ಅಪಾಯಕಾರಿ ಮರ,ವಿದ್ಯುತ್ ಕಂಬ ಸ್ಥಳಾಂತರಕ್ಕೆ ಆಗ್ರಹ

ಕುಂದಾಪುರ:ತಾಲೂಕಿನ ಆಲೂರು-ಮುಳ್ಳಿಕಟ್ಟೆ ಮುಖ್ಯ ರಸ್ತೆ ಅಂಚಿನಲ್ಲಿದ್ದ ಅಪಾಯಕಾರಿ ವಿದ್ಯುತ್ ಕಂಬ ಸಹಿತ ಮರವನ್ನು ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಸ್ಥಳಾಂತರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.ಸಂಪೂರ್ಣವಾಗಿ ಹದಗೆಟ್ಟು ಹೋಗಿರುವ ಆಲೂರು-ಮುಳ್ಳಿಕಟ್ಟೆ ಮುಖ್ಯ ರಸ್ತೆ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು ಒಂದನೆ ಹಂತದ ಕಾಮಗಾರಿ ಮುಗಿದಿದೆ.ರಸ್ತೆ ಅಭಿವೃದ್ಧಿ ಕಾರ್ಯದ ಸಂದರ್ಭದಲ್ಲಿ ರಸ್ತೆ ಅಂಚಿನಲ್ಲಿದ್ದ ಅಪಾಯಕಾರಿ ವಿದ್ಯುತ್ ಕಂಬ ಮತ್ತು ಮರವವನ್ನು ತೆರವುಗೊಳಿಸದೆ ಗುತ್ತಿಗೆದಾರರು ಕಾಮಗಾರಿ ಕೆಲಸವನ್ನು ನಡೆಸಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.ರಸ್ತೆ ಅಂಚಿನಲ್ಲಿರುವ ಮರವನ್ನು ತೆರವು ಮಾಡದೆ ಬುಡದವರೆಗೆ ಡಾಮರು ಹಾಕಿ ಕೆಲಸವನ್ನು […]

ಹೆಮ್ಮಾಡಿ:ರೋಗ ಬಾಧೆಯಿಂದ ತೆಂಗು ಬೆಳೆ ತತ್ತರ

ಕುಂದಾಪುರ:ತಾಲೂಕಿನ ಕನ್ನಡ ಕುದ್ರು ಹಾಗೂ ಮುವತ್ತು ಮುಡಿ ಭಾಗದಲ್ಲಿ ತೆಂಗಿನ ಮರಕ್ಕೆ ತಗುಲಿದ ವಿಚಿತ್ರ ರೋಗದಿಂದ ತೆಂಗಿನ ಗರಿಗಳು ಸುಳಿ ತನಕ ಕೆಂಪಾಗಿ ಕರಟಿ ಹೋಗಿದೆ.5 ರಿಂದ 6 ಸಾವಿರಕ್ಕೂ ಅಧಿಕ ತೆಂಗಿನ ಮರಗಳು ರೋಗ ಬಾಧೆಯಿಂದ ತತ್ತರಿಸಿದ್ದು ರೈತರು ಆತಂಕಿತರಾಗಿದ್ದಾರೆ.ತೆಂಗಿನ ಮರಕ್ಕೆ ಅಂಟಿಕೊಂಡಿದ್ದ ರೋಗ ಬಾಧೆಯನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳ ಬೇಕೆಂದು ರೈತರು ಆಗ್ರಹಿಸಿದ್ದಾರೆ.ಹಸಿರಿನಿಂದ ಕಂಗೊಳಿಸುತ್ತಿದ್ದ ತೆಂಗಿನ ಮರದ ಗರಿಗಳು ಇದ್ದಕ್ಕಿದಂತೆ ಸುಳಿ ತನಕ ಕೆಂಪಾಗಿ ಕರಟಿ ಒಣಗಿ ಜೊತು ಬೀಳುತ್ತಿದೆ.ತೆಂಗಿನ ಮರದಲ್ಲಿ ಹಸಿರಿನ […]

ಹೋಮ್ ಮೇಡ್ ಚಾಕಲೇಟ್ ತರಬೇತಿ ಸಮಾರೋಪ

ಕುಂದಾಪುರ:ರಾಷ್ಟೀಯ ಕೃಷಿ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ಮತ್ತು ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲ ಪ್ರಾಯೋಜಕತ್ವದಲ್ಲಿ ಹಾಗೂ ಹೊಸಾಡು ಗ್ರಾಮ ಪಂಚಾಯಿತಿ ಮತ್ತು ಸೌಪರ್ಣಿಕಾ ಸಂಜೀವಿನಿ ಒಕ್ಕೂಟ ಹೊಸಾಡು ಸಹಭಾಗಿತ್ವದಲ್ಲಿ ಹತ್ತು ದಿನಗಳ ಕಾಲ ಹೊಸಾಡು ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆದ ಹೋಮ್ ಮೇಡ್  ಚಾಕಲೇಟ್ ಮತ್ತು ಬೇಕರಿ ತಿನಿಸುಗಳ ತಯಾರಿ ಉತ್ಪನ್ನಗಳ ತರಬೇತಿ ಸಮಾರೋಪ ಕಾರ್ಯಕ್ರಮ ಶನಿವಾರ ನಡೆಯಿತು.ಕುಂದಾಪುರ ತಾಲೂಕು ಪಂಚಾಯಿತಿ ಇಒ ಶಶಿಧರ,ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಯತೀಶ್,ಸೌಪರ್ಣಿಕಾ ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಯಶೋಧ,ಚಿತ್ತಾರ ಸಂಜೀವಿನಿ ಒಕ್ಕೂಟ […]

You cannot copy content of this page