ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ‌ ಜನ್ಮದಿನಾಚರಣೆ,ಸಮೃದ್ಧ ಹಸಿರು ಕಾರ್ಯಕ್ರಮ

ಕುಂದಾಪುರ:ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರ ಜನುಮದಿನ ಅಂಗವಾಗಿ ಅವರ ಅಭಿಮಾನಿಗಳ ಬಳಗದ ವತಿಯಿಂದ ಕ್ಷೇತ್ರದಾದ್ಯಂತ ಸಮೃದ್ಧ ಹಸಿರು ಕಾರ್ಯಕ್ರಮ ಭಾನುವಾರ ನಡೆಯಿತು.ಸಮೃದ್ಧ ಹಸಿರು ಕಾರ್ಯಕ್ರಮದ ಅಂಗವಾಗಿ ಶಾಸಕರ ಅಭಿಮಾನಿಗಳು ನೂರಾರು ಗಿಡಗಳನ್ನು ನೆಟ್ಟು ಪರಿಸರ ಮೇಲಿನ ಕಾಳಜಿ ಮೆರೆದರು.ಶಾಸಕರ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ಕ್ಷೇತ್ರದ ಹಲವೆಡೆರಕ್ತದಾನ ಶಿಬಿರ,ಸ್ವಚ್ಛತಾ ಕಾರ್ಯಕ್ರಮ,ಗಿಡ ನೆಡುವ ಕಾರ್ಯಕ್ರಮ,ಅಸಾಯಕರಿಗೆ ನೆರವು,ವ್ರದ್ಧಾಶ್ರಮ, ಅನಾಥಶ್ರಮ ಗಳಿಗೆ ನೆರವು ನೀಡುವುದಲ್ಲದೆ ಹಳ್ಳಿಗಳಲ್ಲಿ ದುರಸ್ಥಿಯಲ್ಲಿರುವ ಮನೆಗಳನ್ನು ಸರಿಪಡಿಸಿಕೊಡುವ ಕಾರ್ಯಕ್ರಮ ಹಾಗೂ ಸರ್ಕಾರಿ ಶಾಲೆಗಳ ಮೇಲ್ಚಾವಣಿ ಸರಿದೂಗಿಸುವ ಕಾರ್ಯಗಳನ್ನು […]

ಕುಡಿಯುವ ನೀರಿಗಾಗಿ ಹರಸಾಹಸ

ಬೈಂದೂರು:ತೀವೃ ಸ್ವರೂಪದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವ ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಡವು ಗ್ರಾಮದಲ್ಲಿ ಮಹಿಳೆಯರು ನೀರಿಗಾಗಿ ಆಳದ ಬಾವಿ ಕಟ್ಟೆ ಮೇಲೆ ನಿಂತು ಹರ ಸಾಹಸಪಟ್ಟು ನೀರನ್ನು ಸೇದುತ್ತಿರುವುದು ಅಪಾಯಕ್ಕೆ ಕಾರಣವಾಗಿದೆ.ಮಹಿಳೆಯರ ಜೀವದ ಸುರಕ್ಷತೆ ದೃಷ್ಟಿಯಿಂದ ಸಂಬಂಧಿಸಿದ ಇಲಾಖೆ ಮತ್ತು ಸ್ಥಳೀಯ ಗ್ರಾಪ ಪಂಚಾಯಿತಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಕಾಲು ಸಂಕ ಪರಿಶೀಲನೆ

ಕುಂದಾಪುರ:ಸಮೃದ್ಧ ಬೈಂದೂರು ಟ್ರಸ್ಟ್‌ ಹಾಗೂ ಅರುಣಾಚಲಂ ಟ್ರಸ್ಟ್‌ ಸಹಯೋಗದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ವಿವಿಧ ಭಾಗದಲ್ಲಿ ನಿರ್ಮಾಣವಾಗುತ್ತಿರುವ ನವೀನ ಆವಿಷ್ಕಾರದ ಕಾಲು ಸಂಕಗಳ ಕಾಮಗಾರಿ ಪ್ರಗತಿ ಪರಿಶೀಲನೆಯನ್ನು ಶಾಸಕ ಗುರುರಾಜ್ ಗಂಟಿಹೊಳೆಯವರು ಭಾನುವಾರ ನಡೆಸಿದರು.ಕಾಡಂಚಿನ ಪ್ರದೇಶವಾದ ತೊಂಬಟ್ಟು ಕಬ್ಬಿನಾಲೆ ಸಮೀಪ,ಯಡಮೊಗೆ ಕುಂಮ್ಟಿಬೇರುವಿನಲ್ಲಿ ಹಾಗೂ ವಂಡ್ಸೆ ಅಬ್ಬಿಯಲ್ಲಿ ನಿರ್ಮಾಣ ವಾಗುತ್ತಿರುವ ಕಾಲು ಸಂಕಗಳ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಶಾಸಕರು,ಬೈಂದೂರು ಕ್ಷೇತ್ರದ ವಿವಿಧ ಭಾಗದಲ್ಲಿ ಕಾಲು ಸಂಕಗಳ ತುರ್ತು ಅಗತ್ಯವಿದೆ.ಆ ನಿಟ್ಟಿನಲ್ಲಿ ಸಮೃದ್ಧ ಬೈಂದೂರು ಹಾಗೂ ಅರುಣಾಚಲಂ […]

You cannot copy content of this page