ಶುಭದಾ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರ ಏಪ್ರಿಲ್.15 ರಂದು ಶುಭಾರಂಭಗೊಳ್ಳಲಿದೆ

ಕುಂದಾಪುರ:ಕರಾವಳಿ ಮತ್ತು ಮಲೆನಾಡು ಪ್ರದೇಶದೊಂದಿಗೆ ಸಮ್ಮಿಲನಗೊಂಡಿರುವ ಕುಂದಾಪುರ ಮತ್ತು ಬೈಂದೂರು ತಾಲೂಕಿನ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಗುಣಮಟ್ಟದ ಆಧುನಿಕ ಶಿಕ್ಷಣ ಸಿಗಬೇಕು ಎನ್ನುವ ಉದ್ದೇಶವನ್ನು ಇಟ್ಟುಕೊಂಡಿರುವ ಶಿಕ್ಷಣ ಕ್ರಾಂತಿ ಹರಿಕಾರ ಎಂದೆ ಮನೆ ಮಾತಾಗಿರುವ ಹೆಮ್ಮಾಡಿ ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರು ಮತ್ತು ಪ್ರಿನ್ಸಿಪಾಲ್ ಗಣೇಶ ಮೊಗವೀರ ಅವರ ಸಾರಥ್ಯದಲ್ಲಿ ಹಾಗೂ ಸಮರ್ಪಣನ ಎಜುಕೇಶನ್ ಟ್ರಸ್ಟ್ ಹೆಮ್ಮಾಡಿ ಆಡಳಿತದಲ್ಲಿ ಹೊಸ ಕಲ್ಪನೆಯೊಂದಿಗೆ ಶುಭದಾ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರ ಏಪ್ರಿಲ್ 15 ರ […]

ಮುಳ್ಳಿಕಟ್ಟೆ-ರಕ್ಷಿತಾ ಭಂಡಾರಿಗೆ 91% ಅಂಕ

ಕುಂದಾಪುರ:ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಕೊಪ್ಪರಿಗೆ ಬೆಟ್ಟು ನಿವಾಸಿ ರಾಜು ಭಂಡಾರಿ ಮತ್ತು ಗುಲಾಬಿ ಅವರ ಪುತ್ರಿ ರಕ್ಷಿತಾ ಭಂಡಾರಿ ಅವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 546 (91%) ಅಂಕಗಳನ್ನು ಪಡೆಯುವುದರ ಮುಖೇನ ಉತ್ತಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.ಕುಂದಾಪುರ ಸೆಂಟ್ ಮೇರಿಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ.

ಶ್ರೀರಾಮ ದೇವರಿಗೆ ಹಸಿರು ಹೊರೆ ಕಾಣಿಕೆ ಸಮರ್ಪಣೆ

ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಕಂಚುಗೋಡು ಶ್ರೀರಾಮ ದೇವಸ್ಥಾನದ ಸುವರ್ಣ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಹಸಿರು ಹೊರೆಕಾಣಿಕೆ ಮೆರವಣಿಗೆ ತ್ರಾಸಿ ಕೊಂಕಣಿ ಖಾರ್ವಿ ಸಭಾಭವನದಿಂದ ಹೊಸಪೇಟೆ ಮಾರ್ಗವಾಗಿ ಶ್ರೀರಾಮ ದೇವಸ್ಥಾನದ ವರಗೆ ಅದ್ದೂರಿಯಾಗಿ ಶುಕ್ರವಾರ ನಡೆಯಿತು.ಚಂಡೆವಾದನ,ಪೂರ್ಣ ಕುಂಭ ಸ್ವಾಗತದೊಂದಿಗೆ ಹಸಿರು ಹೊರೆಕಾಣಿಕೆ ಮೆರವಣಿಗೆಯನ್ನು ಸ್ವಾಗತಿಸಿಕೊಳ್ಳಲಾಯಿತು.ಮಹಿಳೆಯರು,ಪುರುಷರು ಸಮವಸ್ತ್ರವನ್ನು ಧರಿಸಿದ್ದರು.ಸುಮಾರು ಐವತ್ತಕ್ಕೂ ಅಧಿಕ ವಾಹನಗಳು ಹಸಿರು ಹೊರೆ ಕಾಣಿಕೆಯನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದವು.ಅನ್ನಸಂತರ್ಪಣೆ ಭಜನಾ ಕಾರ್ಯಕ್ರಮ ನಡೆಯಿತು.ಏಪ್ರಿಲ್ 13 ರ ಶನಿವಾರ ದಂದು ಶ್ರೀರಾಮ ದೇವಸ್ಥಾನದಲ್ಲಿ ಶ್ರೀರಾಮ ತಾರಕ ಹೋಮ,ಅನ್ನಸಂರ್ಪಣೆ ಕಾರ್ಯಕ್ರಮ,ಸಂಜೆ […]

You cannot copy content of this page