ಮಾಟುಬಲೆ ದೋಣಿ ಮೀನುಗಾರರ ಆಹ್ವಾನಿತ ಕ್ರಿಕೆಟ್ ಪಂದ್ಯಾಟ ಉದ್ಘಾಟನೆ

ಕುಂದಾಪುರ:ಕರಾವಳಿ ಮಿತ್ರ ಮಂಡಳಿ ಮರವಂತೆ ಅದರ 25ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ನಾವುಂದ ವ್ಯಾಪ್ತಿಯ ಮಾಟುಬಲೆ ದೋಣಿ ಮೀನುಗಾರರ ಆಹ್ವಾನಿತ ಕ್ರಿಕೆಟ್ ಪಂದ್ಯಾಟ ಮರವಂತೆಯಲ್ಲಿ ಶನಿವಾರ ನಡೆಯಿತು. ಶ್ರೀರಾಮ ಮಂದಿರ ಮೀನುಗಾರರ ಸೇವಾ ಸಮಿತಿ ಮರವಂತೆ ಅಧ್ಯಕ್ಷ ವಾಸುದೇವ ಖಾರ್ವಿ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಮೀನುಗಾರಿಕೆ ಜತೆಗೆ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದದ ಮನಸು ಚೇತನ್ಯ ಭರಿತವಾಗಿರುತ್ತದೆ.ಮೀನುಗಾರಿಕೆಯಲ್ಲಿ ಜೀವನವನ್ನು ಕಂಡುಕೊಂಡಿರುವ ಮೀನುಗಾರರ ಮಕ್ಕಳು ಶಿಕ್ಷಣವಂತರಾಗಿ ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಪಡೆಯುವಲ್ಲಿ ಪ್ರಯತ್ನಿಸಬೇಕು ಎಂದು ಹೇಳಿದರು. […]

ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಕೆ.ಎಸ್.ಈಶ್ವರಪ್ಪ ಮತ ಭೇಟೆ

ಬೈಂದೂರು:ಶಿವಮೊಗ್ಗ ಜಿಲ್ಲೆಯ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಹೊಳಲೂರು,ಹಸೂಡಿ, ಕಾಚಿನಕಟ್ಟೆ ಮಂಡೇನಕೊಪ್ಪ ಗಳಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಸಾರ್ವಜನಿಕ ಸಭೆ ನಡೆಸಿ ಮತಯಾಚನೆ ಮಾಡಿದರು.ಈ ಸಂಧರ್ಭದಲ್ಲಿ ಮಾಜಿ ಶಾಸಕ ಗೂಳಿ ಹಟ್ಟಿ ಶೇಖರ್, ಮಲೆನಾಡು ರೈತ ಸಮಿತಿ ಅಧ್ಯಕ್ಷ ತಿ.ನ ಶ್ರೀನಿವಾಸ್,ವೀರಶೈವ ಸಮಾಜದ ಹರಮಘಟ್ಟ ಜಗ್ಗಪ್ಪ, ಗೂಳಿಹಟ್ಟಿ ಶೇಖರ್, ಕಾಚಿನಕಟ್ಟೆ ಸತ್ಯನಾರಾಯಣ, ಭೋವಿ ಸಮಾಜದ ಜಯ್ಯಪ್ಪ, ಧನಲಕ್ಷ್ಮಿ, ದಲಿತ ಸಮಾಜದ ಮುಖಂಡ ತಿಪ್ಪೇಶ್, ಹಸೂಡಿ ಮಾರಪ್ಪ,ಕುಮಾರ್,ಗಣೇಶ್, ಕಾಚಿನಕಟ್ಟೆ ಸತೀಶ್, ಮಂಜು, ಮೋಹನ್, ಕೃಷ್ಣಪ್ಪ, […]

28ಕ್ಕೆ 28 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ

ದಕ್ಷಿಣ ಭಾರತದಲ್ಲಿ ಟೆಂಪಲ್ ಕಾರೀಡಾರ್: ಅಣ್ಣಾಮಲೈ ಬೈಂದೂರು:ಸೂರ್ಯ ಚಂದ್ರರು ಇರುವುದು ಎಷ್ಟು ಸತ್ಯವೋ ಹಾಗೆಯೇ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಈ ದೇಶದ ಪ್ರಧಾನ ಮಂತ್ರಿಯಾಗುವುದು ಅಷ್ಟೇ ಸತ್ಯ.ದೇಶದಲ್ಲಿ ಬಿಜೆಪಿ 400ಕ್ಕೂ ಅಧಿಕ ಸೀಟ್ ಗೆಲ್ಲಿಲಿದೆ.ಕರ್ನಾಟಕದಲ್ಲಿ 28ಕ್ಕೆ 28 ಸೀಟುಗಳನ್ನು ಗೆಲ್ಲುವ ವಿಶ್ವಾಸ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.ಬೈಂದೂರಿನಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರ ಪರವಾಗಿ ಬೃಹತ್ ರೋಡ್ ಶೋಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.ರಾಜ್ಯದ ಉದ್ದಗಲಕ್ಕೂ ಪ್ರವಾಸ […]

You cannot copy content of this page