೈಲು ನಿಲುಗಡೆ ಹೋರಾಟ ಸಮಿತಿ ಸಂಚಾಲಕ ರಾಜೀವ ಪಡುಕೋಣೆ ತಿಳಿಸಿದ್ದಾರೆ.ಸೇನಾಪುರ ನಿಲ್ದಾಣದಲ್ಲಿ ಎಕ್ಸ್‍ಪ್ರೆಸ್ ರೈಲು ನಿಲುಗಡೆ ಆಗ್ರಹಿಸಿ ಹಲವು ಸಂಘಟನೆಗಳ ನೇತೃತ್ವದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಗಿತ್ತು.ಸಂಘಟನೆಗಳು ಸರಕಾರಕ್ಕೆ ನೀಡಿದ ಮೂರು ತಿಂಗಳುಗಳ […]

ನರಸಿಂಹ ದೇವಾಡಿಗರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ

ಕುಂದಾಪುರ:ಸಮಾಜ ಸೇವಾ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ಲಯನ್ ಜೋನ್ ಚೇರ್ ಪರ್ಸನ್ ನರಸಿಂಹ ದೇವಾಡಿಗ ಅವರು ಅಂತಾರಾಷ್ಟ್ರೀಯ ಅತ್ಯುತ್ತಮ ವಲಯ ಅಧ್ಯಕ್ಷ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪರೀಕ್ಷಾ ಪೂರ್ವ ತಯಾರಿ ತರಬೇತಿ ಶಿಬಿರ

ಕುಂದಾಪುರ:ಲಯನ್ಸ್ ಕ್ಲಬ್ ನಾವುಂದ,ಜೆ.ಸಿ ಉಪ್ಪುಂದ ಮತ್ತು ಲಯನ್ಸ್ ಕ್ಲಬ್ ಉಪ್ಪುಂದ-ಬೈಂದೂರು ಹಾಗೂ ಸಮೃದ್ಧ ಬೈಂದೂರು,ಎಸ್‍ಡಿಎಂಸಿ ವಲಯ ಬೈಂದೂರು ಅವರ ಸಹಭಾಗಿತ್ವದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಪೂರ್ವ ತಯಾರಿ ಕಾರ್ಯಕ್ರಮ ನಾವುಂದ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ನಡೆಯಿತು.ಲಯನ್ಸ್ ಕ್ಲಬ್ ನಾವುಂದ ಅಧ್ಯಕ್ಷ ಪ್ರದೀಪ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು,ಜೆ.ಸಿ ಉಪ್ಪುಂದ ಅಧ್ಯಕ್ಷ ಮಂಜುನಾಥ ದೇವಾಡಿಗ,ಲಯನ್ಸ್ ಕ್ಲಬ್ ಉಪ್ಪ್ಪಂದ-ಬೈಂದೂರು ಅಧ್ಯಕ್ಷ ಗಿರೀಶ್ ಶ್ಯಾನಭೋಗ,ಎಸ್‍ಡಿಎಂಸಿ ಬೈಂದೂರು ವಲಯಾಧ್ಯಕ್ಷ ಹರೀಶ್ಚಂದ್ರ ಆಚಾರ್ಯ,ನಾವುಂದ ಕ್ಲಬ್ಬ್ ಕಾರ್ಯದರ್ಶಿ ಅಶೋಕ ಆಚಾರ್ಯ,ನಾವುಂದ ಕಾಲೇಜಿನ ಪ್ರಿನ್ಸಿಪಾಲ್ ಶಶಿಕಲಾ,ಜೆ.ಸಿ ಮಹಿಳಾ […]

You cannot copy content of this page