ಓರಿಯೆಂಟೆಷನ್ ಕಾರ್ಯಕ್ರಮ ಉದ್ಘಾಟನೆ:ಓದಿನಲ್ಲಿ ನಿರಂತರತೆ ಕಾಪಾಡಿಕೊಳ್ಳುವುದು ಮುಖ್ಯ-ಸಂಸ್ಥಾಪಕ ಸುಬ್ರಹ್ಮಣ್ಯ

ಕುಂದಾಪುರ:ಬ್ರಹ್ಮವಾರ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಓರಿಯೆಂಟೆಷನ್ ಕಾರ್ಯಕ್ರಮವನ್ನು ಗುರುವಾರ ಆಯೋಜಿಸಲಾಯಿತು.ಸಂಸ್ಥೆಯ ಸಂಸ್ಥಾಪಕ ಸುಬ್ರಹ್ಮಣ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಪೋಷಕರ ಜವಾಬ್ದಾರಿ ಹಾಗೂ ಕಾಲೇಜಿನಲ್ಲಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿ ಮಾತನಾಡಿ,ಶಿಸ್ತು ಸಂಯಮ ಆತ್ಮವಿಶ್ವಾಸವನ್ನು ಹೊಂದಿರುವುದರಿಂದ ಉತ್ತಮ ವಿದ್ಯಾರ್ಥಿ ಆಗುವುದರ ಜತೆಗೆ ಗುರಿಯನ್ನು ಕೂಡ ಸಾಧಿಸಲು ಸಾಧ್ಯವಿದೆ.ಓದಿನಲ್ಲಿ ನಿರಂತರತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ ಎಂದು ಅಭಿಪ್ರಾಯಪಟ್ಟರು.ಕಾಲೇಜಿನ ಪ್ರಿನ್ಸಿಪಾಲ್ ಡಾ.ಸೀಮಾ ಜಿ ಭಟ್ ಮಾತನಾಡಿ.ಕಾಲೇಜಿನಲ್ಲಿರುವ ಲಭ್ಯವಿರುವ ಕೋರ್ಸ್‍ಗಳ ಕುರಿತು ಹಾಗೂ ಉಪನ್ಯಾಸಕರ ಪರಿಚಯ ವಿದ್ಯಾರ್ಥಿಗಳಿಗೆ ನೀಡಿದರು.ವಿಶ್ವವಿದ್ಯಾನಿಲಯದ […]

ಧರೆಗುರುಳಿದ ಮಹಾರಾಜ ಸ್ವಾಮಿ ದೇವಸ್ಥಾನದ ಪ್ರಾಂಗಾಣದ ಸೀಟ್ ಮಾಡು

ಕುಂದಾಪುರ:ಆರ್ಭಟಿಸಿದ ಗಾಳಿ ರಭಸಕ್ಕೆ ಬೈಂದೂರು ತಾಲೂಕಿನ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿನ ಪ್ರಾಂಗಾಣದ ಸೀಟ್ ಮಾಡು ತುಂಡು ತುಂಡಾಗಿ ಕೆಳಕ್ಕೆ ಬಿದ್ದಿದೆ.ಮಳೆ ನೀರು ದೇವಾಲಯದ ಒಳಗಡೆ ಸುರಿಯುತ್ತಿದೆ.ಕರ್ಕಾಟಕ ಅಮಾವಾಸ್ಯೆ ಜಾತ್ರೆಕ್ಕೆಂದು ಹೊರಗಡೆ ಹಾಕಿದ ಕಬ್ಬಿಣದ ಸೀಟ್ ಚಪ್ಪರ ಗಾಳಿ ಹೊಡೆತಕ್ಕೆ ತುಂಡರಸಿ ಕೆಳಗೆ ಬಿದ್ದಿದ್ದು.ಚಪ್ಪರಕ್ಕೆ ಹಾಕಿದ ಕಬ್ಬಿಣದ ಸೀಟ್ ಚೆಲ್ಲಾಪಿಲ್ಲಿಯಾಗಿವೆ.

ಗಾಳಿ ಆರ್ಭಟಕ್ಕೆ ನಲುಗಿದ ಕುಂದಾಪ್ರ

ಕುಂದಾಪುರ:ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಬಿಸಿದ ಗಾಳಿ ಅಬ್ಬರಕ್ಕೆ ಅಕ್ಷರಹ ಸಹ ಕುಂದಾಪ್ರ ಮತ್ತು ಬೈಂದೂರು ತಾಲೂಕಿನ ಪ್ರದೇಶಗಳು ನಲುಗಿವೆ.ಆರ್ಭಟಿಸಿದ ಗಾಳಿ ಹೊಡೆತಕ್ಕೆ ಹಲವಾರು ಕಡೆ ವಿದ್ಯುತ್ ಕಂಬಗಳು,ಮರಗಳು ನೆಲಕ್ಕೆ ಉರುಳಿ ಬಿದ್ದಿವೆ.ಗಾಳಿ ರಭಸಕ್ಕೆ ಪೇಟೆಯಲ್ಲಿ ಅಂಗಡಿಗಳ ಬೋರ್ಡ್ ಮುರಿದು ಬಿದ್ದಿದೆ.ಮನೆಗಳ ಮೇಲೆ ಮರ ಬಿದ್ದು ವ್ಯಾಪಕ ಹಾನಿ ಉಂಟಾಗಿದ್ದು.ವಿದ್ಯುತ್ ಸರಬರಾಜಿಗೆ ತೊಂದರೆ ಉಂಟಾಗಿತ್ತು.ಸಂಜೆಯಾಗುತ್ತಲೆ ನದಿಗಳ ನೀರಿನ ಮಟ್ಟ ಏರಿಕೆ ಆಗಿದೆ.

You cannot copy content of this page