ಕಂಪ್ಯೂಟರ್ ತರಗತಿ ಕೋಣೆ ಉದ್ಘಾಟನೆ

ಕುಂದಾಪುರ:ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೂಜಾಡಿ-2 ಬಗ್ವಾಡಿಯಲ್ಲಿ ಕಂಪ್ಯೂಟರ್ ತರಗತಿ ಉದ್ಘಾಟನೆ ಕಾರ್ಯಕ್ರಮ ಸರಳವಾಗಿ ಶುಕ್ರವಾರ ನಡೆಯಿತು.ಆಭರಣ ಪೌಂಡೇಶನ್ ಶ್ರೀರಂಗನಾಥ್ ಅವರು ಕಂಪ್ಯೂಟರ್ ತರಗತಿ ಕೋಣೆಯನ್ನು ಉದ್ಘಾಟಿಸಿ ಶುಭಹಾರೈಸಿದರು.ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಮಂಜುನಾಥ್ ಪುತ್ರನ್,ಶತಮಾನೋತ್ಸವ ಸಮಿತಿ ಅಧ್ಯಕ್ಷ ರಾಜೀವ ಶೆಟ್ಟಿ,ನಿವೃತ್ತ ಐಎಎಸ್ ಅಧಿಕಾರಿ ಬಿ.ಎನ್ ಶೆಟ್ಟಿ,ನಿವೃತ್ತ ಬ್ಯಾಂಕ್ ಅಧಿಕಾರಿ ಸೂಲಿಯಣ್ಣ,ಪುರೋಹಿತರಾದ ಮಂಜುನಾಥ್ ಭಟ್ ಹರೇಗೋಡು,ಎಸ್‍ಡಿಎಂಸಿ ಸದಸ್ಯರು,ಹಳೆ ವಿದ್ಯಾರ್ಥಿಗಳು,ಅಂಗನವಾಡಿ ಕಾರ್ಯಕರ್ತೆಯರು,ಶಿಕ್ಷಕವೃಂದವರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಮುಖ್ಯ ಶಿಕ್ಷಕಿ ಶೈಲಜಾ ಶೆಟ್ಟಿ ಸ್ವಾಗತಿಸಿದರು.ಗೌರವ ಶಿಕ್ಷಕಿ ಸ್ವಾತಿ ನಿರೂಪಿಸಿದರು.ಸಹಶಿಕ್ಷಕಿ ಸತ್ಯವತಿ ವಂದಿಸಿದರು.ಆಭರಣ ಪೌಂಡೇಶನ್‍ನ […]

ಮಾ.27 ರಂದು ಶ್ರೀ ಮಹಾಗಣಪತಿ ದೇವಸ್ಥಾನ ಹರ್ಕೂರು,ಬ್ರಹ್ಮಕಲಶೋತ್ಸವ,ಪುನರ್ ಪ್ರತಿಷ್ಠೆ

ಕುಂದಾಪುರ:ತಾಲೂಕಿನ ಹರ್ಕೂರು ಗ್ರಾಮದ ಶ್ರೀ ಮಹಾಗಣಪತಿ ದೇವಸ್ಥಾನದ ನೂತನ ಶಿಲಾದೇಗುಲ ಸಮರ್ಪಣೆ,ಬ್ರಹ್ಮಕಲಶೋತ್ಸವ ಹಾಗೂ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮಾ.26 ರಿಂದ ಮಾ.28 ವರಗೆ ನಡೆಯಲಿದೆ.ಹರ್ಕೂರು ಶ್ರೀಮಹಾಗಣಪತಿ ದೇವರ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಅಂಗವಾಗಿಮಾ.25 ರಂದು ಶ್ರೀದೇವರ ಬೆಳ್ಳಿ ಪ್ರಭಾವಳಿ ವೈಭವದ ಮೆರವಣಿಗೆ ಜರುಗಲಿದೆ.ಮಾ.26 ರಂದು ಮಂಗಳವಾರ ಶ್ರೀ ಗಣಪತಿ ದೇವರ ಪುನರ್ ಪ್ರತಿಷ್ಠೆ ಹಾಗೂ ಶಿಲಾಮಯ ದೇಗುಲ ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ.ಮಾ.27 ರಂದು ಬುಧವಾರ […]

ಅಕ್ರಮ‌ ಮದ್ಯ ವಶ,ಆರೋಪಿಗಳು ವಶಕ್ಕೆ

ಮಂಗಳೂರು:ಕೊಯ್ಯೂರು ಗ್ರಾಮದ ನೆಕ್ಕಿಲ್‌ ಬೆಳಾಲು ಬಳಿ ರಸ್ತೆಯ ಬದಿ, ಸಾರ್ವಜನಿಕ ಸ್ಥಳದಲ್ಲಿ, ಮಾರಾಟದ ಉದ್ದೇಶದಿಂದ ಅಕ್ರಮವಾಗಿ ಮದ್ಯ ಸಂಗ್ರಹಿಸಿಟ್ಟುಕೊಂಡಿದ್ದ, ಕೊಯ್ಯೂರು ಗ್ರಾಮದ ವಸಂತ (42) ಎಂಬಾತನನ್ನು‌ ಬೆಳ್ತಂಗಡಿ ಪೊಲೀಸ್‌ ಠಾಣಾ ಪೊಲೀಸ್‌ ಉಪ ನಿರೀಕ್ಷಕ ಮುರುಳೀಧರ ನಾಯ್ಕ ಹಾಗೂ ಸಿಬ್ಬಂದಿಗಳು ಮಾ.21ರಂದು ವಶ ಪಡಿಸಿಕೊಂಡಿದ್ದಾರೆ. 90 ಎಂ.ಎಲ್.ನ 2,125 ರೂ.ಮೌಲ್ಯದ 53 ಸ್ಯಾಚೆಟ್‌ ಗಳನ್ನು, ಮದ್ಯ ಮಾರಾಟದಿಂದ ಸಂಗ್ರಹಿಸಿದ್ದ, 230 ರೂ.ನಗದು ಸ್ವಾಧಿನಪಡಿಸಿಕೊಂಡು, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

You cannot copy content of this page