ಕೆಸರಿನಲ್ಲೊಂದು ದಿನ ಸಾಂಪ್ರದಾಯಿಕ ಕ್ರೀಡಾ ಹಬ್ಬ

ಕುಂದಾಪುರ:ಟೀಮ್ ತ್ರಾಸಿ ವತಿಯಿಂದ ಕೆಸರಿನಲ್ಲೊಂದು ದಿನ ಸಾಂಪ್ರದಾಯಿಕ ಕ್ರೀಡಾ ಹಬ್ಬ ಕಾರ್ಯಕ್ರಮ ಇಪ್ಪಿಬೈಲು ಬೊಬ್ಬರ್ಯ ದೇವಸ್ಥಾನ ವಠಾರದ ಗದ್ದೆ ಬೈಲಿನಲ್ಲಿ ಭಾನುವಾರ ನಡೆಯಿತು.ಕೆಸರಿನಲ್ಲೊಂದು ದಿನ ಕ್ರೀಡಾ ಹಬ್ಬದ ಅಂಗವಾಗಿ ಪುರುಷರಿಗೆ,ಮಹಿಳೆಯರಿಗೆ,ಮಕ್ಕಳಿಗೆ ವೈವಿಧ್ಯಮಯವಾದ ಕ್ರೀಡೆಗಳನ್ನು ಆಯೋಜಿಸಲಾಯಿತು.ಟೀಮ್ ತ್ರಾಸಿ ಬಳಗದ ಸದಸ್ಯರು,ಗ್ರಾಮಸ್ಥರು ಉಪಸ್ಥಿತರಿದ್ದರು.

ಹೊಸಾಡು ಶಾಲೆಗೆ ಅಕ್ಷರ ರಥ ಕೊಡುಗೆ

ಕುಂದಾಪುರ:ತಾಲೂಕಿನ ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಹೊಸಾಡು ಶಾಲೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೊಸಾಡು ಶಾಲೆ ಶತಮಾನೋತ್ಸವ ಸಮಿತಿ ವತಿಯಿಂದ ಅಕ್ಷರ ರಥವನ್ನು ಶಾಲಾ ಎಸ್‍ಡಿಎಂಸಿ ಸಮಿತಿಗೆ ಭಾನುವಾರ ಹಸ್ತಾಂತರ ಮಾಡಲಾಯಿತು.ಹೊಸಾಡು ಶಾಲೆ ಶತಮಾನೋತ್ಸವ ಸಮಿತಿ ಅಧ್ಯಕ್ಷ ಡಾ.ಉಮೇಶ್ ಪುತ್ರನ್,ಎಸ್‍ಡಿಎಂಸಿ ಅಧ್ಯಕ್ಷೆ ರೇಖಾ ಗಣೇಶ್,ನಿವೃತ್ತ ಮುಖ್ಯೋಪಾಧ್ಯಾಯರಾದ ಸದಾಶಿವ ಶೆಟ್ಟಿ ಮತ್ತು ತೇಜಪ್ಪ ಶೆಟ್ಟಿ,ರಾಜೀವ ಶೆಟ್ಟಿ,ಡಾ.ಕಿಶೋರ್ ಕುಮಾರ್ ಶೆಟ್ಟಿ,ಎಸ್‍ಡಿಎಂಸಿ ಸದಸ್ಯರು,ಅಡುಗೆ ಸಿಬ್ಬಂದಿಗಳು ಉಪಸ್ಥಿತರಿದ್ದರು.ಮುಖ್ಯ ಶಿಕ್ಷಕ ರಾಜೇಶ್ ಸ್ವಾಗತಿಸಿ,ವಂದಿಸಿದರು.ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಶಾಲಾ ವಾಹನ ಧಾವಿಸಿ ಬರುವುದರಿಂದ ಗ್ರಾಮೀಣ ಪ್ರದೇಶದ […]

ನಿವೃತ್ತ ಮುಖ್ಯೋಪಾಧ್ಯಾಯ ಸದಾಶಿವ ಶೆಟ್ಟಿಗೆ ಸನ್ಮಾನ

ಕುಂದಾಪುರ:ನಿವೃತ್ತ ನೌಕರರ ಸಂಘ ಹೊಸಾಡು ಮುಳ್ಳಿಕಟ್ಟೆ ವತಿಯಿಂದ ನಿವೃತ್ತ ಮುಖ್ಯೋಪಾಧ್ಯಾಯರಾದ ಸಂಘದ ಅಧ್ಯಕ್ಷ ಸದಾಶಿವ ಶೆಟ್ಟಿ ಅವರನ್ನು ದಿ.ಜಿ.ಎಸ್ ಆಚಾರ್ಯ ಸ್ಮಾರಕ ಸಭಾಭವನ ಮುಳ್ಳಿಕಟ್ಟೆಯಲ್ಲಿ ಶನಿವಾರ ನಡೆದ ಸಂಘದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ರಾಜೀವ ಶೆಟ್ಟಿ,ವಿಶ್ವಂಭರ ಐತಾಳ್,ಕೆ.ಲಿಂಗಪ್ಪ ಗೌಡ,ತೇಜಪ್ಪ ಶೆಟ್ಟಿ,ಗಣಪ್ಪಯ್ಯ ಆಚಾರ್ಯ ಬಿ,ಭಾಸ್ಕರ ಶೆಟ್ಟಿ,ಸಂಪತ್ ಕುಮಾರ್ ಉಪಸ್ಥಿತರಿದ್ದರು.

You cannot copy content of this page