ಮುಳ್ಳಿಕಟ್ಟೆ ಸೊಸೈಟಿಯಲ್ಲಿ ಕಳ್ಳತನಕ್ಕೆ ಯತ್ನ,ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ ಪೊಲೀಸರು

ಕುಂದಾಪುರ:ಸಿಸಿ ಟಿವಿ ಮಾನಿಟರಿಂಗ್ ತಂಡದ ಸೂಚನೆ ಮೇರೆಗೆ ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘ ಹೆಮ್ಮಾಡಿ ಅದರ ಹೊಸಾಡು-ಮುಳ್ಳಿಕಟ್ಟೆ ಶಾಖೆ ಕಟ್ಟಡದ ಕಿಟಕಿ ಬಾಗಿಲಿನ ಸರಳನ್ನು ಮುರಿದು ಒಳನುಗ್ಗಿ ಕಳ್ಳತನವನ್ನು ಮಾಡಲು ಯತ್ನಿಸುತ್ತಿದ್ದ ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಪ್ರಕಾಶ್ ಬಾಬು (44) ಎಂಬಾತನನ್ನು ಗಂಗೊಳ್ಳಿ ಪೊಲೀಸ್ ಠಾಣೆ ಗುಪ್ತಚರ ಪಿಎಸ್‍ಐ ಬಸವರಾಜ್ ಕಣಶೆಟ್ಟಿ ಮತ್ತು ಸಿಬ್ಬಂದಿಗಳು ಮಿಂಚಿನ ಕಾರ್ಯಚರಣೆ ಮೂಲಕ ರೆಡ್‍ಹ್ಯಾಂಡ್ ಆಗಿ ಹಿಡಿದಿದ್ದಾರೆ.ಶುಕ್ರವಾರ ತಡ ರಾತ್ರಿ 1.44 ರ ಸುಮಾರಿಗೆ ಪಂಚಗಂಗಾ ರೈತರ ಸೇವಾ […]

ಕ್ಯೂಟ್ ಕಿಡ್ಸ್ ಆಂಗ್ಲ ಮಾಧ್ಯಮ ನರ್ಸರಿ ಶಾಲೆ ಪ್ರಾರಂಭೋತ್ಸವ

ಕುಂದಾಪುರ:ಕ್ಯೂಟ್ ಕಿಡ್ಸ್ ಆಂಗ್ಲ ಮಾಧ್ಯಮ ನರ್ಸರಿ ಶಾಲೆ ಪ್ರಾರಂಭೋತ್ಸವ ಕಾರ್ಯಕ್ರಮ ಹೆಮ್ಮಾಡಿ ಬ್ರಹ್ಮಲಿಂಗೇಶ್ವರ ರೆಸಿಡೆನ್ಸಿಯಲ್ಲಿ ಇತ್ತೀಚಿಗೆ ವಿಜೃಂಭಣೆಯಿಂದ ನಡೆಯಿತು.ಆರತಿ,ಬೆಳಗಿ ತಿಲಕವಿಟ್ಟು ವಿದ್ಯಾರ್ಥಿಗಳನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು.ಶಾಲೆಯ ಸಂಚಾಲಕಿ ಶುಭ ಶೇಟ್ ಸ್ವಾಗತಿಸಿದರು.ಶಿಕ್ಷಕಿ ಗಾಯತ್ರಿ ನಿರ್ವಹಿಸಿದರು.ಅನುಷಾ ವಂದಿಸಿದರು.

ಯೋಗೀಶ್‍ಗಾಗಿ ಸಮುದ್ರದಲ್ಲಿ ತೀವ್ರವಾದ ಹುಡುಕಾಟ

ಕುಂದಾಪುರ:ತುಮಕೂರು ಜಿಲ್ಲೆಯ ತಿಪಟೂರು ನಿವಾಸಿಯಾದ ಯೋಗೀಶ್ ( 22) ಎನ್ನುವ ಯುವಕ ತನ್ನ ಸ್ನೇಹಿತನೊಂದಿಗೆ ಕುಂದಾಪುರ ತಾಲೂಕಿನ ಬಿಜಾಡಿ ಸಮುದ್ರ ಕಿನಾರೆ ಬಳಿ ಜೂನ್.19 ರಂದು ವಿಹಾರ ನಡೆಸುತ್ತಿದ್ದ ಸಮಯದಲ್ಲಿ ಕಡಲ ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದಾರೆ.ಯೋಗೀಶ್ ಅವರ ಪತ್ತೆಗಾಗಿ ವಿಶೇಷ ಕಾರ್ಯಾಚರಣೆ ಮೂಲಕ ಸಮುದ್ರದಲ್ಲಿ ಹುಡುಕಾಟ ಮುಂದುವರೆಸಲಾಗಿದೆ.ಗಂಗೊಳ್ಳಿ ಕಡಲ ತೀರದಿಂದ ಸುಮಾರು ಎಂಟು ಮಾರು ದೂರದಲ್ಲಿ ಸಮುದ್ರದಲ್ಲಿ ಶವ ತೇಲುತ್ತಿರುವುದರ ಬಗ್ಗೆ ಸ್ಥಳೀಯ ಮೀನುಗಾರರು ನೀಡಿದ ಮಾಹಿತಿ ಮೇರೆಗೆ ಬೋಟ್ ಮೂಲಕ ಶುಕ್ರವಾರ ವಿಶೇಷ […]

You cannot copy content of this page