ಮರಬಿದ್ದು ವಿದ್ಯುತ್ ಕಂಬಕ್ಕೆ ಹಾನಿ

ಕುಂದಾಪುರ:ಸತತವಾಗಿ ಸುರಿಯುತ್ತಿರುವ ಬಾರಿ ಗಾಳಿ ಮಳೆಗೆ ಗುಜ್ಜಾಡಿ ಗ್ರಾಮದ ನಾಯಕವಾಡಿಯಲ್ಲಿ ವಿದ್ಯುತ್ ಕಂಬದ ಮೇಲೆ ಮರ ಬಿದ್ದ ಪರಿಣಾಮ ವಿದ್ಯುತ್ ಕಂಬಕ್ಕೆ ಹಾನಿ ಆಗಿದೆ.ಆಸು ಪಾಸಿನ ಪ್ರದೇಶದ ಮನೆಗಳಿಗೆ ವಿದ್ಯುತ್ ಸಂಪರ್ಕ ವ್ಯವಸ್ಥೆ ಕಡಿತಗೊಂಡಿತ್ತು.ಮೆಸ್ಕಾಂ ಸಿಬ್ಬಂದಿಗಳು ಮರವನ್ನು ತೆರವುಗೊಳಿಸುವುದರ ಮುಖೇನ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಸರಿಪಡಿಸಿದರು.

ಸಾರ್ವಜನಿಕ ರಕ್ತದಾನ ಶಿಬಿರ ಉದ್ಘಾಟನೆ

ಕುಂದಾಪುರ:ಜೀವ ಜಲದಷ್ಟೆ ರಕ್ತವೂ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಪ್ರತಿಯೊಬ್ಬರು ಕ್ಲಪ್ತ ಸಮಯದಲ್ಲಿ ರಕ್ತವನ್ನು ದಾನ ಮಾಡುವುದರಿಂದ ರೋಗಿಗಳ ಪ್ರಾಣವನ್ನು ಕಾಪಾಡಬಹುದು ಎಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.ರಾಮೇಶ್ವರ ಸ್ಪೋಟ್ರ್ಸ್ ಕ್ಲಬ್ ಆಲೂರು,ಗ್ರಾಮ ಪಂಚಾಯಿತಿ ಆಲೂರು,ಶ್ರೀರಾಮೇಶ್ವರ ಯಕ್ಷಗಾನ ಕಲಾ ಸಂಘ ಆಲೂರು,ಗೆಳೆಯರ ಬಳಗ ಆಲೂರು,ಕಲ್ಪತರು ಕಲಾವಿದರು ಆಲೂರು ಮತ್ತು ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದೊಂದಿಗೆ ಮೂಕಾಂಬಿಕ ಸಭಾಭವನ ಆಲೂರುನಲ್ಲಿ ಭಾನುವಾರ ನಡೆದ ಸಾರ್ವಜನಿಕ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು […]

ಮನೆ ಕಂಪೌಂಡ್ ಕುಸಿತ,ಲಕ್ಷಾಂತರ.ರೂ ನಷ್ಟ

ಕುಂದಾಪುರ:ಕಳೆದ ಮೂರು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚುಗೋಡು ಭಗತ್ ನಗರ ನಿವಾಸಿ ವಾಸುದೇವ ಖಾರ್ವಿ ಅವರ ಮನೆ ಹಿಂಭಾಗದ ಕಂಪೌಂಡ್ ಕುಸಿದ ಪರಿಣಾಮ ಮನೆ ಹಿಂಬದಿ ರೂಂ ಸಹಿತ ಒಂದು ಶೆಡ್ಡ್ ನೆಲಕ್ಕೆ ಉರುಳಿ ಬಿದ್ದು ಧಾರಾಶಯವಾಗಿದೆ.ಅವರ ಆರ್‍ಸಿಸಿ ಮನೆಗೆ ಭಾಗಶಃ ಹಾನಿ ಉಂಟಾಗಿದ್ದು ಅಂದಾಜು 10.ಲಕ್ಷ.ಕ್ಕೂ ಅಧಿಕ ನಷ್ಟ ಸಂಭವಿಸಿದ ಘಟನೆ ಶನಿವಾರ ನಡೆದಿದೆ.ಜೂನ್ ಆರಂಭದಲ್ಲೆ ಚುರುಕುನಿಂದ ಕೂಡಿದ ಮಳೆ ಕಳೆದ ಮೂರು ದಿನಗಳಿಂದ […]

You cannot copy content of this page