ಶೃಂಗಾರಗೊಂಡ ಯುವ ಮತಕಟ್ಟೆ

ಕುಂದಾಪುರ:ಮಂಗಳವಾರ ನಡೆಯಲಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿ ತಾಲೂಕು ಪಂಚಾಯತ್ ಕುಂದಾಪುರ ವತಿಯಿಂದ ಬೈಂದೂರು ವಿಧಾನಸಭಾ ಕ್ಷೇತ್ರದ ಹೊಸಾಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಹೊಸಾಡು ಶಾಲೆಯಲ್ಲಿನ ಯುವ ಮತಗಟ್ಟೆಯನ್ನು ತಳಿರು ತೋರಣಗಳಿಂದ ವಿಶೇಷವಾದ ರೀತಿಯಲ್ಲಿ ಸೋಮವಾರ ಶೃಂಗಾರಿಸಲಾಯಿತು.ಮತದಾರರು ಮತ ಕೇಂದ್ರಕ್ಕೆ ತೆರಳಿ ಸುಸೂತ್ರವಾಗಿ ಮತವನ್ನು ಚಲಾಯಿಸಲು ಹಾಗೂ ಮತದಾರರನ್ನು ಮತ ಕೇಂದ್ರದತ್ತಾ ಆಕರ್ಷಿಸಲು ಉಡುಪಿ ಜಿಲ್ಲಾಡಳಿತ ಮತ್ತು ಕುಂದಾಪುತ ತಾಲೂಕು ಸ್ವೀಪ್ ಸಮಿತಿ ಹಲವಾರು […]

ಶ್ರೀ ಬೊಬ್ಬರ್ಯ ಪರಿವಾರ ದೇವರ ಪುನರ್ ಪ್ರತಿಷ್ಠೆ, ನೂತನ ಶಿಲಾಮಯ ದೇಗುಲ ಲೋಕಾರ್ಪಣೆ

ಕುಂದಾಪುರ:ಬೈಂದೂರು ತಾಲೂಕಿನ ನಾಗೂರು ಕಿರಿಮಂಜೇಶ್ವರ ಗುಂಜಾನುಗುಡ್ಡೆ ಶ್ರೀ ಬೊಬ್ಬರ್ಯ ಪರಿವಾರ ದೇವರ ಪುನರ್ ಪ್ರತಿಷ್ಠೆ,ನೂತನ ಶಿಲಾಮಯ ದೇಗುಲ ಲೋಕಾರ್ಪಣೆ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸೋಮವಾರ ನಡೆಯಿತು.ಶ್ರೀಬೊಬ್ಬಯ ಮತ್ತು ಪರಿವಾರ ದೇವರ ಪುನರ್ ಪ್ರತಿಷ್ಠೆ ಅಂಗವಾಗಿ ಬಿಂಬ ಪ್ರತಿಷ್ಠೆ,ಕುಂಭ ಅಭಿಷೇಕ,ಅಷ್ಟೋತ್ತರ ಕಲಶ ಸ್ಥಾಪನೆ,ಬ್ರಹ್ಮಕಲಶ ಸ್ಥಾಪನೆ,ಮಹಾ ಪೂಜೆ,ಪರಿ ಕಲಶ ಸಹಿತ ಬ್ರಹ್ಮಕಲಾಶಾಭೀಷೇಕವನ್ನು ನೆರವೇರಿಸಲಾಯಿತು.ಮಹಾ ಅನ್ನಸಂತರ್ಪಣೆ,ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.ನಾರಾಯಣ ಹೆಬ್ಬಾರ್ ಮಾತನಾಡಿ,ಶ್ರೀಬೊಬ್ಬರ್ಯ ದೇವರ ದೇವಸ್ಥಾನವನ್ನು 40 ವರ್ಷಗಳ ಹಿಂದೆ ನಿರ್ಮಾಣಮಾಡಲಾಗಿದೆ.ನಾಲ್ಕು ದಶಕಗಳ ಬಳಿಕ ಶ್ರೀದೇವರ ಅನುಗ್ರಹದಿಂದ ನೂತನ […]

ಮಾಟುಬಲೆ ಮೀನುಗಾರರ ಕ್ರಿಕೆಟ್ ಪಂದ್ಯಾಟ ಸಮಾರೋಪ ಸಮಾರಂಭ

ಕುಂದಾಪುರ:ಕರಾವಳಿ ಮಿತ್ರ ಮಂಡಳಿ ಮರವಂತೆ ಅದರ 25ನೇ ವಾರ್ಷಿಕೋತ್ಸವ ಅಂಗವಾಗಿ ಮರವಂತೆಯಲ್ಲಿ ಎರಡು ದಿನಗಳ ಕಾಲ ನಡೆದ ಮಾಟುಬಲೆ ಮೀನುಗಾರರ ಕ್ರಿಕೆಟ್ ಪಂದ್ಯಾಟ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ಭಾನುವಾರ ನಡೆಯಿತು.ಶ್ರೀರಾಮ ಮಂದಿರ ಮರವಂತೆ ಮೀನುಗಾರರ ಸೇವಾ ಸಮಿತಿ ಅಧ್ಯಕ್ಷ ವಾಸುದೇವ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷ ಸುರೇಶ್ ಖಾರ್ವಿ,ಕಾರ್ಯದರ್ಶಿ ಈಶ್ವರ ಖಾರ್ವಿ ಹಾಗೂ ಮಾಜಿ ಅಧ್ಯಕ್ಷರಾದ ಸೋಮಯ್ಯ ಖಾರ್ವಿ,ಪಿ ಚಂದ್ರ ಖಾರ್ವಿ ಮತ್ತು ಪ್ರೆÇೀತ್ಸಾಹಕರಾದ ಡಾ.ನಾಗರಾಜ ಖಾರ್ವಿ,ಚಾವನ ಆನಂದ ಖಾರ್ವಿ,ಕರಾವಳಿ ಮಿತ್ರ ಮಂಡಳಿ ಮರವಂತೆ […]

You cannot copy content of this page