ದುರ್ಗಿಕೇರಿ ರುದ್ರಭೂಮಿ ಅಭಿವೃದ್ಧಿಗೆ ಸಹಾಯಧನದ ಮಂಜೂರಾತಿ ಪತ್ರ ವಿತರಣೆ

ಕುಂದಾಪುರ:ಗಂಗೊಳ್ಳಿ ಗ್ರಾಮದ ದುರ್ಗಿಕೇರಿ ಸಾರ್ವಜನಿಕ ಹಿಂದೂ ರುದ್ರಭೂಮಿ ಅಭಿವೃದ್ಧಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿರುವ 2.5 ಲಕ್ಷ.ರೂ ಸಹಾಯಧನದ ಮಂಜೂರಾತಿ ಪತ್ರವನ್ನು ಗ್ರಾಮಾಭಿವೃದ್ಧಿ ಯೋಜನೆ ಬೈಂದೂರು ತಾಲೂಕು ಯೋಜನಾಧಿಕಾರಿ ವಿನಾಯಕ ಪೈ ಅವರು ಶ್ರೀವೀರೇಶ್ವರ ಸೇವಾ ಟ್ರಸ್ಟ್‍ನ ಪ್ರಮುಖರಿಗೆ ಗುರುವಾರ ಹಸ್ತಾಂತರಿಸಿದರು.ತ್ರಾಸಿ ವಲಯ ಮೇಲ್ವಿಚಾರಕ ಚಂದ್ರು,ವೀರೇಶ್ವರ ಸೇವಾ ಟ್ರಸ್ಟಿನ ಅಧ್ಯಕ್ಷ ಅಕ್ಷಯ್,ಉಪಾಧ್ಯಕ್ಷ ವಿವೇಕ್ ಬಿ,ಗುತ್ತಿಗೆದಾರ ರಾಜೇಂದ್ರ ಶೇರುಗಾರ್,ಕಾರ್ತಿಕ್,ರಾಘವೇಂದ್ರ ಗಾಣಿಗ,ಯಶವಂತ ಗಂಗೊಳ್ಳಿ,ನವೀನ್ ಗಂಗೊಳ್ಳಿ,ಅನಿಲ್,ಪ್ರೀತೇಶ್,ವಿಘ್ನೇಶ್,ದಿಲೀಪ್,ಚೇತನ್ ಮತ್ತಿತರರು ಉಪಸ್ಥಿತರಿದ್ದರು.

ಶ್ರೀಗಣಪತಿ ದೇವಸ್ಥಾನ ಚಿತ್ತಾರಿ ಹೆಮ್ಮುಂಜೆ,ಶಿಲಾಮಯ ದೇಗುಲ ಲೋಕಾರ್ಪಣೆ ಪುನರ್ ಪ್ರತಿಷ್ಠೆ

ಕುಂದಾಪುರ:ಬೈಂದೂರು ತಾಲೂಕಿನ ನಾಡ ಗ್ರಾಮದ ಚಿತ್ತಾರಿ ಹೆಮ್ಮುಂಜೆಯಲ್ಲಿ,ಹೆಮ್ಮುಂಜೆ ಮನೆಯವರು ನೂತನವಾಗಿ ನಿರ್ಮಿಸಿರುವ ಇತಿಹಾಸ ಪ್ರಸಿದ್ಧ ಶ್ರೀಗಣಪತಿ ದೇವಸ್ಥಾನದ ಶಿಲಾಮಯ ದೇಗುಲ ಲೋಕಾರ್ಪಣೆ,ಶ್ರಿದೇವರ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅರ್ಚಕರಾದ ಮಂಜುನಾಥ್ ಭಟ್ ನೇತೃತ್ವದಲ್ಲಿ ಗುರುವಾರ ವಿಜೃಂಭಣೆಯಿಂದ ನಡೆಯಿತು.ಹೆಮ್ಮುಂಜೆ ಚಿತ್ತಾರಿ ಶ್ರೀಗಣಪತಿ ದೇವರ ಪುನರ್ ಪ್ರತಿಷ್ಠೆ ಕಾರ್ಯಕ್ರಮದ ಅಂಗವಾಗಿ ಶ್ರೀದೇವರಿಗೆ ಮಹಾಪೂಜೆ,ಮಂತ್ರಾಕ್ಷತೆ,ತೀರ್ಥಪ್ರಸಾದ ವಿತರಣೆ,ಅಲಂಕಾರ ಪೂಜೆಯನ್ನು ಸಲ್ಲಿಸಲಾಯಿತು.ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು,ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಶ್ರೀದೇವರ ಪ್ರಸಾದವನ್ನು ಸ್ವೀಕರಿಸಿದರು.ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಿತು.ದೇಗುಲದ […]

ಚೆಕ್ ಪೋಸ್ಟ್ ಗೆ ಡಿಸಿ ಭೇಟಿ,ಬಿಗಿ ಬಂದೋಬಸ್ತ್

ಕುಂದಾಪುರ:ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಅವರು ಮಂಗಳವಾರ ಕುಂದಾಪುರ ತಾಲೂಕಿನ ಹಾಲಾಡಿ,ಹೊಸಂಗಡಿ,ಸಾಯಿಬ್ರಕಟ್ಟೆ ಚೆಕ್ ಪೋಸ್ಟ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಸಂದರ್ಭದಲ್ಲಿ ಸಹಾಯಕ ಕಮಿಷನರ್ ರಶ್ಮಿ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ.ಕೆ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.ಲೋಕಸಭಾ ಸಾರ್ವತ್ರಿಕ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಚೆಕ್ ಪೋಸ್ಟ್ ಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು ವಾಹನಗಳನ್ನು ತಿವೃವಾಗಿ ತಪಾಸಣೆ ಮಾಡಲಾಗುತ್ತಿದೆ.ದಿನದ 24 ಗಂಟೆಯೂ ಪಾಳಿ ಆಧಾರದಲ್ಲಿ ಸಿಬ್ಬಂದಿಗಳು ಕೆಲಸವನ್ನು ನಿರ್ವಹಿಸುತ್ತಿದ್ದಾರೆ.ಬಿರು ಬಿಸಿಲಿನ ತಾಪ ಚುನಾವಣಾ ಸಿಬ್ಬಂದಿಗಳನ್ನು ಕಾಡುತ್ತಿದೆ.

You cannot copy content of this page