ಅಕ್ರಮ‌ ಮದ್ಯ ವಶ,ಆರೋಪಿಗಳು ವಶಕ್ಕೆ

ಮಂಗಳೂರು:ಕೊಯ್ಯೂರು ಗ್ರಾಮದ ನೆಕ್ಕಿಲ್‌ ಬೆಳಾಲು ಬಳಿ ರಸ್ತೆಯ ಬದಿ, ಸಾರ್ವಜನಿಕ ಸ್ಥಳದಲ್ಲಿ, ಮಾರಾಟದ ಉದ್ದೇಶದಿಂದ ಅಕ್ರಮವಾಗಿ ಮದ್ಯ ಸಂಗ್ರಹಿಸಿಟ್ಟುಕೊಂಡಿದ್ದ, ಕೊಯ್ಯೂರು ಗ್ರಾಮದ ವಸಂತ (42) ಎಂಬಾತನನ್ನು‌ ಬೆಳ್ತಂಗಡಿ ಪೊಲೀಸ್‌ ಠಾಣಾ ಪೊಲೀಸ್‌ ಉಪ ನಿರೀಕ್ಷಕ ಮುರುಳೀಧರ ನಾಯ್ಕ ಹಾಗೂ ಸಿಬ್ಬಂದಿಗಳು ಮಾ.21ರಂದು ವಶ ಪಡಿಸಿಕೊಂಡಿದ್ದಾರೆ. 90 ಎಂ.ಎಲ್.ನ 2,125 ರೂ.ಮೌಲ್ಯದ 53 ಸ್ಯಾಚೆಟ್‌ ಗಳನ್ನು, ಮದ್ಯ ಮಾರಾಟದಿಂದ ಸಂಗ್ರಹಿಸಿದ್ದ, 230 ರೂ.ನಗದು ಸ್ವಾಧಿನಪಡಿಸಿಕೊಂಡು, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಪೆಟ್ರೋಲಿಯಂ ಪೈಪ್ ಲೈನಿಗೆ ಕನ್ನಕೊರೆದು ಪೆಟ್ರೋಲ್ ಕಳ್ಳತನ

ಮಂಗಳೂರು;ಪುದುವೆಟ್ಟು ಎಂಬಲ್ಲಿ ಹಾದು ಹೋಗಿರುವ ಪೆಟ್ರೋಲಿಯಂ ಪೈಫ್ ಲೈನ್ ಗೆ ಕನ್ನ ಕೊರೆದು ಲಕ್ಷಾಂತರ ಮೌಲ್ಯದ ಪೆಟ್ರೋಲ್ ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.ಪೈನ್ ಲೈನ್ ಕೊರೆದು ಪೆಟ್ರೋಲ್ ಕಳ್ಳತನ ಮಾಡಿರುವ ಬಗ್ಗೆಸಂಬಂಧಿಸಿದ ಕಂಪನಿಯವರು ನೀಡಿರುವ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಈ ಬಗ್ಗೆ ಪೆಟ್ರೋನೆಟ್ ಎಂ ಹೆಚ್ ಬಿ ಲಿಮಿಟೆಡ್ ನ ನೆರಿಯದ ಸ್ಟೇಶನ್ ಇನ್ ಚಾರ್ಜ್ ಆಗಿರುವ ರಾಜನ್ ಅವರು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದು ಮಂಗಳೂರು ಹಾಸನ್ ಬೆಂಗಳೂರು ಪೆಟ್ರೋನೆಟ್ ಪೈಪ್ […]

ತಪ್ಪಿದ ಬಾರಿ ಅನಾಹುತ,ಏಳು ಮೀನುಗಾರರ ರಕ್ಷಣೆ

ಕುಂದಾಪುರ:ಗಂಗೊಳ್ಳಿಯಿಂದ 15 ನಾಟಿಕಲ್ ಮೈಲು ದೂರದಲ್ಲಿ ಆಳಸಮುದ್ರ ಮೀನುಗಾರಿಕೆ ಮಾಡುತ್ತಿದ್ದ ಸಮಯದಲ್ಲಿ ಬೋಟ್‍ನೊಳಗೆ ನೀರು ನುಗ್ಗಿದ ಪರಿಣಾಮ ಅಪಾಯಕ್ಕೆ ಸಿಲುಕಿದ ಏಳು ಮೀನುಗಾರರನ್ನು ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದ ಭಾರತೀಯ ಕೋಸ್ಟ್ ಗಾರ್ಡ್ ಕಂಟ್ರೋಲ್ ತಂಡದವರು ಹಾಗೂ ಸ್ಥಳೀಯ ಮೀನುಗಾರರು ರಕ್ಷಿಸಿದ ಘಟನೆ ಬುಧವಾರ ನಡೆದಿದೆ.ಉತ್ತರ ಕನ್ನಡ ಮೂಲದ ಕಿರಣ ನಾರಾಯಣ ಹರಿಕಂತ್ರ,ದೇವರಾಜು ಈಶ್ವರ ಹರಿಕಂತ್ರ,ಅರವಿಂದ ಗಣಪತಿ ಹರಿಕಂತ್ರ,ನಾಗೇಶ ಗಣಪಯ್ಯ ಹರಿಕಂತ್ರ,ದಿಲ್‍ಸಿಂಗ್ ಕಾಲು,ಚಂದ್ರ ಶೇಖರ ದುರ್ಗಾ ಮೊಗೇರ,ಸೋಮೇಶ್ವರ ಹರಿಕತಂತ್ರ ರಕ್ಷಿಸಲ್ಪಟ್ಟವರು.ಮೀನುಗಾರಿಕೆ ಮಾಡುತ್ತಿದ್ದ ಸಂದರ್ಭ ಬೋಟ್‍ನ ಇಂಜಿನ್ ಕೊಠಡಿ ವಿಭಾಗದಲ್ಲಿ […]

You cannot copy content of this page