ಮಾರ್ಚ್.27 ರಂದು ಹರ್ಕೂರು ಶ್ರೀಮಹಾಗಣಪತಿ ದೇವರ ಪುನರ್ ಪ್ರತಿಷ್ಠೆ

ಕುಂದಾಪುರ:ತಾಲೂಕಿನ ಹರ್ಕೂರು ಶ್ರೀಮಹಾಗಣಪತಿ ದೇವರ ಪುನರ್ ಪ್ರತಿಷ್ಠೆ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಬುಧಾವಾರ ಬೆಳಿಗ್ಗೆ 10.35ಕ್ಕೆ ನಡೆಯುವ ವೃಷಭ ಲಗ್ನ ಸುಮುಹೂರ್ತದಲ್ಲಿ ನಡೆಯಲಿದೆ.ಶ್ರೀದೇವರ ಪುನರ್ ಪ್ರತಿಷ್ಠೆ ಅಂಗವಾಗಿ ಅಷ್ಟಬಂಧ ಪ್ರತಿಷ್ಠಾ ಮಹೋತ್ಸವ,ಜೀವ ಕುಂಭಾಭಿಷೇಕ,ಪ್ರತಿಷ್ಠಾ ಕಲಶಾಭಿಷೇಕ,ಕಲಶಾಭಿಷೇಕ,ಮಹಾಪೂಜೆ,ಪ್ರಸಾದ ವಿತರಣೆ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ.ಮಾರ್ಚ್.28 ರ ಗುರುವಾರದಂದು ಬಹ್ಮಕಲಶಾಭಿಷೇಕ,ಮಹಾಪೂಜೆ,ಮಹಾಮಂಗಳಾರತಿ,ತೀರ್ಥಪ್ರಸಾದ ವಿತರಣೆ,ಮಹಾ ಅನ್ನಸಂತರ್ಪಣೆ ನಡೆಯಲಿದೆ.ಪೂರ್ವಾಹ್ನ 11 ಘಂಟೆ ಧಾರ್ಮಿಕ ಸಭಾ ಕಾರ್ಯಕ್ರಮ ಸರಳವಾಗಿ ಜರುಗಲಿದೆ.

ಶ್ರೀಸ್ವಾಮಿ ಬ್ರಹ್ಮಲಿಂಗೇಶ್ವರ ಮಹಿಳಾ ಭಜನಾ ಮಂಡಳಿ ಉದ್ಘಾಟನೆ

ಕುಂದಾಪುರ:ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನ ಪರಿಷತ್ತ್ ಬೈಂದೂರು ತಾಲೂಕು,ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೈಂದೂರು,ಪಡುಕೋಣೆ ವಲಯ ಅವರ ಸಹಯೋಗದೊಂದಿಗೆ ಶ್ರೀಸ್ವಾಮಿ ಬ್ರಹ್ಮಲಿಂಗೇಶ್ವರ ನೂತನ ಮಹಿಳಾ ಭಜನಾ ಮಂಡಳಿ ಮಂಕಿ ಗುಜ್ಜಾಡಿ ಅದರ ಉದ್ಘಾಟನಾ ಕಾರ್ಯಕ್ರಮ ಭಾನುವಾರ ಮಂಕಿಯಲ್ಲಿ ನಡೆಯಿತು.ಹಿರಿಯ ಭಜನಾ ಭಜಕರಾದ ಕೃಷ್ಣ ನಾಯ್ಕ ಉದ್ಘಾಟಿಸಿದರು.ಭಜನಾ ಪರಿಷತ್ತ್ ಅಧ್ಯಕ್ಷ ಕೃಷ್ಣ ಪೂಜಾರಿ ಶಿರೂರು ಅಧ್ಯಕ್ಷತೆ ವಹಿಸಿದ್ದರು.ಯೋಜನಾಧಿಕಾರಿ ವಿನಾಯಕ ಪೈ,ತಾಲೂಕು ವಲಯ ಸಂಯೋಜಕರಾದ ಮಂಜುನಾಥ್ ಊಳ್ಳೂರು,ಮಂಜು ಪೂಜಾರಿ ಗೋಳಿಹೊಳೆ,ಬಾಬು ದೇವಾಡಿಗ ಉಪ್ಪÅಂದ,ಪೂರ್ಣಿಮಾ ಕೊಲ್ಲೂರು ಉಪಸ್ಥಿತರಿದ್ದರು.ಮಂಜುನಾಥ ಹೊಸಾಡು […]

ಮನೆ ಮನೆ ಹೋಳಿ ಕೋಲಾಟ

ಗಂಗೊಳ್ಳಿ:ಹೋಳಿ ಹಬ್ಬದ ಅಂಗವಾಗಿ ಮಲ್ಲಾರ್ ಬೆಟ್ ಬಂದರ್ ಗಂಗೊಳ್ಳಿ ಹೋಳಿ ತಂಡದವರಿಂದ ಹೋಳಿ ಕೋಲಾಟ ಕುಣಿತ ಸಂಪ್ರದಾಯದಂತೆ ಸೋಮವಾರ ನಡೆಯಿತು.ಹೋಳಿ ತಂಡದ ಸದಸ್ಯರು ಕೋಲಾಟ ಆಡುತ್ತಾ ಪ್ರತಿ ಮನೆಗೆ ತೆರಳುವುದು ವಾಡಿಕೆ ಆಗಿದೆ.ಗಂಗೊಳ್ಳಿ ಭಾಗದ ಖಾರ್ವಿ ಸಮುದಾಯದ ಬಾಂಧವರಿಗೆ ಹೋಳಿ ಹಬ್ಬ ಬಹಳಷ್ಟು ಪ್ರಮುಖವಾದ ಹಬ್ಬವಾಗಿದೆ.

You cannot copy content of this page