ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ,ಧಾರ್ಮಿಕ ಸಭಾ ಕಾರ್ಯಕ್ರಮ

ಕುಂದಾಪುರ:ಸಮಾಜದಲ್ಲಿ ಕಡೆಗಣಿಸಿದಂತಹ ಜನರನ್ನು ಸಾಮಾಜಿಕ,ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಸೂಕ್ತವಾದ ತರಬೇತಿ ನೀಡಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವಂತಹ ಕೆಲಸವನ್ನು ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾಡಲಾಗುತ್ತಿದೆ ಎಂದು ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ ಹೇಳಿದರು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಬೈಂದೂರು,ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ತ್ರಾಸಿ ವಲಯ ವತಿಯಿಂದ ತ್ರಾಸಿ ಅಣ್ಣಪ್ಪಯ್ಯ ಸಭಾಭವನದಲ್ಲಿ ಶನಿವಾರ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು […]

ಶಿಕ್ಷಪ್ರಭಅಕಾಡೆಮಿಕುಂದಾಪುರ:ಸಿಎಫಲಿತಾಂಶದಲ್ಲಿಶ್ರೇಷ್ಠಸಾಧನೆ

ಕುಂದಾಪುರ:-ಸಿಎ/ಸಿಎಸ್ ಪ್ರೊಫೆಷನಲ್ ಕೋರ್ಸುಗಳಿಗೆ ಗುಣಮಟ್ಟದ ತರಬೇತಿ ನೀಡುವುದರಲ್ಲಿ ಮುಂಚೂಣಿಯಲ್ಲಿರುವ ಕುಂದಾಪುರದ ಕುಂದೇಶ್ವರ ದೇವಸ್ಥಾನ ರಸ್ಥೆಯ ಸಿರಿ ಬಿಲ್ಡಿಂಗ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಸರಾಂತ ಸಂಸ್ಥೆ ಶಿಕ್ಷ ಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್ (ಸ್ಪೇಸ್) ನ ವಿದ್ಯಾರ್ಥಿಗಳು ಇನ್ಸ್ಟಿಟೂಟ್ ಆಫ್ ಚಾರ್ಟಡ್ ಅಕೌಂಟೆಂಟ್ಸ್ ಆಫ್ ಇಂಡಿಯ ಡಿಸೆಂಬರ್‌ 2023ರಲ್ಲಿ ನೆಡೆಸಿದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದುವುದರ ಮೂಲಕ ಸಾಧನೆಗೈದಿದ್ದಾರೆ.ಸಂಸ್ಥೆಯ ವಿದ್ಯಾರ್ಥಿಗಳಾದ ರಾಹುಲ್‌ ಪೂಜಾರಿ (275), ಸಮರ್ಥ ಆರ್‌ ಶೆಟ್ಟಿ (266), ಶ್ರೀವತ್ಸ ಜಿ. ಉಡುಪ (255), […]

ಬಡಾಕೆರೆ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ ಶ್ರೀಮನಹ್ಮಾ ಬ್ರಹ್ಮರಥೋತ್ಸವ

ಕುಂದಾಪುರ:ಸುಮಾರು 800 ವರ್ಷಗಳ ಇತಿಹಾಸವನ್ನು ಹೊಂದಿರುವ ಬೈಂದೂರು ತಾಲೂಕಿನ ಪ್ರಸಿದ್ಧ ಬಡಾಕೆರೆ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಲ್ಲಿ ಶ್ರೀಮನಹ್ಮಾ ಬ್ರಹ್ಮರಥೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.ಹಬ್ಬದ ಪ್ರಯುಕ್ತ ವಿಶೇಷ ಕಟ್ಟೆ ಪೂಜೆ ಹಾಗೂ ಪ್ರತಿ ಮನೆಯಲ್ಲಿ ದೀಪಾಲಂಕಾರ ರಂಗೋಲಿ ಹಾಕಿ ದೇವರನ್ನು ಬರಮಾಡಿಕೊಳ್ಳುತ್ತಾರೆ.ಕಟ್ಟಿ ಪೂಜೆ ಇಲ್ಲಿನ ವಿಶೇಷ ಆಕರ್ಷಣೆ ಬಿಂದುವಾಗಿದೆ.ಶ್ರೀ ಲಕ್ಷ್ಮೀ ಜನಾರ್ದನ ದೇವರ ರಥೋತ್ಸವ ಕಾರ್ಯಕ್ರಮದ ಪ್ರಯುಕ್ತ ದೇವರಿಗೆ ಅಲಂಕಾರ ಪೂಜೆ,ಹಣ್ಣುಕಾಯಿ,ವಿಶೇಷ ಪೂಜೆ ಸಮರ್ಪಣೆ,ಮಂಗಳಾರತಿ ಸೇವೆ,ತುಲಭಾ,ಪಂಚಕಜ್ಜಾಯ ನೈವೇದ್ಯ,ಚೂರ್ಣೋತ್ಸವ, ಮತ್ತು ಅನ್ನ ಸಂತರ್ಪಣೆ […]

You cannot copy content of this page