ಜನತಾ ನವನೀತ-2024 ಅಭಿವಿನ್ಯಾಸ ಕಾರ್ಯಕ್ರಮ ಉದ್ಘಾಟನೆ
ಕುಂದಾಪುರ:ಮಕ್ಕಳ ಒಳಗೆ ಅಡಗಿರುವ ಆತಂತರಿಕ ತುಡಿತವನ್ನು ಹುಡುಕಿ ಅವರ ಅಭಿರುಚಿಗೆ ತಕ್ಕಂತೆ ಶಿಕ್ಷಣವನ್ನು ನೀಡುವುದರಿಂದ ವಿದ್ಯಾರ್ಥಿಗಳಿಗೆ ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯವಾಗುತ್ತದೆ.ಆ ನಿಟ್ಟಿನಲ್ಲಿ ಹೆಮ್ಮಾಡಿ ಜನತಾ ಕಾಲೇಜು ಮುಂದುಡಿ ಇಡುತ್ತಿದ್ದು ಹೆಚ್ಚಿನ ರ್ಯಾಂಕ್‍ಗಳನ್ನು ಗಳಿಸಲು ಸಾಧ್ಯವಾಗಿದೆ.ಕಾಲೇಜು ಆರಂಭಗೊಂಡ ಕೇವಲ ಎರಡೆ ವರ್ಷದಲ್ಲಿ 256 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿರುವುದು ಐತಿಹಾಸಿಕ ದಾಖಲೆ ಎಂದು ಶಿಕ್ಷಕರು ಮತ್ತು ರಾಷ್ಟ್ರೀಯ ಮಟ್ಟದ ವ್ಯಕ್ತಿತ್ವ ವಿಕಸನ ತರಬೇತುದಾರರಾದ ರಾಜೇಂದ್ರ ಭಟ್.ಕೆ ಹೇಳಿದರು.ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ […]





























































































































































































































































































































































































































































































































































































































































































































































































































































































































































































































































































































































































































































































































































































































































































