ದೋಣಿ ಮೂಲಕ ತೆರಳಿ ಮತದಾನದ ಜಾಗೃತಿ

ಕುಂದಾಪುರ:ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಬÉೈಂದೂರು ತಾಲೂಕು ಸ್ವೀಪ್ ಸಮಿತಿ,ಬÉೈಂದೂರು ತಾಲೂಕು ಆಡಳಿತ ಹಾಗೂ ನಾಡ ಗ್ರಾ.ಪಂ ವತಿಯಿಂದ ನಾಡ ಗ್ರಾ.ಪಂ ವ್ಯಾಪ್ತಿಯ ಕುರು ಕುದ್ರುವಿನಲ್ಲಿರುವ ದ್ವೀಪ ವಾಸಿಗಳಿಗೆ ಅಧಿಕಾರಿಗಳ ತಂಡವು ದೋಣಿ ಮೂಲಕ ತೆರಳಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಗುರುವಾರ ನಡೆಯಿತು.ಬÉೈಂದೂರು ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಆನಂದ್ ಎಸ್. ಬಡಕುಂದ್ರಿ ನೇತೃತ್ವ ತಂಡ ಸ್ವೀಪ್ ಸಮಿತಿಯ ತಂಡವು ದೋಣಿಯ ಮೂಲಕ ನದಿ ದಾಟಿ, ಕುರು ಕುದ್ರು ನಿವಾಸಿಗಳ ಮನೆಗಳಿಗೆ […]

ಶ್ರೀಸೀತಾರಾಮಚಂದ್ರ ದೇವರ ಕಲ್ಯಾಣೋತ್ಸವ

ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಕಂಚುಗೋಡು ಶ್ರೀರಾಮ ದೇವಸ್ಥಾನದ ಸುವರ್ಣಮಹೋತ್ಸವ ಅಂಗವಾಗಿ ಶ್ರೀಸೀತಾರಾಮಚಂದ್ರ ದೇವರ ಕಲ್ಯಾಣೋತ್ಸವ ಡಾ.ಎ ಚೆನ್ನಕೇಶವ ಗಾಯತ್ರಿ ಭಟ್ ಗಜಪುರ ಆನಗಳ್ಳಿ ಅವರ ನೇತೃತ್ವದಲ್ಲಿ ಗುರುವಾರ ವಿಜೃಂಭಣೆಯಿಂದ ನಡೆಯಿತು.ಸೀತಾ ದೇವಿ ಮೂರ್ತಿಯನ್ನು ಗಂಗೊಳ್ಳಿ ಶ್ರೀಮಹಾಂಕಾಳಿ ಅಮ್ಮನವರ ದೇವಸ್ಥಾನ ದಿಂದ ಹಾಗೂ ಶ್ರೀರಾಮ ದೇವರ ಮೂರ್ತಿಯನ್ನು ತ್ರಾಸಿ ಕೊಂಕಣಿ ಖಾರ್ವಿ ಸಭಾಭವನದ ಬಳಿಯಿಂದ ಪೂರ್ಣ ಕುಂಭ ಕಲಶದೊಂದಿಗೆ ಭವ್ಯ ಮೆರವಣಿಗೆ ಮೂಲಕ ಶ್ರೀರಾಮ ದೇವಸ್ಥಾನ ಕಂಚುಗೋಡುನಲ್ಲಿ ಎದುರುಗೊಳಿಸಲಾಯಿತು.ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರು […]

ಶ್ರೀಲಕ್ಷ್ಮೀನಾರಾಯಣ ದೇವರ ವೈಭವದ ಹೊರೆ ಕಾಣಿಕೆ ಪುರಮೆರವಣಿಗೆ

ಕುಂದಾಪುರ:ತಾಲೂಕಿನ ಹೆಮ್ಮಾಡಿ ಶ್ರೀಲಕ್ಷ್ಮೀನಾರಾಯಣ ದೇವಸ್ಥಾನದ ನೂತನ ಶಿಲಾಮಯಗುಡಿ ಲೋಕಾರ್ಪಣೆ ಹಾಗೂ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಂಭಾಭಿಷೇಕ ಮಹೋತ್ಸವ ಅಂಗವಾಗಿ ವೈಭವದ ಹೊರೆ ಕಾಣಿಕೆ ಶೋಭಾಯಾತ್ರೆ ಶುಕ್ರವಾರ ನಡೆಯಿತು.ಪೂರ್ಣ ಕುಂಭ ಸ್ವಾಗತದೊಂದಿಗೆ ಶ್ರೀ ದೇವರ ಹೊರೆ ಕಾಣಿಕೆ ಮೆರವಣಿಗೆಯನ್ನು ಸ್ವಾಗತಿಸಿಕೊಳ್ಳಲಾಯಿತು.ಚಂಡೆ ವಾದನ,ವಾದ್ಯ ಘೋಷ,ಭಜನೆ ಮೆರವಣಿಗೆ ಸೊಬಗನ್ನು ಹೆಚ್ಚಿಸಿತು.ಮಹಿಳೆಯರು ಮತ್ತು ಪುರುಷರು ಸಮವಸ್ತ್ರದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದರು.

You cannot copy content of this page