ಕಾಂತಾರ ಚಾಪ್ಟರ್ 1-ಸಿನಿಮಾದಲ್ಲಿ ಸಮೀಕ್ಷಾ ಹಕ್ಲಾಡಿ ಅಭಿನಯ

ಕುಂದಾಪುರ:ಕಾಂತಾರ ಚಾಪ್ಟರ್ 1 ಸಿನಿಮಾದ ಮುಖ್ಯ ಪಾತ್ರದಲ್ಲಿ ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಗುಜ್ಜಾಡಿ ಶಾಲೆ 7ನೇ ತರಗತಿ ವಿದ್ಯಾರ್ಥಿನಿ ಹಕ್ಲಾಡಿ ಗ್ರಾಮದ ನಿವಾಸಿ ಸುರೇಶ ಹಕ್ಲಾಡಿ ಅವರ ಪುತ್ರಿ ಸಮೀಕ್ಷಾ ಸುರೇಶ್ ಹಕ್ಲಾಡಿ ಅವರು ಅಭಿನಯಿಸಿದ್ದಾರೆ.ತಾಂಡವಂ ಡಾನ್ಸ್ ಸ್ಟುಡಿಯೋದಲ್ಲಿ ಸೀನಿಯರ್ ವಿಭಾಗದಲ್ಲಿ ಡಾನ್ಸ್ ಅಭ್ಯಾಸ ಮಾಡುತ್ತಿದ್ದಾರೆ.ಭತರ ನಾಟ್ಯವನ್ನು ಸೀನಿಯರ್ ವಿಭಾಗದಲ್ಲಿ ವಿದುಷೀ ಭಾಗೀರಥಿ ಎಮ್ ರಾವ್ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ವಿಭಾಗದಲ್ಲಿ ಭಾಗ್ಯೇಶ್ವರಿ ಅವರಲ್ಲಿ ಕಲಿಯುತ್ತಿದ್ದಾರೆ.ಯಕ್ಷಗಾನ ಹಾಗೂ ಇನ್ನಿತರ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ […]

ಚಿನ್ನವನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ಗಂಗೊಳ್ಳಿ ಠಾಣೆ ಸಿಬ್ಬಂದಿ

ಕುಂದಾಪುರ:ಎಸ್‍ಬಿಐ ಬ್ಯಾಂಕ್ ಬಳಿ ಗಂಗೊಳ್ಳಿ ಪೊಲೀಸ್ ಠಾಣೆ ಸಿಬ್ಬಂದಿ ಗಂಗಾಧರ ಪೂಜಾರಿ ಅವರಿಗೆ ಸಿಕ್ಕಿರುವ ಸುಮಾರು 13 ಗ್ರಾಂ ತೂಕವನ್ನು ಹೊಂದಿದ ಅಂದಾಜು ಒಂದೂವರೆ ಲಕ್ಷ ರೂ. ಮೌಲ್ಯದ ಚಿನ್ನವನ್ನು ವಾರೀಸುದಾರರಾದ ಕುಂದಾಪುರ ಚಿಕ್ಕನ್ ಸಾಲ್ ರೋಡ್ ನಿವಾಸಿ ರಾಕೇಶ್ ಬೆರಟ್ಟೊ ಅವರಿಗೆ ಮರಳಿಸುವುದರ ಮುಖೇನ ಪ್ರಾಮಾಣಿಕತೆ ಮೆರೆದಿದ್ದಾರೆ.ಗಂಗೊಳ್ಳಿ ಠಾಣೆ ಪಿಎಸ್‍ಐ ಪವನ್ ನಾಯ್ಕ್ ಹಸ್ತಾಂತರ ಮಾಡಿದರು.

ಬೈಕ್ ಗೆ ಕಡವೆ ಡಿಕ್ಕಿ:ವ್ಯಕ್ತಿ ಗಂಭೀರ

ಕುಂದಾಪುರ:ಚಲಿಸುತ್ತಿದ್ದ ಬೈಕ್ ಗೆ ಕಡವೆ ಡಿಕ್ಕಿ ಹೊಡೆದ ಘಟನೆ ಕಮಲಶಿಲೆ ಎಂಬಲ್ಲಿ ಶನಿವಾರ ನಡೆದಿದೆ.ಅಪಘಾತದ ಹೊಡೆತಕ್ಕೆ ಕಡವೆ ಸ್ಥಳದಲ್ಲಿ ಮೃತಪಟ್ಟಿದೆ.ಬೈಕ್ ಸವಾರನಿಗೆ ಗಂಭೀರ ಸ್ವರೂಪದ ಗಾಯವಾಗಿದೆ.

You cannot copy content of this page