ಹೇರಂಜಾಲುನಲ್ಲಿ ಶೆಫ್‍ಟಾಕ್ ನ್ಯೂಟ್ರಿಪುಡ್ಸ್ ಪ್ರೈವೇಟ್ ಲಿಮಿಟೆಡ್ ಚಿಕ್ಕಿ,ಚಕ್ಕುಲಿ ಘಟಕ ಉದ್ಘಾಟನೆ

ಕುಂದಾಪುರ:ಬೈಂದೂರು ತಾಲೂಕಿನ ಹೇರಂಜಾಲುನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಮಾಜ ಸೇವಕ ಉದ್ಯಮಿ ಡಾ.ಗೋವಿಂದ ಬಾಬು ಪೂಜಾರಿ ಅವರ ಮಾಲೀಕತ್ವದ ಶೆಫ್‍ಟಾಕ್ ನ್ಯೂಟ್ರಿಪುಡ್ಸ್ ಪ್ರೈವೇಟ್ ಲಿಮಿಟೆಡ್ ಚಿಕ್ಕಿ,ಚಕ್ಕುಲಿ ಮತ್ತು ಇತರ ಖಾದ್ಯಗಳ ಉತ್ಪಾದನಾ ಘಟಕದ ಉದ್ಘಾಟನಾ ಕಾರ್ಯಕ್ರಮ ಶನಿವಾರ ಅದ್ದೂರಿಯಾಗಿ ನಡೆಯಿತು. ಗೌರಿಗದ್ದೆ ಆಶ್ರಮ ಅವಧೂತ ಶ್ರೀ ವಿನಯ್ ಗುರೂಜಿ ಅವರು ಚಿಕ್ಕಿ ಉತ್ಪನವನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿ ಮಾತನಾಡಿ,ಮಹಿಳೆಯರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಬ್ರಹ್ಮಶ್ರೀ ನಾರಾಯಣ ಗುರು ಅವರು ತೆಂಗಿನ ನಾರಿನಿಂದ ಹಗ್ಗವನ್ನು ಕಟ್ಟಿ ಕೊಡುವ ಕಾಯಕಕ್ಕೆ ಮುನ್ನುಡಿಯನ್ನು […]

ಆಲೂರು – ನೂಜಾಡಿಗೆ ಸರಕಾರಿ ಬಸ್ ಕಲ್ಪಿಸುವಂತೆ ಆಗ್ರಹ

ಕುಂದಾಪುರ:ಸ್ತ್ರೀ ಸಾಮಾನ್ಯರು ಕೂಲಿ ಕಾರ್ಮಿಕರು ವಿದ್ಯಾರ್ಥಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ದಿನಂಪ್ರತಿ ದೂರದ ಕುಂದಾಪುರ ಪೇಟೆಗೆ ತೆರಳುತ್ತಾರೆ.ಜನ ಸಂಖ್ಯೆಗೆ ಅನುಗುಣವಾಗಿ ಆಲೂರು-ಗುಡ್ಡೆಯಂಗಡಿ ಮಾರ್ಗದಲ್ಲಿ ಬಸ್‍ಗಳು ಓಡಾಟ ಮಾಡದೆ ಇದ್ದಿದ್ದರಿಂದ ಹಳ್ಳಿ ಭಾಗದ ಜನರಿಗೆ ಬಹಳಷ್ಟು ತೊಂದರೆ ಆಗುತ್ತಿದೆ.ವಿದ್ಯಾರ್ಥಿಗಳಿಗೆ ಹಾಗೂ ಜನ ಸಾಮಾನ್ಯರಿಗೆ ಆಗುತ್ತಿರುವ ಸಂಕಷ್ಟವನ್ನು ತಪ್ಪಿಸಲು ಆಲೂರು ಗುಡ್ಡೆಯಂಗಡಿ ಭಾಗಕ್ಕೆ ಸರಕಾರಿ ಬಸ್ ಓಡಿಸಲು ಕೂಡಲೆ ಕ್ರಮ ಕೈಗೊಳ್ಳಬೇಕೆಂದು ರಾಜು ಪಡುಕೋಣೆ ಆಗ್ರಹಿಸಿದರು.ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ ಆಲೂರು,ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘ ಆಲೂರು,ಕರ್ನಾಟಕ […]

ಆಲೂರು ಸರಕಾರಿ ಪ್ರೌಢಶಾಲೆಯಲ್ಲಿ ಯಕ್ಷಗಾನ ತರಗತಿ ಉದ್ಘಾಟನೆ

ಕುಂದಾಪುರ:ತಾಲೂಕಿನ ಬೈಂದೂರು ವಲಯದ ಆಲೂರು ಸರಕಾರಿ ಪ್ರೌಢಶಾಲೆಯಲ್ಲಿ ಯಕ್ಷಗಾನ ಉದ್ಘಾಟನೆ ಕಾರ್ಯಕ್ರಮ ಭಾನುವಾರ ನಡೆಯಿತು.ಬಡಗುತಿಟ್ಟಿನ ಖ್ಯಾತ ಯಕ್ಷಗಾನ ಕಲಾವಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಸುರೇಂದ್ರ ಆಲೂರು ಉದ್ಘಾಟಿಸಿದರು.ಆಲೂರು ಪಂಚಾಯಿತಿ ಅಧ್ಯಕ್ಷ ರಾಜೇಶ್ ಎನ್ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.ಆಲೂರು ಪ್ರೌಢಶಾಲೆ ಮುಖ್ಯ ಶಿಕ್ಷಕ ನಾರಾಯಣ ಶೆಟ್ಟಿ,ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಲೀನಾ ಕಾರ್ಢಿನ್,ಯಕ್ಷಗುರು ಪ್ರದೀಪ ಶೆಟ್ಟಿ ನಾರ್ಕಳಿ,ನೋಡಲ್ ಶಿಕ್ಷಕಿ ಅಮೃತಾ,ಶಿಕ್ಷಕವೃಂದವರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಶಿಕ್ಷಕರಾದ ಉದಯ ಕುಮಾರ ಶೆಟ್ಟಿ ಸ್ವಾಗತಿಸಿದರು.ಶಶಿಧರ ಶೆಟ್ಟಿ ನಿರ್ವಹಿಸಿದರು.ಪ್ರವೀಣ ಕುಮಾರ ಶೆಟ್ಟಿ ವಂದಿಸಿದರು.ಬೈಂದೂರು ಕ್ಷೇತ್ರದ ಶಾಸಕ ಗುರುರಾಜ […]

You cannot copy content of this page