ಏಪ್ರಿಲ್.4 ರಿಂದ ಶ್ರೀರಾಮ ಶ್ರೀ ಗಣಪತಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ತ್ರಾಸಿ,ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮ

ಕುಂದಾಪುರ:ತಾಲೂಕಿನ ತ್ರಾಸಿ ಗ್ರಾಮದ ಶ್ರೀರಾಮ,ಶ್ರೀ ಗಣಪತಿ,ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಏಪ್ರಿಲ್ 04 ರಿಂದ ಏಪ್ರಿಲ್ 05 ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ.ಶ್ರೀ ದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಅಂಗವಾಗಿ ಏಪ್ರಿಲ್.04 ರಂದು ಗುರುವಾರ ಬ್ರಹ್ಮಕಲಶೋತ್ಸವ ವೈದಿಕ ವಿಧಾನ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ.ಏಪ್ರಿಲ್ 05 ರಂದು ಶುಕ್ರವಾರ ಶ್ರೀರಾಮ, ಶ್ರೀ ಗಣಪತಿ, ಶ್ರೀ ಅಯ್ಯಪ್ಪ ಸ್ವಾಮಿ ದೇವರಿಗೆ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ವೇದ ಮೂರ್ತಿ ಡಾ.ಭರತ್ ಐತಾಳ್ ಉಳ್ಳೂರು […]

ಮರವಂತೆ:ನೆರಳು ಮನೆ ಹಸ್ತಾಂತರ

ಕುಂದಾಪುರ:ಅಶಕ್ತರ ಬಾಳಿಗೆ ನೆರವಾಗುವ ದೃಷ್ಟಿಯಿಂದ ಸೂರನ್ನು ಕಟ್ಟಿಸಿಕೊಟ್ಟಿರುವುದು ಬಹಳಷ್ಟು ಉತ್ತಮವಾದ ಕೆಲಸವಾಗಿದೆ.ಮಾನವ ಜನಾಂಗ ಒಂದೆ ಎನ್ನುವ ಮನೋಭಾವದಿಂದ ಬಾಳಿದರೆ ಮಾತ್ರ ಸಮಾಜದಲ್ಲಿನ ಅಸಾಮತೋಲನವನ್ನು ಹೊಗಲಾಡಿಸಬಹುದು ಎಂದು ಪತ್ರಕರ್ತ ಅರುಣ್ ಕುಮಾರ್ ಶಿರೂರು ಹೇಳಿದರು.ಬಾಂಧವ್ಯ ಫೌಂಡೇಶನ್ ನೆರಳು ಯೋಜನೆ ವತಿಯಿಂದ ಬೈಂದೂರು ತಾಲೂಕಿನ ಮರವಂತೆಯಲ್ಲಿ ನಿರ್ಮಿಸಿದ ನೆರಳು 11ನೇ ಮನೆಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.ಬಾಂಧವ್ಯ ಫೌಂಡೇಶನ್ ಸ್ಥಾಪಕಾಧ್ಯಕ್ಷ ದಿನೇಶ್ ಬಾಂಧವ್ಯ ಅವರು ಫಲಾನುಭವಿ ತುಂಗ ಪೂಜಾರಿ ಅವರಿಗೆ ಮನೆಯ ಕೀ ಹಸ್ತಾಂತರಿಸಿದರು.ಝೀ ಕನ್ನಡ ಸರಿಗಮಪ ಚಾಂಪಿಯನ್ ಯಶವಂತ್ […]

ಗಂಗೊಳ್ಳಿ:ಬಟ್ಟೆ ಅಂಗಡಿಯಲ್ಲಿ ಕಳ್ಳತನ

ಕುಂದಾಪುರ:ತಾಲೂಕಿನ ಗಂಗೊಳ್ಳಿ ಜಾಮೀಯಾ ಕಾಂಪ್ಲೆಕ್ಸ್‍ನಲ್ಲಿರುವ ಮಾಲಿ ರಿಜ್ವಾನ್ ಎಂಬುವವರ ಎಮ್.ಎಮ್ ಕಲೆಕ್ಷನ್ ಬಟ್ಟೆ ಹಾಗೂ ಪ್ಯಾನ್ಸಿ ಅಂಗಡಿಗೆ ನುಗ್ಗಿದ ಕಳ್ಳರು 90,000.ರೂ ನಗದು ಹಾಗೂ 15,000.ರೂ ಮೌಲ್ಯದ ಮೊಬೈಲ್ ಕಳವು ಗೈದಿರುವ ಘಟನೆ ಭಾನುವಾರ ನಡೆದಿದೆ.ಎಮ್.ಎಮ್ ಕಲೆಕ್ಷನ್ ಬಟ್ಟೆ ಹಾಗೂ ಪ್ಯಾನ್ಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರು ಸಂಜೆ ಸುಮಾರು 7 ಗಂಟೆ ಸುಮಾರಿಗೆ ಅಂಗಡಿಗೆ ಬಾಗಿಲನ್ನು ಹಾಕಿ ಪ್ರಾರ್ಥನೆಗೆಂದು ಮಸೀದಿಗೆ ತೆರಳಿದ ಸಮಯದಲ್ಲಿ ಅಂಗಡಿಗೆ ನುಗ್ಗಿದ ಕಳ್ಳರು ಕ್ಯಾಶ್ ಕೌಂಟರ್‍ನಲ್ಲಿದ್ದ ನಗದು ಹಾಗೂ ಬೆಲೆ ಬಾಳುವ […]

You cannot copy content of this page