ಮಂಜುನಾಥ ಸಾಲಿಯಾನ್ ಪರಿಯಾಳ ಸಮಾಜ ಮಹಾಸಭಾ ಅಧ್ಯಕ್ಷರಾಗಿ ಆಯ್ಕೆ

ಕುಂದಾಪುರ:ಪರಿಯಾಳ ಸಮಾಜ ಮಹಾಸಭಾ ಮಂಗಳೂರು ಅದರ 2024-25 ನೇ ಸಾಲಿನ ನೂತನ ಅಧ್ಯಕ್ಷರಾಗಿ ಮಂಜುನಾಥ್ ಸಾಲಿಯಾನ್ ತ್ರಾಸಿ ಆಯ್ಕೆಯಾಗಿದ್ದಾರೆ.ಗೌರವಾಧ್ಯಕ್ಷರಾಗಿ ಪ್ರವೀಣ್ ಸಾಲಿಯಾನ್ ಕಾಫಿ ಕಾಡು ಮಂಗಳೂರು,ಕಾರ್ಯದರ್ಶಿಯಾಗಿ ಸಂದೀಪ್ ಸಾಲಿಯಾನ್ ಹಾರಾಡಿ,ಕೋಶಾಧಿಕಾರಿಯಾಗಿ ಗೌತಮ್ ಬಂಗೇರ ಕರಂಬಾರು ಆಯ್ಕೆಯಾಗಿದ್ದಾರೆ.ಇತ್ತೀಚಿಗೆ ಪರಿಯಾಳ ಸಮಾಜ ಸಮುದಾಯ ಭವನ ಉಚ್ಚಿಲದಲ್ಲಿ ನಡೆದ ಸಂಘದ ಎರಡನೇ ವಾರ್ಷಿಕ ಮಹಾಸಭೆಯಲ್ಲಿ ಮಹಾಸಭಾದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.ಈ ಸಂದರ್ಭದಲ್ಲಿ ಸಂಘದ ಸರ್ವಸದಸ್ಯರು ಉಪಸ್ಥಿತರಿದ್ದರು.

ನಾಗನಿಗೆ ಹಣ್ಣು ಕಾಯಿ,ತನು ಸೇವೆ ಅರ್ಪಿಸಿದ ಭಕ್ತರು

ಕುಂದಾಪುರ:ಪರಶುರಾಮ ಸೃಷ್ಟಿಯ ನೆಲದಲ್ಲಿ ನಾಗನಿಗೆ ಅಗ್ರಸ್ಥಾನವಿದೆ.ನಾಗ ದೇವರ ಪೂಜೆ ಮಾಡಲು ಮಡಿ ಮೈಲಿಗೆ ಅತ್ಯವಶ್ಯಕ.ರಾಜ್ಯದ ಬೇರೆ ಬೇರೆ ಭಾಗದಲ್ಲಿ ನಾಗ ದೇವರ ಶಿಲೆಯನ್ನು ಮುಟ್ಟಿ ಪೂಜೆ ಮಾಡಿದರೆ.ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ರಾಹ್ಮಣರು ಬಿಟ್ಟರೆ ಬೇರೆ ಯಾವ ಜಾತಿಗೂ ನಾಗ ಶಿಲೆಯನ್ನು ಮುಟ್ಟಿ ಪೂಜೆ ಮಾಡುವುದು ನಿಷಿದ್ಧ.ಇಲ್ಲಿನ ಪ್ರತಿ ಕುಟುಂಬಕ್ಕೂ ಮೂಲ ನಾಗ ದೇವರಿದ್ದು ಸಂತಾನ ಕಾರಕನೆಂದೆ ಪೂಜಿಸಲಾಗುತ್ತದೆ.ನಾಗರ ಪಂಚಮಿ ಹಬ್ಬದ ದಿನದಂದು ಮೂಲ ನಾಗನಿಗೆ ಹಣ್ಣು ಕಾಯಿ ಸೇವೆ ನೀಡಿ ತನು ಹಾಕಲಾಗುತ್ತದೆ.ಇದು ಅನಾದಿ ಕಾಲದಿಂದಲೂ […]

ಕಾರವಾರ:ಮುರಿದು ಬಿದ್ದ ಕಾಳಿ ಸೇತುವೆ,ಮುಂದುವರೆದ ಸೇತುವೆ ದುರ್ಘಟನೆ

ಕಾರವಾರ:ಕಾಳಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕಾರವಾರ ಮತ್ತು ಗೋವಾಕ್ಕೆ ಸಂಪರ್ಕಿಸುವ ಸುಮಾರು 40 ವರ್ಷಕ್ಕೂ ಹಳೆಯದಾದ ಕಾಳಿ ಸೇತುವೆ ಮಂಗಳವಾರ ಮಧ್ಯ ರಾತ್ರಿ 1 ಗಂಟೆ ಸುಮಾರಿಗೆ ಏಕಾಏಕಿ ಕುಸಿದು ಬಿದ್ದಿದೆ.ದೇಶಾದ್ಯಂತ ಸೇತುವೆ ಮುರಿದು ಬೀಳುವ ದುರ್ಘಟನೆ ಮುಂದುವರೆದಿದ್ದು ಜನರು ಆತಂಕಿತರಾಗಿದ್ದಾರೆ.ಉತ್ತರ ಕನ್ನಡ ಜಿಲ್ಲೆಯ ಕಾರವಾರ ಕೋಡಿಭಾಗ್ ಬಳಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬೃಹತ್ ಸೇತುವೆ ಯಾವುದೆ ರೀತಿಯ ಮುನ್ಸೂಚನೆ ಸಿಗದೆ ಇರುವ ರೀತಿಯಲ್ಲಿ ನದಿಗೆ ರಾತ್ರೋರಾತ್ರಿ ಉರುಳಿ ಬಿದ್ದಿದೆ.ಈ ವೇಳೆ ಸೇತುವೆ ಮೇಲೆ ಸಾಗುತ್ತಿದ್ದ […]

You cannot copy content of this page