ಸರ್ಪ ಸಂಸ್ಕಾರ,ಆಶ್ಲೇಷ ಬಲಿ ಕಾರ್ಯಕ್ರಮ

ಕುಂದಾಪುರ:ತಾಲೂಕಿನ ಕನ್ಯಾನ ಗ್ರಾಮದ ಶ್ರೀಕ್ಷೇತ್ರ ಕೂಡ್ಲು ಬಾಡಬೆಟ್ಟು ಶ್ರೀಶನೀಶ್ವರ ಮತ್ತು ಶ್ರೀ ಚೌಡೇಶ್ವರಿ ದೇವಸ್ಥಾನದ ನಾಗಸನ್ನಿಧಾನದಲ್ಲಿ ನಡೆಯಲಿರುವ ಅಷ್ಟಪವಿತ್ರ ನಾಗ ಮಂಡಲೋತ್ಸವ ಕಾರ್ಯಕ್ರಮದ ಅಂಗವಾಗಿ ಸರ್ಪಸಂಸ್ಕಾರ,ಶಾಖಲ ಋಕ್ಸಂಹಿತಾ ಯಾಗ,ಆಯುತ ಸಂಖ್ಯಾ ತಿಲಾಹೋಮ,ದಶದಾನ,ಗೋದಾನ,ಕಲಶಾಭಿಷೇಕ,ಮಹಾಪೂಜೆ,ಆಶ್ಲೇಷ ಬಲಿ,ಅನ್ನಸಂತರ್ಪಣೆ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶನಿವಾರ ನಡೆಯಿತು.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಜಯರಾಮ ಸ್ವಾಮಿ,ನಾಗಮಂಡಲೋತ್ಸವ ಸಮಿತಿ ಅವರು ಗ್ರಾಮಸ್ಥರು ಉಪಸ್ಥಿತರಿದ್ದರು.ಇಂದು ಅಷ್ಟಪವಿತ್ರ ನಾಗಮಂಡಲೋತ್ಸವ:ಶ್ರೀಕ್ಷೇತ್ರ ಕೂಡ್ಲು ಬಾಡಬೆಟ್ಟು ಶ್ರೀಶನೀಶ್ವರ ಮತ್ತು ಶ್ರೀ ಚೌಡೇಶ್ವರಿ ದೇವಸ್ಥಾನದಲಿ ಅಷ್ಟಪವಿತ್ರ ನಾಗಮಂಡಲೋತ್ಸವ,ಮಹಾ ಅನ್ನಸಂತರ್ಪಣೆ ಭಾನುವಾರ ಜರುಗಲಿದೆ.ಕುಂದಾಪುರ ಮತ್ತು […]

ಶ್ರೀಮಹಾಂಕಾಳಿ ಅಮ್ಮನವರಪಲ್ಲಕ್ಕಿ ಉತ್ಸವ ಪುರಮೆರವಣಿಗೆ

ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಕಂಚುಗೋಡು ಶ್ರೀರಾಮ ದೇವಸ್ಥಾನದ ಸುವರ್ಣ ಮಹೋತ್ಸವ ಅಂಗವಾಗಿ ಗಂಗೊಳ್ಳಿ ಶ್ರೀಮಹಾಂಕಾಳಿ ಅಮ್ಮನವರ ಪಲ್ಲಕಿ ಉತ್ಸವ ಪುರಮೆರವಣಿಗೆ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶನಿವಾರ ನಡೆಯಿತು.ಶ್ರೀರಾಮ ತಾರಕ ಹೋಮ,ಅನ್ನಸಂತರ್ಪಣೆ ಕಾರ್ಯಕ್ರಮ,ಭಜನಾ ಕಾರ್ಯಕ್ರಮ ಜರುಗಿತು.ಏಪ್ರಿಲ್ 15 ರ ಸೋಮವಾರದಂದು ಸಮುದ್ರ ನೀರಾಜನ,ಸಾಗರೇಶ್ವರ ಪೂಜೆ ನಡೆಯಲಿದೆ.

ಮಹಿಳೆಗೆ ಕಾರು ಡಿಕ್ಕಿ,ಆಸ್ಪತ್ರೆಗೆ ದಾಖಲು

ಕುಂದಾಪುರ:ತಾಲೂಕಿನ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಾಡು-ಮುಳ್ಳಿಕಟ್ಟೆ ಸರ್ಕಲ್‍ನಲ್ಲಿ ನಾವುಂದ ಗ್ರಾಮದ ರೂಪ ಗಾಣಿಗ (32) ಅವರು ರಸ್ತೆ ದಾಟುತ್ತಿದ್ದ ಸಮಯದಲ್ಲಿ ತ್ರಾಸಿ ಕಡೆಯಿಂದ ಕುಂದಾಪುರ ಕಡೆಗೆ ವೇಗದಿಂದ ಸಾಗುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಸ್ವರೂಪದ ಗಾಯದೊಂದಿಗೆ ಆಸ್ಪತ್ರೆ ದಾಖಲಾದ ಘಟನೆ ಶನಿವಾರ ನಡೆದಿದೆ.ಏಪ್ರಿಲ್ 12 ರ ಶುಕ್ರವಾರದಂದು ಮುಳ್ಳಿಕಟ್ಟೆ ಸರ್ಕಲ್‍ನಲ್ಲಿ ಸಂಭವಿಸಿದ ಅಪಘಾತದಲ್ಲಿ ಮೂವರು ಮಹಿಳೆಯರು ಸಹಿತ ಒಟ್ಟು ನಾಲ್ಕು ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.ಮುಳ್ಳಿಕಟ್ಟೆ ಸರ್ಕಲ್‍ನಲ್ಲಿ ಪದೆ ಪದೆ ಅಪಘಾತ ಸಂಭವಿಸುತ್ತಿದ್ದರು […]

You cannot copy content of this page