ವಿಶ್ವ ಪ್ರಸಿದ್ಧ ತ್ರಾಸಿ-ಮರವಂತೆ ಬೀಚ್ ಸ್ಕೈ ಡೈನಿಂಗ್‍ನಲ್ಲಿ ಕುಳಿತು ಪ್ರಕೃತಿ ಸೌಂದರ್ಯವನ್ನು ಸವಿದ ಪ್ರವಾಸಿಗರು
ಕುಂದಾಪುರ:ಧಾರವಾಡ ಅಗ್ರಿಕಲ್ಚರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿರುವ 1972 ರ ಬ್ಯಾಚಿನ ವಿದ್ಯಾರ್ಥಿಗಳ ತಂಡ ತಮ್ಮ ಕುಟುಂಬಿಕರೊಂದಿಗೆ ವಿಶ್ವ ಪ್ರಸಿದ್ಧ ತ್ರಾಸಿ ಮರವಂತೆ ಬೀಚ್‍ಗೆ ಶನಿವಾರ ಭೇಟಿ ನೀಡಿ ಸ್ಕೈ ಡೈನಿಂಗ್‍ನಲ್ಲಿ ಕುಳಿತು ಪ್ರಕೃತಿ ಸೌಂದರ್ಯವನ್ನು ಆಶ್ವಾಧಿಸುತ್ತಾ ಬೀಚ್‍ನಲ್ಲಿ ಮೋಜು ಮಸ್ತಿ ಮಾಡುತ್ತಾ ತಮ್ಮ ಸುಂದರ ಕ್ಷಣಗಳನ್ನು ಕಳೆದರು.ಟೀಮ್ ಮಂತ್ರಾಸ್ ಅವರಿಂದ ತ್ರಾಸಿ ಬೀಚ್‍ನಲ್ಲಿ ನಿರ್ಮಾಣವಾಗಿರುವ ಸ್ಕೈಡೈನಿಂಗ್ ರಾಜ್ಯದ ಎರಡನೇ ತಾಣವಾಗಿದೆ.ಸಮುದ್ರ ಮಟ್ಟದಿಂದ ಸುಮಾರು 90 ರಿಂದ 100 ಮೀಟರ್ ಎತ್ತರದಲ್ಲಿರುವ ಸ್ಕೈಡೈನಿಂಗ್‍ನಲ್ಲಿ ಕುಳಿತು ಬೀಚ್ ಸೌಂದರ್ಯ ಮತ್ತು […]