ಮರವಂತೆ ಶ್ರೀ ಮಹಾರಾಜ ವರಾಹ ಸ್ವಾಮಿ ದೇವಸ್ಥಾನದ ಬೆಳ್ಳಿ ರಥ ನಿರ್ಮಾಣಕ್ಕೆ ಧನ ಸಹಾಯ ಹಸ್ತಾಂತರ

ಕುಂದಾಪುರ:ವಲಯ ನಾಡದೋಣಿ ಮೀನುಗಾರರ ಸಂಘ ಉಪ್ಪುಂದ ವತಿಯಿಂದ ಮರವಂತೆ ಶ್ರೀ ಮಹಾರಾಜ ವರಾಹ ಸ್ವಾಮಿ ದೇವಸ್ಥಾನದ ಬೆಳ್ಳಿ ರಥ ನಿರ್ಮಾಣಕ್ಕೆ 10,00,101 ರೂ ಮೊತ್ತದ ಚೆಕ್‍ನ್ನು ಶುಕ್ರವಾರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹಸ್ತಾಂತರಿಸಲಾಯಿತು.ಸಂಘದ ಅಧ್ಯಕ್ಷ ಉಪ್ಪುಂದ ಆನಂದ ಖಾರ್ವಿ ಮಾತನಾಡಿ, ಮೀನುಗಾರರು ಈ ಹಿಂದೆ ದೇವಸ್ಥಾನಕ್ಕೆ ಉಪ್ಪುಂದ ರಥವನ್ನು ನೀಡಿದ್ದು ಶ್ರೀ ದೇವರಲ್ಲಿ ಮೀನುಗಾರಿಕಾ ಉದ್ಯೋಗದಲ್ಲಿ ಸಮೃದ್ಧಿಯನ್ನು ಕರುಣಿಸುವ ಸಲುವಾಗಿ ಪ್ರಾರ್ಥಿಸಿದಂತೆ ಬೆಳ್ಳಿ ರಥದ ನಿರ್ಮಾಣಕ್ಕೆ ಸಂಘದ ಮೀನುಗಾರರ ವತಿಯಿಂದ ಈ ಕೊಡುಗೆ ನೀಡಲಾಗಿದೆ ಎಂದು […]

ಜಲಜೀವನ್ ಹೊಂಡಕ್ಕೆ ಉರುಳಿದ ಸರಕಾರಿ ಬಸ್

ಉಡುಪಿ:ಕುಂದಾಪುರ ದಿಂದ ಗಂಗೊಳ್ಳಿಗೆ ಸಾಗುತ್ತಿದ್ದ ಸರಕಾರಿ ಬಸ್ ಗುಜ್ಜಾಡಿ ಮುಖ್ಯ ರಸ್ತೆಯಲ್ಲಿ ಬೇರೊಂದು ಗಾಡಿಗೆ ಸೈಡ್ ಕೊಡುತ್ತಿದ್ದ ಸಮಯದಲ್ಲಿ ರಸ್ತೆ ಬದಿಯಲ್ಲಿದ್ದ ಜಲ ಜೀವನ್ ಮೆಷಿನ್ ನೀರಿನ ಪೈಪ್ ಲೈನ್ ಹೊಂಡದಲ್ಲಿ ಸಿಲುಕಿದ ಘಟನೆ ಶನಿವಾರ ನಡೆದಿದೆ.ಕ್ರೈನ್ ಸಹಾಯದಿಂದ ಹೊಂಡದಲ್ಲಿ ಸಿಲುಕಿದ ಬಸ್‍ನ್ನು ಮೇಲಕ್ಕೆ ಎತ್ತಲಾಯಿತು.ಮುಳ್ಳಿಕಟ್ಟೆ ಗುಜ್ಜಾಡಿ ಮಾರ್ಗದ ಮುಖ್ಯ ರಸ್ತೆ ಬದಿಯಲ್ಲಿ ಜಲಜೀವನ್ ನೀರಿನ ಪೈಪ್ ಲೈನ್ ಹೊಂಡ ಅಪಾಯವನ್ನು ತಂದೊಡ್ಡುತ್ತಿದ್ದು ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮನೆ ಮೇಲೆ ಮರ ಬಿದ್ದು ಹಾನಿ:ವಿಪತ್ತು ನಿರ್ವಹಣಾ ತಂಡದಿಂದ ತೆರವು

ಕುಂದಾಪುರ:ಭಾನುವಾರ ಸುರಿದ ಭಾರಿ ಗಾಳಿ ಮಳೆಗೆ ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡೆಯಂಗಡಿ ಜನತಾ ಕಾಲೋನಿಯಲ್ಲಿ ಬೃಹತ್ ಗಾತ್ರದ ಮರ ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬ ಮುರಿದು ಬಿದ್ದಿದೆ.ಗಂಗೆ ದೇವಾಡಿಗ ಹಾಗೂ ರಾಘವೇಂದ್ರ ಭಂಡಾರಿ ಅವರ ಮನೆಗೂ ಹಾನಿ ಉಂಟಾಗಿದೆ.ರಸ್ತೆ ಸಂಚಾರಕ್ಕೂ ತೊಡಕು ಉಂಟಾಗಿತ್ತು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಪತ್ತು ನಿರ್ವಹಣಾ ತಂಡ ಪಡುಕೋಣೆ-ನಾಡ ವಲಯದ ಸದಸ್ಯರು ಕ್ಷೀಪ್ರಗತಿಯಲ್ಲಿ ಮರವನ್ನು ತೆರವುಗೊಳಿಸಿದರು.

You cannot copy content of this page