ಬ್ಯಾಗ್ ಮರಳಿಸುವಂತೆ ಮನವಿ

ಕುಂದಾಪುರ:ಮಾರಣಕಟ್ಟೆ ಮೇಳದ ಯಕ್ಷಗಾನ ಕಲಾವಿದರಾದ ಐರ್ಬೈಲು ಆನಂದ ಶೆಟ್ಟಿ ಅವರ ಮಗಳು ಸೀಮಾ ಶೆಟ್ಟಿ ಎಂಬುವರು ಏ.೨೩ ರ ಬುಧವಾರ ರಾತ್ರಿ ಐರ್ಬೈಲ್‌ನಲ್ಲಿ ಯಕ್ಷಗಾನವನ್ನು ವೀಕ್ಷಿಸಿ ಆಟೋದಲ್ಲಿ ಸಿದ್ದಾಪುರ ನೇರಳಕಟ್ಟೆ ನೆಂಪು ಬಗ್ವಾಡಿ ಕ್ರಾಸ್ ಹಕ್ಲಾಡಿ ಮಾರ್ಗದಲ್ಲಿ ಚಲಿಸುತ್ತಿರುವಾಗ ಆಟೋದ ಹಿಂಭಾಗದಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನೊಳಗೊಂಡ ಬ್ಯಾಗ್ ಮಾರ್ಗ ಮಧ್ಯೆ ಬಿದ್ದು ಹೋಗಿರುತ್ತದೆ.ಬ್ಯಾಗ್‌ನಲ್ಲಿ ಆಧಾರ್ ಕಾರ್ಡ್,ಪಾನ್ ಕಾರ್ಡ್,ಎಟಿಎಂ ಕಾರ್ಡ್,ಚುನಾವಣಾ ಗುರುತಿನ ಚೀಟಿ,೨೦ ಪವನ್ ಚಿನ್ನ ಹಾಗೂ ೨೦ ಸಾವಿರ.ರೂ ಇದ್ದಿದ್ದು ಬುಧವಾರ ರಾತ್ರಿ ಐರ್ಬೈಲ್‌ನಲ್ಲಿ ಯಕ್ಷಗಾನವನ್ನು ನೋಡಿಕೊಂಡು […]

ಕುಂದಾಪುರ\ತೀರ್ಥಹಳ್ಳಿ:ಸ್ಕೂಟಿಗೆ ಬಸ್ ಡಿಕ್ಕಿ,ವ್ಯಕ್ತಿ ಸಾವು

ಕುಂದಾಪುರ:ಆಗುAಬೆ ಕಡೆ ಯಿಂದ ತೀರ್ಥ ಹಳ್ಳಿಗೆ ಸಾಗುತ್ತಿದ್ದ ಬಸ್ ತೀರ್ಥಹಳ್ಳಿ ಎಂಬಲ್ಲಿ ಕುಂದಾಪುರ ಕಡೆಗೆ ಸಾಗುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ತ್ರಾಸಿ ಗ್ರಾಮದ ಮೊವಾಡಿ ನಿವಾಸಿ ಗುರುರಾಜ ಎಸ್ ಕಾಂಚನ್ (೪೩) ಸಾವನ್ನಪ್ಪಿದ್ದ ಘಟನೆ ಮಂಗಳವಾರ ನಡೆದಿದೆ.ಏ.೨೫ ರಂದು ಮನೆಯಲ್ಲಿ ಯಕ್ಷಗಾನ ಕಾರ್ಯಕ್ರಮ ನಡೆಯುತ್ತಿರುವ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಯಿಂದ ಗುರುರಾಜ ಕಾಂಚನ್ ಅವರು ಸ್ಕೂಟಿಯಲ್ಲಿ ಕುಂದಾಪುರಕ್ಕೆ ಬರುತ್ತಿರುವಾಗ ಇವೊಂದು ಘಟನೆ ನಡೆದಿದೆ ಎಂದು ಅವರ ಸಂಬAಧಿ ಸಂಜಯ್ ಪೂಜಾರಿ ತಿಳಿಸಿದ್ದಾರೆ.

ಆಲಸ್ಯಕರ ಜೀವನ ಪದ್ಧತಿಯಿಂದ ಹಣದುಬ್ಬರ ಏರಿಕೆ, ದುಡಿಯುವ ಕೈಗಳಿಂದ ಅಭಿವೃದ್ಧಿ:ಡಾ. ಹೆಚ್.ಎಸ್.ಶೆಟ್ಟಿ

ಕುಂದಾಪುರ:ನಮ್ಮ ದೇಶದಲ್ಲಿ ಆಹಾರ ಹಣದುಬ್ಬರ ಕ್ಕೆ ಸರ್ಕಾರ ಕೈಗೊಳ್ಳುವ ಕ್ರಮಗಳ ಜೊತೆಗೆ ದುಡಿಯುವ ಕೈಗಳಿಗಿಂತ ಉಣ್ಣುವ ಕೈಗಳು ಹೆಚ್ಚಾಗಿದೆ.ಆಲಸ್ಯಕರ ಜೀವನ ಪದ್ಧತಿಯಿಂದ ಹಣದುಬ್ಬರ ಏರಿಕೆ ದರದಲ್ಲಿ ಸಾಗುತ್ತಿದೆ ಎಂದು ಮೈಸೂರು ಮರ್ಕಂಟೈಲ್ ಕಂಪೆನಿಯ ಚೇರ್ ಮೆನ್ ಉದ್ಯಮತಾರೆ ಡಾ. ಹೆಚ್.ಎಸ್.ಶೆಟ್ಟಿ ಹೇಳಿದರು.ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ನಗುಸಿಟಿ ಮೈದಾನದಲ್ಲಿ ದೀಪಕ್ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ಆಯೋಜನೆ ಗೊಂಡಿರುವ ಬೈಂದೂರು ಜೋಡುಕೆರೆ ಕಂಬಳದ ಅಂಗವಾಗಿ ಗುರುವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.ಬಸ್ರೂರು ಮಹತೋಬಾರ […]

You cannot copy content of this page