ಅಕ್ರಮ‌ ಮದ್ಯ ವಶ,ಆರೋಪಿಗಳು ವಶಕ್ಕೆ

ಮಂಗಳೂರು:ಕೊಯ್ಯೂರು ಗ್ರಾಮದ ನೆಕ್ಕಿಲ್‌ ಬೆಳಾಲು ಬಳಿ ರಸ್ತೆಯ ಬದಿ, ಸಾರ್ವಜನಿಕ ಸ್ಥಳದಲ್ಲಿ, ಮಾರಾಟದ ಉದ್ದೇಶದಿಂದ ಅಕ್ರಮವಾಗಿ ಮದ್ಯ ಸಂಗ್ರಹಿಸಿಟ್ಟುಕೊಂಡಿದ್ದ, ಕೊಯ್ಯೂರು ಗ್ರಾಮದ ವಸಂತ (42) ಎಂಬಾತನನ್ನು‌ ಬೆಳ್ತಂಗಡಿ ಪೊಲೀಸ್‌ ಠಾಣಾ ಪೊಲೀಸ್‌ ಉಪ ನಿರೀಕ್ಷಕ ಮುರುಳೀಧರ ನಾಯ್ಕ ಹಾಗೂ ಸಿಬ್ಬಂದಿಗಳು ಮಾ.21ರಂದು ವಶ ಪಡಿಸಿಕೊಂಡಿದ್ದಾರೆ. 90 ಎಂ.ಎಲ್.ನ 2,125 ರೂ.ಮೌಲ್ಯದ 53 ಸ್ಯಾಚೆಟ್‌ ಗಳನ್ನು, ಮದ್ಯ ಮಾರಾಟದಿಂದ ಸಂಗ್ರಹಿಸಿದ್ದ, 230 ರೂ.ನಗದು ಸ್ವಾಧಿನಪಡಿಸಿಕೊಂಡು, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಪೆಟ್ರೋಲಿಯಂ ಪೈಪ್ ಲೈನಿಗೆ ಕನ್ನಕೊರೆದು ಪೆಟ್ರೋಲ್ ಕಳ್ಳತನ

ಮಂಗಳೂರು;ಪುದುವೆಟ್ಟು ಎಂಬಲ್ಲಿ ಹಾದು ಹೋಗಿರುವ ಪೆಟ್ರೋಲಿಯಂ ಪೈಫ್ ಲೈನ್ ಗೆ ಕನ್ನ ಕೊರೆದು ಲಕ್ಷಾಂತರ ಮೌಲ್ಯದ ಪೆಟ್ರೋಲ್ ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.ಪೈನ್ ಲೈನ್ ಕೊರೆದು ಪೆಟ್ರೋಲ್ ಕಳ್ಳತನ ಮಾಡಿರುವ ಬಗ್ಗೆಸಂಬಂಧಿಸಿದ ಕಂಪನಿಯವರು ನೀಡಿರುವ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಈ ಬಗ್ಗೆ ಪೆಟ್ರೋನೆಟ್ ಎಂ ಹೆಚ್ ಬಿ ಲಿಮಿಟೆಡ್ ನ ನೆರಿಯದ ಸ್ಟೇಶನ್ ಇನ್ ಚಾರ್ಜ್ ಆಗಿರುವ ರಾಜನ್ ಅವರು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದು ಮಂಗಳೂರು ಹಾಸನ್ ಬೆಂಗಳೂರು ಪೆಟ್ರೋನೆಟ್ ಪೈಪ್ […]

ಹೆಮ್ಮಾಡಿ:ಅವೈಜ್ಞಾನಿಕ ಕಾಮಗಾರಿ ಸ್ಥಳಿಯರಿಂದ ಪ್ರತಿಭಟನೆ

ಕುಂದಾಪುರ:ಹೆಮ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟು ಎಂಬಲ್ಲಿ ತೋಡು ಹೂಳೆತ್ತದೆ ಹಾಗೂ ನಾದುರಸ್ತಿಯಲ್ಲಿರುವ ಮೋರಿಯನ್ನು ದುರಸ್ತಿ ಗೊಳಿಸದೇ ಅವೈಜ್ಞಾನಿಕವಾಗಿ ರಿವಿಟ್ ಮೆಂಟ್ ನಿರ್ಮಾಣಕ್ಕೆ ಮುಂದಾಗಿರುವುದನ್ನು ವಿರೋಧಿಸಿ ಬುಧವಾರ ಸಿಪಿಎಂ ಪಕ್ಷದ ನೇತೃತ್ವದಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿದರು.ಗ್ರಾಮ ಪಂಚಾಯಿತಿಯ ಕ್ರಮವನ್ನು ಖಂಡಿಸಿ ಎಲ್ಲರಿಗೂ ಉಪ ಯೋಗ ವಾಗುವ ರೀತಿಯಲ್ಲಿ ಕಾಮ ಗಾರಿ ನಡೆಸಿ ಎಂದು ಆಗ್ರಹಿಸಿದರು.ಅಸಮರ್ಪಕ ಕಾಮಗಾರಿ ಯಿಂದ ನೀರು ಸರಾಗವಾಗಿ ಹರಿದು ಹೋಗಲು ತಡೆಯಾಗಿ ಬೇಸಾಯದ ಬೆಳೆ ನಾಶವಾಗುತ್ತದೆ.ಈ ಕುರಿತು ಕಾಮಗಾರಿ ನಡೆಸದಂತೆ ಆಕ್ಷೇಪ ಪತ್ರ ನೀಡಿದ್ದರು […]

You cannot copy content of this page