ತಾಂತ್ರಿಕ ಸಮಸ್ಯೆ:ಮುಳ್ಳಿಕಟ್ಟೆ ಸರ್ಕಲ್‍ನಲ್ಲಿ ಪೊಲೀಸ್ ಜೀಪ್ ಪಲ್ಟಿ

ಕುಂದಾಪುರ:ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರವಾರ ದಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಕಾರವಾರ ಪೊಲೀಸ್ ಠಾಣೆಗೆ ಸಂಬಂಧಿಸಿದ ಜೀಪ್‍ನಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯಿಂದಾಗಿ ಚಲಿಸುತ್ತಿದ್ದಾಗಲೆ ನಿಯಂತ್ರಣ ಕಳೆದುಕೊಂಡು ಮುಳ್ಳಿಕಟ್ಟೆ ಸರ್ಕಲ್‍ನಲ್ಲಿ ಸ್ಕಿಡ್ಡ್ ಆಗಿ ಪಲ್ಟಿ ಹೊಡೆದು ರಸ್ತೆ ಮೇಲೆ ಉರುಳಿ ಬಿದ್ದ ಘಟನೆ ಸೋಮವಾರ ನಡೆದಿದೆ.ಅಪಘಾತದಲ್ಲಿ ಪೊಲೀಸ್ ಜಿಪ್ ಡ್ರೈವರ್ ಸೇರಿದಂತೆ ಇಬ್ಬರು ಸಿಬ್ಬಂದಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಬೈಂದೂರು ಸರ್ಕಲ್ ಇನ್‍ಸ್ಪೆಕ್ಟರ್ ಸವಿತ್ರ ತೇಜ,ಗಂಗೊಳ್ಳಿ ಪೊಲೀಸ್ ಠಾಣೆ ಪಿಎಸ್‍ಐ ಹರೀಶ್ ಆರ್ ಮತ್ತು ಗುಪ್ತಚರ […]

ಪರಿಸರ ಮಾಹಿತಿ ಕಾರ್ಯಕ್ರಮ,ಗಿಡ ವಿತರಣೆ

ಕುಂದಾಪುರ:ಶ್ರೀಕೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ಬಿ.ಸಿ ಟ್ರಸ್ಟ್ ಬೈಂದೂರು,ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಅವರ ಆಶ್ರಯದಲ್ಲಿ ಪರಿಸರ ಮಾಹಿತಿ ಕಾರ್ಯಕ್ರಮ ಮತ್ತು ಹಣ್ಣಿನ ಗಿಡ ವಿತರಣೆ ಕಾರ್ಯಕ್ರಮ ಕುಂದಾಬಾರಂದಾಡಿ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಶುಕ್ರವಾರ ನಡೆಯಿತು.ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸುಭಾಷ್ ಶೆಟ್ಟಿ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ದೇವಸ್ಥಾನದ ಸಮಿತಿ ಉಪಾಧ್ಯಕ್ಷ ಸೂರ ಪರಿಸರ ಸಂರಕ್ಷಣೆ ಮಹತ್ವದ ಕುರಿತು ಮಾತನಾಡಿದರು.ಕಾರ್ಯದರ್ಶಿ ಮಂಜುನಾಥ,ಒಕ್ಕೂಟದ ಅಧ್ಯಕ್ಷ ಪದ್ಮನಾಭ ಮತ್ತು ಉಪಾಧ್ಯಕ್ಷೆ ನಾಗರತ್ನ,ಹಕ್ಲಾಡಿ ಪಂಚಾಯಿತಿ ಸದಸ್ಯ […]

ನೆರೆ ಬಾಧಿತ ಪ್ರದೇಶದ ದನಕರುಗಳಿಗೆ ಔಷಧ ವಿತರಣೆ

ಕುಂದಾಪುರ:ನೆರೆ ನೀರಿನಿಂದ ಜಲಾವೃತ್ತವಾಗಿರುವ ಬೈಂದೂರು ತಾಲೂಕಿನ ನಾವುಂದ ಸಾಲ್ಬುಡ ಪ್ರದೇಶಕ್ಕೆ ಬೈಂದೂರು ಪಶು ಆಸ್ಪತ್ರೆ ವೈದ್ಯಾಧಿಕಾರಿ ನಾಗರಾಜ ಖಾರ್ವಿ ಮರವಂತೆ ಮತ್ತು ಸಿಬ್ಬಂದಿಗಳು ದೋಣಿಯಲ್ಲಿ ತೆರಳಿ ದನಕರುಗಳಿಗೆ ಅಗತ್ಯವಾಗಿ ಬೇಕಾಗಿರುವ ಔಷಧಗಳನ್ನು ಶುಕ್ರವಾರ ವಿತರಿಸಿದರು.ಸ್ಥಳೀಯರಾದ ನಾಗರಾಜ ನಾವುಂದ ಸಹರಿಸಿದರು.

You cannot copy content of this page