ಕಡಲ್ಕೊರೆತ ಪ್ರದೇಶಕ್ಕೆ ಶಾಸಕ ಗುರುರಾಜ್ ಗಂಟಿಹೊಳೆ‌ ಭೇಟಿ

ಕುಂದಾಪುರ:ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಕಡಲ್ಕೊರೆತ ದಿಂದ ಹಾನಿ ಉಂಟಾಗಿರುವ ಕಂಚುಗೋಡು ಹಾಗೂ ಗುಜ್ಜಾಡಿ ಭಾಗಕ್ಕೆ ಭೇಟಿ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಸಮುದ್ರ ಅಲೆಗಳ ಆರ್ಭಟದಿಂದ ಉಂಟಾದ ಕಡಲ ತೀರದ ಹಾನಿಗಳ ಕುರಿತು‌ ಸ್ಥಳೀಯರು ಹಾಗೂ ಊರಿನ ಪ್ರಮುಖರಿಂದ ಮಾಹಿತಿ ಪಡೆದರು. ತುರ್ತು ಪರಿಹಾರ ಕಾರ್ಯ ಹಾಗೂ ಮುಂಜಾಗ್ರತಾ ಕ್ರಮದ ಬಗ್ಗೆ ಚರ್ಚೆ ನಡೆಸಿದರು.ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಸಂಬಂಧಪಟ್ಟ ಇಲಾಖೆ ಹಾಗೂ ‌ಸರಕಾರದ ಗಮನಕ್ಕೆ ತರಲಾಗುವುದು ಎಂದರು.ಈ ಸಂದರ್ಭದಲ್ಲಿ ತ್ರಾಸಿ ಗ್ರಾಮ ಪಂಚಾಯತ್ […]

ನಾಯಕವಾಡಿ ಬಸ್‍ಸ್ಟ್ಯಾಂಡ್‍ನಲ್ಲಿ ಮಲಗಿದ ವ್ಯಕ್ತಿ ಸಾವು

ಗಂಗೊಳ್ಳಿ:ಕುಂದಾಪುರ ತಾಲೂಕಿನ ತ್ರಾಸಿ ಗಂಗೊಳ್ಳಿ ಮುಖ್ಯ ರಸ್ತೆಯ ನಾಯಕವಾಡಿ ಬಸ್ ನಿಲ್ದಾಣದ ಒಳಗೆ ಸುಮಾರು 70 ವರ್ಷ ಕ್ಕೂ ಹೆಚ್ಚಿನ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬರು ಮಲಗಿದಲ್ಲೆ ಮೃತ ಪಟ್ಟಿದ ಘಟನೆ ಭಾನುವಾರ ನಡೆದಿದೆ.ಗಂಗೊಳ್ಳಿ ಠಾಣೆಯ ಪಿಎಸ್‍ಐ ಬಸವರಾಜ್ ಕಣಶೆಟ್ಟಿ (ಗುಪ್ತಚರ) ಮತ್ತು ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಹೆಚ್ಚಿನ ಪರಿಶೀಲನೆ ನಡೆಸಿದ ಬಳಿಕ ವಾರಿಸುದಾರರನ್ನು ಪತ್ತೆ ಹಚ್ಚಿದ್ದು ಮೃತರು ತಲ್ಲೂರು ಸಮೀಪದ ನಿವಾಸಿ ಗೋವಿಂದ ಪೂಜಾರಿ ಎಂದು ತಿಳಿದು ಬಂದಿದೆ.ಮೃತರ ಮನೆಯವರು ಸ್ಥಳಕ್ಕೆ ಆಗಮಿಸಿದ ಬಳಿಕ ಶವವನ್ನು […]

ಗಂಗೊಳ್ಳಿ:ಮಳೆಗೆ ಮನೆ ಕುಸಿದು ಬಿದ್ದು ಹಾನಿ

ಕುಂದಾಪುರ:ಗುರುವಾರ ಬೀಸಿದ ಭಾರಿ ಗಾಳಿ ಮಳೆಗೆ ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲರ್ ಬೆಟ್ಟು ನಿವಾಸಿ ರೇಖಾ ಖಾರ್ವಿ ಅವರ ಮನೆ ಕುಸಿದು ಬಿದ್ದು ಅಂದಾಜು 10 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದ ಘಟನೆ ನಡಿದಿದೆ.ಗಂಗೊಳ್ಳಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

You cannot copy content of this page