ಕೊಲ್ಪೆ: ಕಾರು ಡಿಕ್ಕಿ ಲಾರಿ ಚಾಲಕರಿಬ್ಬರಿಗೆ ಗಂಭೀರ ಗಾಯ

ಮಂಗಳೂರು:ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು- ಮಂಗಳೂರು ನಡುವೆ ನೆಲ್ಯಾಡಿ ಸಮೀಪದ ಕೋಲ್ಪೆಯಲ್ಲಿ ಎಂಬಲ್ಲಿ ಲಾರಿ ನಿಲ್ಲಿಸಿ ಚಹಾ ಕುಡಿದು ಲಾರಿಯ ಕಡೆಗೆ ನಡೆದುಕೊಂಡು ಬರುತ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ಡಿಕ್ಕಿಯಾದ ಪರಿಣಾಮ ಸಕಲೇಶಪುರ ಮೂಲದ ಲಾರಿ ಚಾಲಕರಿಬ್ಬರು ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜು.8ರಂದು ಬೆಳಿಗ್ಗೆ ನಡೆದಿದೆ.ಸಕಲೇಶಪುರ ಮೂಲದ ವಿನಯ ಕುಮಾರ್ ಹಾಗೂ ಮಂಜ ಗಾಯಗೊಂಡ ಲಾರಿ ಚಾಲಕರು. ಇವರಿಬ್ಬರು ಕೋಲ್ಪೆಯಲ್ಲಿ ಲಾರಿ ನಿಲ್ಲಿಸಿ ಪಕ್ಕದ ಕ್ಯಾಂಟಿನ್ ವೊಂದರಲ್ಲಿ ಚಹಾ ಕುಡಿದು […]

ಪ್ರವಾಸಿಗರಿಗೆ ಗಂಗೊಳ್ಳಿ ಠಾಣಾಧಿಕಾರಿ ಪಾಠ

ಕುಂದಾಪುರ:ಮಳೆಗಾಲದಲ್ಲಿ ಕಡಲು ಪ್ರಕ್ಷುಬ್ಧಗೊಳ್ಳುವುದರಿಂದ ಕಡಲಿಗೆ ಇಳಿಯದಂತೆ ನಿಷೇಧ ಹೇರಲಾಗಿದ್ದರು ತ್ರಾಸಿ-ಮರವಂತೆ ಬೀಚ್‍ಗೆ ಆಗಮಿಸುತ್ತಿರುವ ಪ್ರವಾಸಿಗರು ನಿಷೇಧದ ನಡುವೆಯೂ ಕಡಲಿಗೆ ಇಳಿದು ಮೋಜು ಮಸ್ತಿಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ.ಪ್ರವಾಸಿಗರ ಹಿತದೃಷ್ಟಿಯಿಂದ ಗಂಗೊಳ್ಳಿ ಠಾಣೆಯ ಠಾಣಾಧಿಕಾರಿ ಹರೀಶ್.ಆರ್ ನಾಯ್ಕ್ ಅವರು ಕಡಲ ಪ್ರಕ್ಷುಬ್ಧತೆ ಕುರಿತು ಪ್ರವಾಸಿಗರಿಗೆ ತಿಳಿ ಹೇಳುತ್ತಿರುವ ಪಾಠ ಜನ ಮೆಚ್ಚುಗೆಗೆ ಪಾತ್ರವಾಗಿದೆ.ದೈತ್ಯಾಕಾರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿರುವ ದೃಶ್ಯವನ್ನು ತಮ್ಮ ಸೆಲ್ಫಿ ಜತೆಗೆ ಸೇರೆ ಹಿಡಿಯಲು ಕೆಂಪು ಪಟ್ಟಿಯನ್ನು ದಾಟಿ ಬ್ರೆಕ್ ವಾಟರ್ ಮೇಲೆ ಪ್ರವಾಸಿಗರು ತೆರಳುತ್ತಿದ್ದಾರೆ.ಕಲ್ಲಿನ ಮೇಲೆ ಪಾಚಿ ಬೆಳೆದಿದ್ದರಿಂದ […]

ಸೌಪರ್ಣಿಕಾ ನದಿ ತೀರ ಪ್ರದೇಶಕ್ಕೆ ಜಲದಿಗ್ಬಂದನ

ಕುಂದಾಪುರ:ಕಳೆದ ಒಂದು ವಾರಗಳಿಂದ ನಿರಂತರವಾಗಿ ಸುರಿಯತ್ತಿರುವ ಕುಂಭದ್ರೋಣ ಮಳೆಗೆ ಸೌಪರ್ಣಿಕಾ ನದಿ ತುಂಬಿ ಹರಿದ ಪರಿಣಾಮ ಅರೆಹೊಳೆ,ಬಡಾಕೆರೆ,ನಾವುಂದ ಸಾಲ್ಬಡ,ಮರವಂತೆ,ನಾವುಂದ ಕುರು ಹಾಗೂ ಕುರು ದ್ವೀಪ ಪ್ರದೇಶದಲ್ಲಿ ಕಳೆದ ಐದು ದಿನಗಳಿಂದ ನೆರೆ ಕಾಣಿಸಿಕೊಂಡಿದ್ದು ನದಿ ಪಾತ್ರ ಪ್ರದೇಶ ಜಲಾವೃತಗೊಂಡಿದೆ.ಸಾವಿರಾರು ಹೆಕ್ಟರ್ ಕೃಷಿ ಭೂಮಿ ನೀರಿನಲ್ಲಿ ಮುಳುಗಿ ಹೋಗಿದ್ದು ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.

You cannot copy content of this page