ಬೈಕ್ ಮುಖಾಮುಖಿ ಡಿಕ್ಕಿ,ಸವಾರ ಗಂಭೀರ

ಕುಂದಾಪುರ:ತಾಲೂಕಿನ ಮುಳ್ಳಿಕಟ್ಟೆ ಮುಖ್ಯ ರಸ್ತೆ ಅಡಿಗ ಹೊಲೊ ಬ್ಲಾಕ್ ಕ್ರಾಸ್‍ನಲ್ಲಿ ಸೋಮವಾರ ಸಂಭವಿಸಿದ ಬೈಕ್ ಮುಖಾಮುಖಿ ಡಿಕ್ಕಿಯಲ್ಲಿ ಒರ್ವ ಬೈಕ್ ಸವಾರ ಗಂಭೀರ ಸ್ವರೂಪದ ಗಾಯದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ ಘಟನೆ ನಡೆದಿದೆ.ಅಪಘಾತದ ತಿವೃತೆಗೆ ಬೈಕ್ ಚರಂಡಿ ಒಳಗೆ ಬಿದ್ದಿದೆ.ಇನ್ನೋರ್ವ ಬೈಕ್ ಸವಾರರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಅಪಾಯಕಾರಿ ಯಿಂದ ಕೂಡಿದ ಅಡಿಗ ಹೊಲೊ ಬ್ಲಾಕ್ ಕ್ರಾಸ್‍ನಲ್ಲಿ ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ನಾಮಫಲಕ ಅಳವಡಿಕೆ ಸಹಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಆಂಬ್ಯುಲೆನ್ಸ್ ಇಬ್ರಾಹಿಂ ಗಂಗೊಳ್ಳಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು […]

ಹರ್ಕೂರು ಶ್ರೀಮಹಾಗಣಪತಿ ದೇವಸ್ಥಾನ,ಬೆಳ್ಳಿ ಪ್ರಭಾವಳಿ ಮೆರಣಿಗೆ

ಕುಂದಾಪುರ:ತಾಲೂಕಿನ ಹರ್ಕೂರು ಗ್ರಾಮದ ಶ್ರೀಮಹಾಗಣಪತಿ ದೇವಸ್ಥಾನದ ತಾಮ್ರದ ಹೊದಿಕೆಯ ನೂತನ ಶಿಲಾದೇಗುಲ ಸಮರ್ಪಣೆ,ಬ್ರಹ್ಮಕಲಶೋತ್ಸವ ಹಾಗೂ ಶ್ರೀದೇವರ ಪುನರ್ ಪ್ರತಿಷ್ಠೆ ಅಂಗವಾಗಿ ಶ್ರೀಗಣಪತಿ ದೇವರಿಗೆ ಸಮರ್ಪಣೆ ಮಾಡಲಿರುವ ಬೆಳ್ಳಿ ಕಿರೀಟ ಮತ್ತು ಬೆಳ್ಳಿ ಪ್ರಭಾವಳಿಯನ್ನು ಚಂಡೆವಾದನ,ಪೂರ್ಣಕುಂಭ ಸ್ವಾಗತದೊಂದಿಗೆ ಭವ್ಯ ಮೆರವಣಿಗೆ ಮೂಲಕ ಸೋಮವಾರ ಬರಮಾಡಿಕೊಳ್ಳಲಾಯಿತು.ಹರ್ಕೂರು ಶ್ರೀಚಾಮುಂಡೇಶ್ವರಿ ದೇವಸ್ಥಾನದಿಂದ ಹೊರಟ ಮೆರವಣಿಗೆ ಹರ್ಕೂರು ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ಸಮಾಪ್ತಿಗೊಂಡಿತು.ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಬೆಳ್ಳಿ ಪ್ರಭಾವಳಿಗೆ ಪೂಜೆಯನ್ನು ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು,ಸರ್ವ ಸದಸ್ಯರು,ಗ್ರಾಮಸ್ಥರು ಹಾಗೂ ಅರ್ಚಕರು […]

ಅಪಾಯಕಾರಿ ಮರ,ವಿದ್ಯುತ್ ಕಂಬ ಸ್ಥಳಾಂತರಕ್ಕೆ ಆಗ್ರಹ

ಕುಂದಾಪುರ:ತಾಲೂಕಿನ ಆಲೂರು-ಮುಳ್ಳಿಕಟ್ಟೆ ಮುಖ್ಯ ರಸ್ತೆ ಅಂಚಿನಲ್ಲಿದ್ದ ಅಪಾಯಕಾರಿ ವಿದ್ಯುತ್ ಕಂಬ ಸಹಿತ ಮರವನ್ನು ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಸ್ಥಳಾಂತರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.ಸಂಪೂರ್ಣವಾಗಿ ಹದಗೆಟ್ಟು ಹೋಗಿರುವ ಆಲೂರು-ಮುಳ್ಳಿಕಟ್ಟೆ ಮುಖ್ಯ ರಸ್ತೆ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು ಒಂದನೆ ಹಂತದ ಕಾಮಗಾರಿ ಮುಗಿದಿದೆ.ರಸ್ತೆ ಅಭಿವೃದ್ಧಿ ಕಾರ್ಯದ ಸಂದರ್ಭದಲ್ಲಿ ರಸ್ತೆ ಅಂಚಿನಲ್ಲಿದ್ದ ಅಪಾಯಕಾರಿ ವಿದ್ಯುತ್ ಕಂಬ ಮತ್ತು ಮರವವನ್ನು ತೆರವುಗೊಳಿಸದೆ ಗುತ್ತಿಗೆದಾರರು ಕಾಮಗಾರಿ ಕೆಲಸವನ್ನು ನಡೆಸಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.ರಸ್ತೆ ಅಂಚಿನಲ್ಲಿರುವ ಮರವನ್ನು ತೆರವು ಮಾಡದೆ ಬುಡದವರೆಗೆ ಡಾಮರು ಹಾಕಿ ಕೆಲಸವನ್ನು […]

You cannot copy content of this page