ಗೂಳಿ ಕಾಳಗದಲ್ಲಿ ಬೈಕ್‍ಗೆ ಹಾನಿ

ಕುಂದಾಪುರ:ಗಂಗೊಳ್ಳಿ ಮ್ಯಾಂಗನೀಸ್ ರೋಡ್ ಬಸ್ಟ್ಯಾಂಡ್ ಬಳಿ ಗೂಳಿಗಳ ನಡುವೆ ನಡೆದ ಕಾಳಗದಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ ಬೈಕ್‍ಗೆ ಹಾನಿಯಾದ ಘಟನೆ ಬುಧವಾರ ನಡೆದಿದೆ.ಮದವೇರಿದ ಗೂಳಿಗಳೆರಡು ಹಲವಾರು ಗಂಟೆಗಳಿಂದ ಎಡಬಿಡದೆ ಪರಸ್ಪರ ಕಾಳಗವನ್ನು ನಡೆಸುತ್ತಿದ್ದವು.ಸ್ಥಳೀಯರು ಗೂಳಿಗಳ ಮೇಲೆ ಪೈಪ್ ಮೂಲಕ ನೀರನ್ನು ಹಾಯಿಸಿದರು ಗೂಳಿಗಳ ಮೈಗೆ ತಂಪೆರಲೆ ಇಲ್ಲಾ.ಗೂಳಿಗಳು ಹೊಯ್ದಾಟ ಮಾಡುತ್ತಾ ರಸ್ತೆ ಬದಿಯಲ್ಲಿ ನಿಲ್ಲಿಸಿದ ಬೈಕ್ ಗುದ್ದಿವೆ.ಗೂಳಿಗಳ ನಡುವೆ ನಡೆದ ಕಾದಾಟದಲ್ಲಿ ಬೈಕ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ರಾಮ ನವಮಿ ಪಲ್ಲಕ್ಕಿ ಉತ್ಸವ ಮೆರವಣಿಗೆ

ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಕಂಚುಗೋಡು ಶ್ರೀರಾಮ ಮಂದಿರದಲ್ಲಿ ರಾಮನವಮಿ ಉತ್ಸವ ಅಂಗವಾಗಿ ಅಖಂಡ ಭಜನಾ ಕಾರ್ಯಕ್ರಮ,ಸತ್ಯನಾರಾಯಣ ಪೂಜೆ,ಅನ್ನಸಂತರ್ಪಣೆ ಹಾಗೂ ಶ್ರೀರಾಮ ದೇವರ ಪಲ್ಲಕ್ಕಿ ಉತ್ಸವ ಮೆರವಣಿಗೆ ಬುಧವಾರ ವಿಜೃಂಭಣೆಯಿಂದ ನಡೆಯಿತು.ಕಂಚುಗೋಡು ಶ್ರೀರಾಮ ಮಂದಿರದ ಸುವರ್ಣ ಮಹೋತ್ಸವ ಅಂಗವಾಗಿ ಏಪ್ರಿಲ್ 18 ರ ಗುರುವಾರದಂದು ಸಂಜೆ 4 ಗಂಟೆ ಯಿಂದ ವೈಭವದ ಐತಿಹಾಸಿಕ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವ ಕಾರ್ಯಕ್ರಮ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ.ಡಾ.ಎ ಚನ್ನಕೇಶವ ಗಾಯತ್ರಿ ಭಟ್ ಗಜಪುರ ಆನಗಳ್ಳಿ ಹಾಗೂ […]

ಮಾರಣಕಟ್ಟೆ ಸುಬ್ರಹ್ಮಣ್ಯ ಮಂಜರ ಸಂಸ್ಮರಣಾ ಕಾರ್ಯಕ್ರಮ,ಸಾಧಕರಿಗೆ ಪ್ರಶಸ್ತಿ ಪ್ರದಾನ,ಅಶಕ್ತರಿಗೆ ಧನ ಸಹಾಯ ವಿತರಣೆ

ಕುಂದಾಪುರ:ಮಾರಣಕಟ್ಟೆ ಸುಬ್ರಹ್ಮಣ್ಯ ಮಂಜ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಾರಣಕಟ್ಟೆ ಸುಬ್ರಹ್ಮಣ್ಯ ಮಂಜರವರ ಸಂಸ್ಮರಣಾ ಕಾರ್ಯಕ್ರಮದ ಅಂಗವಾಗಿ ಕಲ್ಪವೃಕ್ಷ ಸೇವೆ ಉಸಿರು ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ,ಅಶಕ್ತರಿಗೆ ಧನಸಹಾಯ ವಿತರಣೆ ಕಾರ್ಯಕ್ರಮ ಅನುಗ್ರಹ ಮಾರಣಕಟ್ಟೆಯಲ್ಲಿ ಮಂಗಳವಾರ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾರಣಕಟ್ಟೆ ಸುಬ್ರಹ್ಮಣ್ಯ ಮಂಜ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಾದ ಎಂ.ಕೃಷ್ಣ ಮೂರ್ತಿ ಮಂಜರು ಮಾತನಾಡಿ,ದುಡಿಮೆ ಒಂದಂಶ ಹಣವನ್ನು ಸಮಾಜಕ್ಕೆ ಮೀಸಲು ಇಡುವುದರಿಂದ ಅಶಕ್ತರ ಬಾಳಿಗೆ ನೆರವಾಗುವುದರ ಜೊತೆಗೆ ಸಶಕ್ತವಾದ ಸಮಾಜ ನಿರ್ಮಾಣ ಮಾಡುವಲ್ಲಿ ಸಹಕಾರ […]

You cannot copy content of this page