ಏಪ್ರಿಲ್ 21 ರಂದು ಹಸಿರು ಹೊರೆ ಕಾಣಿಕೆ ಸಮರ್ಪಣೆ

ಕುಂದಾಪುರ:ತಾಲೂಕಿನ ಅಂಪಾರು ಗ್ರಾಮದ ಶಾನ್ಕಟ್ಟು ಕೆಳಗಿನ ಮನೆ ಕುಟುಂಬಸ್ಥರ ಆದಿ ನಾಗ ಬನದಲ್ಲಿ ಏಪ್ರಿಲ್ 23 ರ ಮಂಗಳವಾರ ದಂದು ನಡೆಯಲಿರುವ ಏಕ ಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮದ ಅಂಗವಾಗಿ ಏಪ್ರಿಲ್ 21 ರ ಭಾನುವಾರದಂದು ಹಸಿರು ಹೊರೆ ಕಾಣಿಕೆ ಮೆರವಣಿಗೆ ನಡೆಯಲಿದೆ.ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕೆಂದು ನಾಗಮಂಡಲೋತ್ಸವ ಸಮಿತಿ ಅವರು ವಿನಂತಿಸಿಕೊಂಡಿದ್ದಾರೆ.ಏಕ ಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮದ ಪೂರ್ವ ತಯಾರಿ ಅದ್ದೂರಿಯಾಗಿ ನಡೆಯುತ್ತಿದ್ದು,ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.ತಳಿರು ತೋರಣಗಳಿಂದ,ಸುಣ್ಣ ಬಣ್ಣ ಲೇಪನ ದೊಂದಿಗೆ ಮಂಟಪವನ್ನು ಸಿಂಗರಿಸಲಾಗಿದೆ.ತುಂಬು ಉತ್ಸಾಹದಿಂದ ಗ್ರಾಮಸ್ಥರು ಕೆಲಸ […]

ಏಪ್ರಿಲ್ 22 ರಂದು ಮಹಿಳಾ ಸಮಾವೇಶ,ಬೂತ್ ಕಡೆಗೆ ಸಮೃದ್ಧಿ ನಡಿಗೆ

ಬೈಂದೂರು:ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಬಿಜೆಪಿ ಪಕ್ಷದ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು ಏಪ್ರಿಲ್ 22ರಂದು ಸೋಮವಾರ ಬೈಂದೂರಿಗೆ ಆಗಮಿಸಿ ದಿನವಿಡಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಬಿ.ವೈ.ರಾಘವೇಂದ್ರ ಅವರು ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ಮೊದಲ ಬಾರಿಗೆ ಬೈಂದೂರಿಗೆ ಆಗಮಿಸುತ್ತಿದ್ದಾರೆ. ರಾಘವೇಂದ್ರ ಅವರನ್ನು ಸ್ವಾಗತಿಸಲು ಕಾರ್ಯಕರ್ತರು ಪದಾಧಿಕಾರಿಗಳು ಕಾತರರಾಗಿದ್ದಾರೆ.ಮಹಿಳಾ ಸಮಾವೇಶಎ.22ರ ಬೆಳಗ್ಗೆ 10.30ಕ್ಕೆ ಕಿರಿಮಂಜೇಶ್ವರ ಮೂಕಾಂಬಿಕಾ ಟಿಂಬರ್ ಮಿಲ್ ಸಮೀಪದಲ್ಲಿ ಮಂಡಲ ಬಿಜೆಪಿ ಮಹಿಳಾ ಮೋರ್ಚಾದಿಂದ ಹಮ್ಮಿಕೊಂಡಿರುವ ಮಹಿಳಾ ಸಮಾವೇಶದಲ್ಲಿ ಬಿ.ವೈ.ರಾಘವೇಂದ್ರ ಅವರು ಭಾಗವಹಿಸಿ […]

ಪ್ರವಾಸದೊಂದಿಗೆ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ

ಕುಂದಾಪುರ:ಸ್ವಯಂ ಜಾಗೃತಿ ಬೆಂಗಳೂರು ತಂಡದ ವತಿಯಿಂದ ಪ್ರವಾಸದೊಂದಿಗೆ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಡಿ ಮರವಂತೆ-ತ್ರಾಸಿ ಕಡಲ ತೀರದಲ್ಲಿ ಸ್ವಚ್ಛತಾ ಕಾರ್ಯವನ್ನು ಶನಿವಾರ ಮಾಡಲಾಯಿತು.ಸ್ವಯಂ ಜಾಗೃತಿ ಬೆಂಗಳೂರು ತಂಡದ ಸದಸ್ಯರು ಮರವಂತೆ ಬೀಚ್‍ಗೆ ಭೇಟಿ ನೀಡಿ,ಕಡಲ ಕಿನಾರೆಯಲ್ಲಿ ಬಿದ್ದ ನಿರೂಪಕ್ತ ತ್ಯಾಜ್ಯ,ಪ್ಲಾಸ್ಟಿಕ್,ಗಾಜಿನ ಬಾಟಲಿಗಳನ್ನು ಹೆಕ್ಕಿ ವಿಲೇವಾರಿ ಮಾಡಿದರು.ಬಳಿಕ ಉಡುಪಿ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ ಬೀಚ್ ಪರಿಸರದ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಮನವಿಯನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ತಂಡದ ಸದಸ್ಯರಾದ ಅಜಯ್ ಕುಮಾರ್,ಶರಣ್ ಪಾಟೀಲ್,ಭರತ್ ಆರ್,ಸೋಮಶೇಖರ್,ನಿಂಗರಾಜು,ಸಂತೋಷ್ ಹಿಂಬಾಳೆ,ಆಶಿಕ್ ಶೆಟ್ಟಿ,ಚರಣ್ ಗೌಡ,ಸುನಿಲ್,ಶ್ರೀಷ,ರೇಣುಕಾ ಪ್ರಸಾದ್ ಮತ್ತು […]

You cannot copy content of this page