ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ವಾರ್ಷಿಕ ಕ್ರೀಡಾಕೂಟ 2024-2025

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟ ಮಹಾತ್ಮ ಗಾಂಧಿ ಮೈದಾನ ಅಜ್ಜರಕಾಡುನಲ್ಲಿ ಜರುಗಿತು.ಹಿರಿಯ ದೈಹಿಕ ನಿರ್ದೇಶಕ ಯುನೈಟೆಡ್ ಉಡುಪಿ ಶಾಲಿನಿ ರಾಜೇಶ್ ಶೆಟ್ಟಿ ಅವರು ಕ್ರೀಡಾಕೂಟವನ್ನು ಉದ್ದೇಶಿಸಿ ಮಾತನಾಡಿ,ದೈಹಿಕ ಚಟುವಟಿಕೆಯಲ್ಲಿ ಭಾಗಿಯಾಗಿ ಯಾಗುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಉತ್ತಮಗೊಳ್ಳುವುದು ಮಾತ್ರವಲ್ಲದೆ,ನಮ್ಮ ಪ್ರತಿಭೆಯನ್ನು ಹೊರ ಹಾಕುವಲ್ಲಿ ಅವಕಾಶವನ್ನು ನೀಡುತ್ತದೆ ಎಂದು ಹೇಳಿದರು.ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಸಂಸ್ಥಾಪಕರಾದ ಸುಬ್ರಹ್ಮಣ್ಯ ಹಾಗೂ ನಿರ್ದೇಶಕಿ ಮಮತಾ ವಿದ್ಯಾರ್ಥಿಗಳಿಗೆ ಹಿತನುಡಿಗಳನ್ನು ನೀಡಿದರು.ಕಾಲೇಜಿನ ಪ್ರಿನ್ಸಿಪಾಲ್ ಡಾ. ಸೀಮಾ.ಜಿ ಭಟ್,ವೈಸ್ […]

ಸ್ಕೈಡೈನಿಂಗ್ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭೇಟಿ: ಪ್ರಕೃತಿ ಸೌಂದರ್ಯಕ್ಕೆ ಮನಸೋತ ಸಚಿವ

ಕುಂದಾಪುರ:ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದ್ದು,ಇಲ್ಲಿಗೆ ಬರುವಂತೆ ಸಂಸದರು, ಶಾಸಕರು ಮನವಿ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಈ ಭಾಗದ ಪ್ರವಾಸೋದ್ಯಮ ತಾಣಗಳನ್ನು ವೀಕ್ಷಿಸಲು ಬಂದಿದ್ದು,ನದಿ ಹಾಗೂ ಸಮುದ್ರದ ಸುಂದರವಾದ ವಾತಾವರಣ ಇಲ್ಲಿದೆ.ತ್ರಾಸಿ- ಮರವಂತೆಯನ್ನು ಅತ್ಯುತ್ತಮ ಪ್ರವಾಸೋದ್ಯಮ ಸ್ಥಳವನ್ನಾಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ವಿಸ್ತೃತ ಯೋಜನೆಯೊಂದಿಗೆ ಪ್ರಸ್ತಾವನೆ ಸಲ್ಲಿಸಿದರೆ,ಒಟ್ಟಾಗಿ ಅಭಿವೃದ್ಧಿಪಡಿಸಬಹುದು ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದರು.ಅವರು ಗುರುವಾರ ಸಂಜೆ ತ್ರಾಸಿ – ಮರವಂತೆ ಬೀಚ್ ಗೆ ಭೇಟಿ ನೀಡಿದ,ಸಮಯದಲ್ಲಿ ತ್ರಾಸಿ ಬೀಚ್ ನಲ್ಲಿನ […]

ತ್ರಾಸಿ ಜಂಕ್ಷನ್‍ನಲ್ಲಿ ಅಪಘಾತ:ಕಾರು ಜಖಂ

ತ್ರಾಸಿ:ಚರ್ಚ್ ರೋಡ್ ನಿಂದ ಜಂಕ್ಷನ್ ಮೂಲಕ ವಿರುದ್ಧ ದಿಕ್ಕಿನಲ್ಲಿ ಕ್ರಾಸಿಂಗ್ ತೆಗೆದುಕೊಂಡು ಸಾಗುತ್ತಿದ್ದ ವೇಳೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಸಾಗುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರುಗಳೆರಡು ಜಖಂ ಗೊಂಡಿದ್ದ ಘಟನೆ ಮಂಗಳವಾರ ನಡೆದಿದೆ.ಅಪಘಾತದಲ್ಲಿ ಚಾಲಕರಿಬ್ಬರು ಪಾರಾಗಿದ್ದಾರೆ.

You cannot copy content of this page