ಮುಳ್ಳಿಕಟ್ಟೆ ಸರ್ಕಲ್‍ನಲ್ಲಿ ಸರಣಿ ಅಪಘಾತ,ನಾಲ್ವರಿಗೆ ಗಾಯ

ಕುಂದಾಪುರ:ತಾಲೂಕಿನ ಗಂಗೊಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯ ಹೊಸಾಡು-ಮುಳ್ಳಿಕಟ್ಟೆ ಸರ್ಕಲ್‍ನಲ್ಲಿ ಶುಕ್ರವಾರ ಸಂಭವಿಸಿದ ಗೂಡ್ಸ್ ಲಾರಿ,ಕಾರು,ರಿಕ್ಷಾ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ನಾಲ್ವರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.ತಾಯಿ ಜತೆ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಏಳು ತಿಂಗಳ ಹಸುಗೂಸು ಪವಾಡಸದೃಶವಾಗಿ ಪಾರದ ಘಟನೆ ನಡೆದಿದೆ.ಕುಂದಾಪುರ ಕಡೆಯಿಂದ ಮುಳ್ಳಿಕಟ್ಟೆ ಮಾರ್ಗವಾಗಿ ಬಂಟ್ವಾಡಿ ಕಡೆಗೆ ಸಾಗುತ್ತಿದ್ದ ಕಾರನ್ನು ಚಾಲಕ ಮುಳ್ಳಿಕಟ್ಟೆ ಸರ್ಕಲ್‍ನಲ್ಲಿ ಅಜಾಗರೂಕತೆಯಿಂದ ಯೂಟರ್ನ್ ತೆಗೆದುಕೊಳ್ಳುತ್ತಿದ್ದ ಸಮಯದಲ್ಲಿ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ವೇಗವಾಗಿ ಸಾಗುತ್ತಿದ್ದ ಗೂಡ್ಸ್ ಲಾರಿ ಡಿಕ್ಕಿ ಹೊಡೆದಿದೆ.ಅದೆ ಸಮಯದಲ್ಲಿ ತ್ರಾಸಿ […]

ವಿಶೇಷವಾಗಿ ರೈತರು,ಮೀನುಗಾರರು,ಕಾಫಿ ಬೆಳೆಗಾರರು ಕೈ ಹಿಡಿಯಲಿದ್ದಾರೆ-ಜಯಪ್ರಕಾಶ್ ಹೆಗ್ಡೆ

ಕುಂದಾಪುರ:ಉಡುಪಿ ಜಿಲ್ಲೆ ರಚನೆ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರ ಜತೆಗೆ ರೈತರು,ಮೀನುಗಾರರು,ಕಾಫಿ ಬೆಳೆಗಾರರಿಗೆ ಮಾಡಿದಂತಹ ಅನುಕೂಲತೆಗಳು ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚಿನ ಸಮಯದಲ್ಲಿ ತೊಡಗಿಸಿಕೊಂಡಿದ್ದರಿಂದ ಜನರು ನನ್ನನ್ನು ಬೆಂಬಲಿಸಿ ಮತವನ್ನು ನೀಡಲಿದ್ದಾರೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ವಿಶ್ವಾಸವನ್ನು ವ್ಯಕ್ತಪಡಿಸಿದರು.ಗುರುವಾರ ತಮ್ಮ ಸ್ವಗ್ರಹದಲ್ಲಿ ಮಾಧ್ಯಮ ಮಿತ್ರರೊಂದಿಗೆ ತಮ್ಮ ಚುನಾವಣಾ ಪೂರ್ವ ತಯಾರಿ ಕುರಿತು ಹಾಗೂ ಜನರು ತಮ್ಮ ಮೇಲಿಟ್ಟಿರುವ ಪ್ರೀತಿ ವಿಶ್ವಾಸದ ಬಗ್ಗೆ ಮನದಾಳದ ಮಾತನ್ನು ಹಂಚಿಕೊಂಡರು.ಬ್ಲಾಕ್ ಸಮಿತಿಗಳನ್ನು ಆರಂಭಿಸಿಕೊಂಡು ಈಗಾಗಲೇ […]

ಶ್ರೀ ರಜತ ಕವಚ ಸಮರ್ಪಣೆ ಪುರಮೆರವಣಿಗೆ

ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಕಂಚುಗೋಡು ಶ್ರೀರಾಮ ದೇವಸ್ಥಾನದಲ್ಲಿ ಏಪ್ರಿಲ್ 10 ರಿಂದ ಏಪ್ರಿಲ್ 22 ರ ತನಕ ನಡೆಯಲಿರುವ ಸುವರ್ಣ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಶ್ರೀರಾಮ ದೇವರಿಗೆ ಸಮರ್ಪಣೆ ಮಾಡಲಿರುವ ರಜತ ಕವಚ ಪುರ ಮೆರವಣಿಗೆ ಬುಧವಾರ ವಿಜೃಂಭಣೆಯಿಂದ ನಡೆಯಿತು.ತ್ರಾಸಿ ಸರ್ಕಲ್ ನಿಂದ ಶ್ರೀರಾಮ ಮಂದಿರ ವರೆಗೆ ಭವ್ಯ ಮೆರವಣಿಗೆ ಸಾಗಿತು.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು, ಪದಾಧಿಕಾರಿಗಳು ಸದಸ್ಯರು, ಸುವರ್ಣ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷರು ಮತ್ತು ಮಹಿಳಾ ಸಮಿತಿ ಅಧ್ಯಕ್ಷರು,ಸದಸ್ಯರು ಉಪಸ್ಥಿತರಿದ್ದರು.

You cannot copy content of this page