ಬೈಂದೂರು ಕ್ಷೇತ್ರದಲ್ಲಿ ಮತದಾನ ಆರಂಭ,ಮತಗಟ್ಟೆಗೆ ಆಗಮಿಸಿದ ಮತದಾರರು

ಕುಂದಾಪುರ:ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನ ಕ್ಷೇತ್ರ ವ್ಯಾಪ್ತಿಯ ನಾನಾ ಮತಗಟ್ಟೆಯಲ್ಲಿ ಬೆಳಿಗ್ಗೆಯಿಂದಲೇ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ.ಬೈಂದೂರು ಕ್ಷೇತ್ರದ 246 ಮತಗಟ್ಟೆಗಳಲ್ಲಿ 43 ಸೂಕ್ಷ್ಮ ಮತಗಟ್ಟೆಗಳನ್ನಾಗಿ ಪರಿಗಣಿಸಲಾಗಿದೆ.ಎಲ್ಲಾ ಸಾಮಾನ್ಯ ಮತಗಟ್ಟೆಯಲ್ಲಿ ಕನಿಷ್ಠ ಒಬ್ಬ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.ಎಲ್ಲಾ ಮತಗಟ್ಟೆಗಳನ್ನು 16 ವಲಯ ಗಳಾಗಿ ವರ್ಗೀಕರಿಸಲಾ ಗಿದ್ದು,ಪ್ರತಿ ವಲಯದ ಮೇಲ್ವಿಚಾರಣೆಗೆ ಎಸ್ಸೈಗಳನ್ನು ನಿಯೋಜಿಸ ಲಾಗಿದೆ.16 ವಲಯಗಳನ್ನು ಪೊಲೀಸ್ ನಿರೀಕ್ಷಕರ ಶ್ರೇಣಿಯ ಮೂವರು ಅಧಿಕಾರಿಗಳು ಮೇಲ್ವಿಚಾರಣೆ ಮಾಡಲಿದ್ದಾರೆ.ಮೇಲ್ವಿಚಾರಣಾ ಅಧಿಕಾರಿಗಳ ಬಗ್ಗೆ ಇಬ್ಬರು ಡಿವೈಎಸ್ಪಿಗಳು ನಿಗಾ ವಹಿಸಲಿದ್ದಾರೆ.ಮತಗಟ್ಟೆಗಳನ್ನು ವಿಶೇಷವಾದ ರೀತಿಯಲ್ಲಿ […]

ಧಾರ್ಮಿಕ ಸಭಾ ಕಾರ್ಯಕ್ರಮ ದಾನಿಗಳಿಗೆ ಸನ್ಮಾನ

ಕುಂದಾಪುರ:ಬೈಂದೂರು ತಾಲೂಕಿನ ನಾಗೂರು ಕಿರಿಮಂಜೇಶ್ವರ ಗುಂಜಾನುಗುಡ್ಡೆ ಶ್ರೀ ಬೊಬ್ಬರ್ಯ ಪರಿವಾರ ದೇವರ ಪುನರ್ ಪ್ರತಿಷ್ಠೆ, ನೂತನ ಶಿಲಾಮಯ ದೇಗುಲ ಲೋಕಾರ್ಪಣೆ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಧಾರ್ಮಿಕ ಸಭಾ ಕಾರ್ಯಕ್ರಮ ಸೋಮವಾರ ನಡೆಯಿತು.ದಾನಿಗಳನ್ನು ಸನ್ಮಾನಿಸಲಾಯಿತು.ಸಾಂದೀಪನಿ ಸಾಧನಾಶ್ರಮ ಶ್ರೀಕ್ಷೇತ್ರ ಕೇಮಾರು ಶ್ರೀ ಪರಮ ಪೂಜ್ಯ ಈಶವಿಠಲದಾಸ ಸ್ವಾಮಿ ಅವರು ಆಶೀರ್ವಚನಾ ನೀಡಿ ಮಾತನಾಡಿ,ಪಾಶ್ಚಿಮಾತ್ಯ ದೇಶದ ಸಂಸ್ಕøತಿಗೆ ಮಾರುಹೋಗದೆ ನಮ್ಮ ದೇಶದ ಸಂಸ್ಕøತಿಯನ್ನು ಅಳವಡಿಸಿಕೊಂಡು ಬದುಕುವುದರಿಂದ ಸಂಸ್ಕಾರಯುತವಾದ ಬದುಕನ್ನು ಕಂಡುಕೊಳ್ಳಬಹುದಾಗಿದೆ.ಮಾತೃ ಭಾಷಾ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಬೇಕೆಂದು ಹೇಳಿದರು.ಧಾರ್ಮಿಕ ಮುಖಂಡ ಅಪ್ಪಣ್ಣ […]

ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರು

ಕುಂದಾಪುರ:ಹವಾಮಾನ ವೈಪರಿತ್ಯದಿಂದಾಗಿ ತ್ರಾಸಿ-ಮರವಂತೆ ಕಡಲ ತೀರದಲ್ಲಿ ಬೃಹತ್ ಗಾತ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿದೆ.ಗಾಳಿ ಅಬ್ಬರವೂ ಜೋರಾಗಿದೆ.ಪ್ರವಾಸಿಗರು ಕಡಲಿಗೆ ಇಳಿಯಬಾರದೆಂದು ಸ್ಥಳೀಯರು ಮನವಿಯನ್ನು ಮಾಡಿಕೊಂಡಿದ್ದಾರೆ.

You cannot copy content of this page