ಮುಳ್ಳಿಕಟ್ಟೆ ಸರ್ಕಲ್‍ನಲ್ಲಿ ಸಕ್ಕರೆ ತುಂಬಿದ ಲಾರಿ ಪಲ್ಟಿ

ಕುಂದಾಪುರ:ರಾಷ್ರೀಯ ಹೆದ್ದಾರಿ 66 ರಲ್ಲಿ ಕುಂದಾಪುರ ಕಡೆಯಿಂದ ಬಂಟ್ವಾಡಿ ಕಡೆಗೆ ಸಾಗುತ್ತಿದ್ದ ಟ್ರಕ್ ಮುಳ್ಳಿಕಟ್ಟೆ ಸರ್ಕಲ್‍ನಲ್ಲಿ ಯೂರ್ಟನ್ ತೆಗೆದು ಕೊಳ್ಳುತ್ತಿದ್ದ ಸಮಯದಲ್ಲಿ ತ್ರಾಸಿ ಕಡೆಯಿಂದ ಕುಂದಾಪುರ ಕಡೆಗೆ ವೇಗವಾಗಿ ಸಾಗುತ್ತಿದ್ದ ಸಕ್ಕರೆ ತುಂಬಿದ ಲಾರಿ ಟ್ರಕ್‍ನ ಹಿಂಭಾಗಕ್ಕೆ ಡಿಕ್ಕಿ ಹೊಡೆದು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ ರಸ್ತೆ ಮೇಲೆ ಉರುಳಿ ಬಿದ್ದಿದ ಘಟನೆ ಶುಕ್ರವಾರ ನಡೆದಿದೆ.ಅಪಘಾತದಲ್ಲಿ ಲಾರಿ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.ಸಕ್ಕರೆ ಚೀಲ ರಸ್ತೆ ತುಂಬೆಲ್ಲಾ ಉರುಳಿ ಬಿದ್ದಿದ್ದು.ಧಾರಾಕಾರವಾಗಿ ಮಳೆ ಸುರಿಯುತ್ತಿದ್ದ ಪರಿಣಾಮ ಸಕ್ಕರೆ ಚೀಲಕ್ಕೆ ಮಳೆ ನೀರು […]

ತೋಡಿಗೆ ಟ್ಯ್ರಾಕ್ಟರ್ ಉರುಳಿ ಬಿದ್ದು ಹಾನಿ

ಬೈಂದೂರು:ತಾಲೂಕಿನ ನಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಳ್ಳಿ ಎಂಬಲ್ಲಿ ಗದ್ದೆ ಉಳುಮೆ ಮಾಡಿ ವಾಪಾಸು ಮನೆಗೆ ಬರುತ್ತಿದ್ದ ಸಮಯದಲ್ಲಿ ರಾಮಚಂದ್ರ ಹೆಬ್ಬಾರ್ ಎನ್ನುವವರ ಟ್ಯ್ರಾಕ್ಟರ್ ರಸ್ತೆ ಕುಸಿದ ಪರಿಣಾಮ ತೋಡಿಗೆ ಉರುಳಿ ಬಿದಿದ್ದ ಘಟನೆ ಬುಧವಾರ ನಡೆದಿದೆ.ಟ್ರ್ಯಾಕ್ಟರ್ ಇಂಜಿನ್ ಒಳಗೆ ನೀರು ಹೋಗಿದ್ದ ಕಾರಣದಿಂದ ಇಂಜಿನ್ ಸೀಸ್ ಆಗಿದು ಒಂದು ಲಕ್ಷ.ಕ್ಕೂ ಅಧಿಕ ನಷ್ಟ ಉಂಟಾಗಿದೆ.ಜೆಸಿಬಿ ಯಂತ್ರದ ಸಹಾಯದಿಂದ ಟ್ರ್ಯಾಕ್ಟರ್‍ನ್ನು ಮೇಲಕ್ಕೆ ಎತ್ತಲಾಯಿತು.

ಹೊಸಾಡು:ಕಂಟ ಕಡಿದು ಹೋಗಿ ಕೃಷಿ ಭೂಮಿಗೆ ಹಾನಿ

ಕುಂದಾಪುರ:ಎಡಬಿಡದೆ ಸುರಿದ ಭಾರಿ ಮಳೆಗೆ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಾಡು ಬೈಲಿನಲ್ಲಿ ತೋಡಿನ ಕಂಟ ಕಡಿದು ಹೋಗಿ ವ್ಯಾಪಕ ನಷ್ಟ ಉಂಟಾಗಿದೆ.ಮಳೆ ನಡುವೆ ಕೃಷಿಕರು ಕಂಟವನ್ನು ಕಟ್ಟುವುದರಲ್ಲೆ ಹೈರಾಣಾಹಿ ಹೋಗಿದ್ದಾರೆ.ಘಟನಾ ಸ್ಥಳಕ್ಕೆ ಹೊಸಾಡು ಪಂಚಾಯಿತಿ ಸಿಬ್ಬಂದಿ ಮತ್ತು ಗ್ರಾಮ ಕರಣಿಕರ ಕಛೇರಿ ಸಿಬ್ಬಂದಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

You cannot copy content of this page