ಕೇರಳ ವಯನಾಡಿನಲ್ಲಿ ಭೂ ಕುಸಿತ:ಏಳಕ್ಕೂ ಅಧಿಕ ಮಂದಿ ಸಾವು, ಸಂಕಷ್ಟಕ್ಕೆ ಸಿಲುಕಿದ ನೂರಾರು ಕುಟುಂಬಗಳು

ಮಂಗಳೂರು:ಕೇರಳ ರಾಜ್ಯದ ವಯನಾಡಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉಂಟಾಗಿರುವ ಭೂಕುಸಿತದಿಂದ ಏಳಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ನೂರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದೆ.ಇನ್ನಷ್ಟು ಮಳೆ ಮುಂದುವರಿದರೆ ಹಾನಿ ಪ್ರಮಾಣ ಕೂಡ ಅಧಿಕವಾಗಲಿದೆ.

ಮಲೆನಾಡು ಘಾಟ್ ಪ್ರದೇಶದಿಂದ ಹರಿದು ಬರುತ್ತಿದೆ ನೀರು:ಚಕ್ರ ನದಿಯಲ್ಲಿ ನೀರಿನ ಮಟ್ಟ ಏರಿಕೆ

ಕುಂದಾಪುರ:ಮಲೆನಾಡು ಘಾಟ್ ಪ್ರದೇಶಗಳಿಂದ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು ಚಕ್ರ ನದಿಯಲ್ಲಿ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿದ್ದು ನದಿ ಪಾತ್ರದ ಜನತೆಗೆ ಆತಂಕ ಹುಟ್ಟಿಸಿದೆ.ಮಳೆ ಪ್ರಮಾಣ ಜಾಸ್ತಿ ಆಗಿರುವುದರಿಂದ ಚಕ್ರ ಹಾಗೂ ಶಾವೇಹಾಕ್ಲು ನಿಂದ ಹೆಚ್ಚುವರಿ ನೀರು ನದಿಯ ಮೂಲಕ ಹರಿದು ಬರುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಶಿರಾಡಿ ಘಾಟಿಯಲ್ಲಿ ಗುಡ್ಡ ಕುಸಿತ,ಮಣ್ಣಿನೊಳಗೆ ಸಿಲುಕಿದ ಗ್ಯಾಸ್ ಟ್ಯಾಂಕರ್,ಕಾರು

ಮಂಗಳೂರು:ಶಿರಾಡಿ ಘಾಟಿಯ ಮೇಲ್ಬಾಗ ಸಕಲೇಶಪುರ ತಾಲೂಕಿನ ದೊಡ್ಡತೊಪ್ಲು ಬಳಿ ಭೂಕುಸಿತ ಸಂಭವಿಸಿದ್ದು.ಕಾರು,ಲಾರಿ, ಗ್ಯಾಸ್ ಟ್ಯಾಂಕರ್ ಸಹಿತ ಹಲವು ವಾಹನಗಳು ಮಣ್ಣಿನಲ್ಲಿ ಸಿಲುಕಿಕೊಂಡಿವೆ.ಶಿರಾಡಿ ಹೆದ್ದಾರಿ ಬ್ಲಾಕ್ ಆಗಿದ್ದು ರಸ್ತೆ ಸಂಚಾರಕ್ಕೆ ತೊಡಕಾಗಿದೆ.

You cannot copy content of this page