ಹಟ್ಟಿಯಂಗಡಿ:ಶ್ರೀ ಸಿದ್ಧಿವಿನಾಯಕ ದೇವಸ್ಥಾನ ನೂತನ ದೇವಾಲಯ ಲೋಕಾರ್ಪಣೆ

ಕುಂದಾಪುರ:ಉಡುಪಿ ಜಿಲ್ಲೆಯ ಪ್ರಸಿದ್ಧ ಕುಂದಾಪುರ ತಾಲೂಕಿನ ‌ಶ್ರೀ ಸಿದ್ಧಿವಿನಾಯಕ ಹಟ್ಟಿಯಂಗಡಿ ನೂತನ ದೇವಾಲಯ ಲೋಕಾರ್ಪಣೆ, ಬ್ರಹ್ಮಕಲಶೋತ್ಸವ ಕಾರ್ಯಕ್ರಮ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರರಾದ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀ ತೀರ್ಥ ಮಹಾಸ್ವಾಮೀಗಳ ಫರ್ಮಾನುಗ್ರಹದಿಂದ ತತ್ಕರಕಮಲಸಂಜಾತರಾದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ ನೇತೃತ್ವದಲ್ಲಿ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಬುಧವಾರ ವಿಜೃಂಭಣೆಯಿಂದ ನಡೆಯಿತು.ಮಹಾ ಅನ್ನಸಂತರ್ಪಣೆ, ಶ್ರೀದೇವರ ಬೆಳ್ಳಿರಥ ಸಮರ್ಪಣೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಿತು. ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರು ಆಶೀರ್ವಚನ ನೀಡಿ […]

ಜಯಪ್ರಕಾಶ್ ಹೆಗ್ಡೆ,ಬಿ.ಎಂ ಸುಕುಮಾರ ಶೆಟ್ಟಿ ಕಾಂಗ್ರೆಸ್ ಸೇರ್ಪಡೆ

ಕುಂದಾಪುರ:ಬಿಜೆಪಿ ಪಕ್ಷದ ಕರಾವಳಿ ಭಾಗದ ಪ್ರಭಾವಿ ನಾಕರುಗಳಾದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಾಶ್ ಹೆಗ್ಡೆ ಮತ್ತು ಬೈಂದೂರು ಕ್ಷೇತ್ರದ ಮಾಜಿ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅವರು ಕಾಂಗ್ರೆಸ್ ಪಕ್ಷವನ್ನು ಮಂಗಳವಾರ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.ಲೋಕಸಭಾ ಚುನಾವಣಾ ಹೊತ್ತಿನಲ್ಲಿ ಬಂಟ್ ಸಮುದಾಯದ ಪ್ರಬಲ ಇಬ್ಬರು ನಾಯಕರುಗಳು ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಆನೆ ಬಲ ಬಂದತಾಗಿದೆ.

ಅಧ್ಯಕ್ಷರಾಗಿ ಎಂ.ಜಿ ರಾಜೇಶ್ ಆಯ್ಕೆ

ಕುಂದಾಪುರ:ಶ್ರೀ ಸೀತಾರಾಮಚಂದ್ರ ದೇವಸ್ಥಾನ ಗಂಗೊಳ್ಳಿ ರಾಮಕ್ಷತ್ರಿಯ ಸಂಘ ಅದರ ನೂತನ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿ ಎಂ.ಜಿ ರಾಜೇಶ್ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಸಾಹÅಕಾರ್ ಉಪೇಂದ್ರ,ನಡುಮನೆ ವಾಸುದೇವ,ಉಗ್ರಾಣಿ ಗಂಗಾಧರ,ಕಾರ್ಯದರ್ಶಿ ಶ್ರೀಧರ್.ಎನ್ ಸಕ್ಲಾತಿ,ಜೊತೆ ಕಾರ್ಯದರ್ಶಿ ಶ್ರೀನಿವಾಸ ಉಗ್ರಾಣಿ,ಖಜಾಂಚಿ ನಾಗೇಶ್ ಅಪ್ಪಯ್ಯನ ಮನೆ,ಜೊತೆ ಖಜಾಂಚಿ ರಾಜಗೋಪಾಲ ಕೆ.ಹೆಚ್,ಲೆಕ್ಕ ಪರಿಶೋಧಕ ನಾಗಪ್ಪ ಸಕ್ಲಾತಿ,ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಬಿ.ನಾಗೇಶ್ ಶೇರುಗಾರ್,ಹೊಸ್ಮನೆ ಶ್ರೀಧರ,ಜಿ.ಡಿ ರಾಘವೇಂದ್ರ,ರಾಘವೇಂದ್ರ ಜಿ.ಬಿ,ರಾಧಾಕೃಷ್ಣ ಸಕ್ಲಾತಿ,ನಾಗರಾಜ ಬೆತ್ತಯ್ಯನ ಮನೆ,ಜಿ.ಡಿ ರವೀಂದ್ರ,ರಾಘವೇಂದ್ರ ಸೊನಗಾರ ಹಿತ್ಲು ಆಯ್ಕೆಯಾಗಿದ್ದಾರೆ.

You cannot copy content of this page