ಹೊಸಾಡು:ಕಂಟ ಕಡಿದು ಹೋಗಿ ಕೃಷಿ ಭೂಮಿಗೆ ಹಾನಿ

ಕುಂದಾಪುರ:ಎಡಬಿಡದೆ ಸುರಿದ ಭಾರಿ ಮಳೆಗೆ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಾಡು ಬೈಲಿನಲ್ಲಿ ತೋಡಿನ ಕಂಟ ಕಡಿದು ಹೋಗಿ ವ್ಯಾಪಕ ನಷ್ಟ ಉಂಟಾಗಿದೆ.ಮಳೆ ನಡುವೆ ಕೃಷಿಕರು ಕಂಟವನ್ನು ಕಟ್ಟುವುದರಲ್ಲೆ ಹೈರಾಣಾಹಿ ಹೋಗಿದ್ದಾರೆ.ಘಟನಾ ಸ್ಥಳಕ್ಕೆ ಹೊಸಾಡು ಪಂಚಾಯಿತಿ ಸಿಬ್ಬಂದಿ ಮತ್ತು ಗ್ರಾಮ ಕರಣಿಕರ ಕಛೇರಿ ಸಿಬ್ಬಂದಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಅಬ್ಬರಿಸಿದ ಪುಷ್ಯ ಮಳೆ,ಸೌಪರ್ಣಿಕಾ ನದಿ ತೀರ ಪ್ರದೇಶ ಜಲಾವೃತ್ತ

ಬೈಂದೂರು:ಧಾರಾಕಾರವಾಗಿ ಸುರಿದ ಭಾರಿ ಮಳೆಗೆ ಸೌಪರ್ಣಿಕಾ ನದಿ ಬೋರರ್ಗೆರೆದು ತುಂಬಿ ಹರಿದ ಪರಿಣಾಮ ಬೈಂದೂರು ತಾಲೂಕಿನ ನಾವುಂದ ಸಾಲ್ಬುಡ ಮತ್ತು ನಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಳ್ಳಿಯಲ್ಲಿ ನೆರೆ ನೀರು ಆವರಿಸಿದೆ.ಕೃಷಿ ಭೂಮಿಗಳು ನೀರಿನಲ್ಲಿ ಮೂಳುಗಿದ್ದು ಅಪಾರ ಹಾನಿ ಗುರುವಾರ ಸಂಭವಿಸಿದೆ.ಜೀವನ ಅಸ್ತವ್ಯಸ್ಥವಾಗಿದೆ.ಮನೆ ಒಳಗೆ ನೀರು ನುಗ್ಗಿದ್ದ ಪರಿಣಾಮ ಜನರಿಗೆ ಬಹಳಷ್ಟು ತೊಂದರೆ ಉಂಟಾಗಿದೆ.ಪ್ರತಿ ಮಳೆಗಾಲದಲ್ಲಿಯೂ ಸೌಪರ್ಣಿಕಾ ನದಿ ತೀರ ಪ್ರದೇಶವಾದ ಸಾಲ್ಬುಡ,ಚಿಕ್ಕಳ್ಳಿ,ಹೊಸಾಡು,ತ್ರಾಸಿ,ಕಡಿಕೆ,ಬಡಾಕೆರೆ ಭಾಗದಲ್ಲಿ ನೆರೆ ಕಾಣಿಸಿಕೊಳ್ಳುತ್ತದೆ.ನೆರೆ ನೀರಿನಿಂದ ಜನವಸತಿ ಪ್ರದೇಶ ಮತ್ತು ಕೃಷಿ ಭೂಮಿಗಳು ಮುಳುಗಡೆ […]

ಬೈಂದೂರು,ಕುಂದಾಪುರ, ಬ್ರಹ್ಮಾವರ ತಾಲೂಕಿನ ಶಾಲಾ ಕಾಲೇಜ್‌ಗೆ ಜು.5 ರಂದು ರಜೆ ಘೋಷಣೆ

ಕುಂದಾಪುರ:ಉಡುಪಿ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದ್ದು ರಿಂದ, ಹಲವೆಡೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.ಬೈಂದೂರು, ಕುಂದಾಪುರ ತಾಲೂಕಿನಲ್ಲಿ ಭಾರೀ ವರ್ಷಧಾರೆ ಆಗುತ್ತಿದ್ದು, ನೆರೆ ಭೀತಿ ಉಂಟಾಗಿದೆ.ಈ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಉಡುಪಿ ಜಿಲ್ಲೆಯ ಬೈಂದೂರು,ಕುಂದಾಪುರ ಮತ್ತು ಬ್ರಹ್ಮಾವರ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ, ಹಾಗೂ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ನಾಳೆ (ಜುಲೈ 5) ರಜೆ ಘೋಷಿಸಲಾಗಿದೆ. ಭಾರೀ ಗಾಳಿಮಳೆಗೆ ತಾಲೂಕಿನಾದ್ಯಂತ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಮಳೆ ಮುಂದುವರಿಯುವ ಸಾಧ್ಯತೆ ಇರುವ ಕಾರಣ ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ […]

You cannot copy content of this page