ಗಂಗೊಳ್ಳಿಯಲ್ಲಿ ಸಂಭ್ರಮದಿಂದ ಹೋಳಿ ಹಬ್ಬ ಆಚರಣೆ

ಕುಂದಾಪುರ:ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ ಕೊಂಕಣಿ ಖಾರ್ವಿ ಸಮಾಜ ಬಾಂಧವರು ಸಂಭ್ರಮದಿಂದ ಮಂಗಳವಾರ ಆಚರಿಸಿದರು.ರಂಗು ರಂಗಿನ ಬಣ್ಣಗಳನ್ನು ಒಬ್ಬರಿಂದೊಬ್ಬರಿಗೆ ಎರಚುತ್ತಾ ನೃತ್ಯ ಹಾಡುಗಾರಿಕೆಯೊಂದಿಗೆ ತಮ್ಮ ವಿನೋದವನ್ನು ವ್ಯಕ್ತಪಡಿಸುತ್ತಾ ಬಣ್ಣದೋಕುಳಿಯಲ್ಲಿ ಜನರು ಮಿಂದೆದ್ದರು.ಗಂಗೊಳ್ಳಿ ಶ್ರೀ ವಿರೇಶ್ವರ ದೇವಸ್ಥಾನದಿಂದ ಆರಂಭಗೊಂಡ ಸಂಪ್ರಾದಾಯಿಕ ಹೋಳಿ ಹಬ್ಬದ ಮೆರವಣಿಗೆ ಗಂಗೊಳ್ಳಿ ಶ್ರೀವೆಂಕರಮಣ ದೇವಸ್ಥಾನದಲ್ಲಿ ಸಮಾಪ್ತಿಗೊಂಡಿತು.ಮೆರವಣಿಗೆ ಆರಂಭಕ್ಕೂ ಮುನ್ನ ಗಂಗೊಳ್ಳಿ ಬಂದರು,ಮಲ್ಯರಬೆಟ್ಟು,ದಾಕುಹಿತ್ಲು,ಗುಡ್ಡೆಕೇರಿ,ಕಂಚುಗೋಡು,ಕಂಚುಗೋಡು ಖಾರ್ವಿ ಕೇರಿ ಒಟ್ಟು ಆರು ಪಂಗಡಗಳ ಹೋಳಿ ತಂಡವು ಶ್ರೀವಿರೇಶ್ವರ ದೇವಸ್ಥಾನದಲ್ಲಿ ಒಟ್ಟುಗೂಡುತ್ತದೆ.ಹೋಳಿ ಹುಣ್ಣಿಮೆ ರಾತ್ರಿಯಂದು ಪ್ರತಿಷ್ಠಾಪಿಸಿದ ಅಡಿಕೆ ಮರಕ್ಕೆ ಪೂಜೆ ಸಲ್ಲಿಸಿದ […]

ಮನೆ ಮನೆ ಹೋಳಿ ಕೋಲಾಟ

ಗಂಗೊಳ್ಳಿ:ಹೋಳಿ ಹಬ್ಬದ ಅಂಗವಾಗಿ ಮಲ್ಲಾರ್ ಬೆಟ್ ಬಂದರ್ ಗಂಗೊಳ್ಳಿ ಹೋಳಿ ತಂಡದವರಿಂದ ಹೋಳಿ ಕೋಲಾಟ ಕುಣಿತ ಸಂಪ್ರದಾಯದಂತೆ ಸೋಮವಾರ ನಡೆಯಿತು.ಹೋಳಿ ತಂಡದ ಸದಸ್ಯರು ಕೋಲಾಟ ಆಡುತ್ತಾ ಪ್ರತಿ ಮನೆಗೆ ತೆರಳುವುದು ವಾಡಿಕೆ ಆಗಿದೆ.ಗಂಗೊಳ್ಳಿ ಭಾಗದ ಖಾರ್ವಿ ಸಮುದಾಯದ ಬಾಂಧವರಿಗೆ ಹೋಳಿ ಹಬ್ಬ ಬಹಳಷ್ಟು ಪ್ರಮುಖವಾದ ಹಬ್ಬವಾಗಿದೆ.

ವಲಸಿಗರಿಂದ ಹೋಳಿ ಹಬ್ಬ ಆಚರಣೆ

ಕುಂದಾಪುರ:ತಾಲೂಕಿನ ಮುಳ್ಳಿಕಟ್ಟೆ ಸಮೀಪ ಹಾದುಗೋಗಿರುವ ರಾಷ್ಟ್ರೀಯ ಹೆದ್ದಾರಿ-66 ಪಕ್ಕದ ಜಾಗದಲ್ಲಿ ಟೆಂಟ್‍ಗಳನ್ನು ಹಾಕಿಕೊಂಡು ವಾಸಮಾಡುವ ಮರಾಠ ಸಮುದಾಯದ ವಲಸಿಗ ಕುಟುಂಬದ ಸದಸ್ಯರು ಹೋಳಿ ಹಬ್ಬವನ್ನು ಐದು ದಿನಗಳ ಕಾಲ ವಿಶೇಷವಾದ ರೀತಿಯಲ್ಲಿ ಆಚರಿಸಿಕೊಳ್ಳುತ್ತಾರೆ.ಕೈಯಲ್ಲಿ ತಮಟೆ ಹಿಡಿದು ಕುಣಿತ ದೊಂದಿಗೆ ಹಾಡಿಕೊಂಡು ಬರುವ ಹೋಳಿ ತಂಡದ ಸದಸ್ಯರು ಅಂಗಡಿ ಮುಂಗಟ್ಟುಗಳಿಗೆ ಭೇಟಿ ನೀಡಿ ಕಾಣಿಕೆಯನ್ನು ಪಡೆದುಕೊಂಡು ಬಣ್ಣವನ್ನು ಪ್ರಸಾದ ರೂಪದಲ್ಲಿ ನೀಡುತ್ತಾರೆ.ಸೇವೆ ರೂಪದಲ್ಲಿ ಪಡೆದ ಕಾಣಿಕೆ ಹಣವನ್ನು ಒಟ್ಟುಗೂಡಿಸಿ ಪೂಜಾ ಸಾಮಾಗ್ರಿಗಳನ್ನು ಖರೀದಿಸಿ,ಮೊದಲನೆ ದಿನ ಕಾಮನನ್ನು ನಿರ್ದಿಷ್ಟ ಸ್ಥಳದಲ್ಲಿ […]

You cannot copy content of this page