ವಿದ್ಯಾರ್ಥಿವೇತನಾ,ಪ್ರತಿಭಾ ಪುರಸ್ಕಾರ,ಪುಸ್ತಕ ವಿತರಣೆ

ಕುಂದಾಪುರ:ರಾಮಕ್ಷತ್ರಿಯ ಸಂಘ ಗಂಗೊಳ್ಳಿ ವತಿಯಿಂದ ವಿದ್ಯಾರ್ಥಿ ವೇತನಾ,ಪ್ರತಿಭಾ ಪುರಸ್ಕಾರ ಮತ್ತು ಕೊಡೆ,ಪುಸ್ತಕ ವಿತರಣೆ ಕಾರ್ಯಕ್ರಮ ಶ್ರೀ ಸೀತಾರಾಮಚಂದ್ರ ಸಭಾಭವನ ಗಂಗೊಳ್ಳಿಯಲ್ಲಿ ನಡೆಯಿತು.ರಾಮಕ್ಷತ್ರಿಯ ಸಂಘದ ಅಧ್ಯಕ್ಷ ರಾಜೇಶ್ ಎಮ್.ಜಿ ಅಧ್ಯಕ್ಷತೆ ವಹಿಸಿದ್ದರು.ಯುವಕ ಮಂಡಳ ಅಧ್ಯಕ್ಷ ರಾಜೇಂದ್ರ ಬಾಳಯ್ಯನ ಮನೆ,ಮಹಿಳಾ ಮಂಡಳಿ ಅಧ್ಯಕ್ಷೆ ಮೀನಾಕ್ಷಿ ರಾಮಚಂದ್ರ ಹಾಗೂ ರಾಮಕ್ಷತ್ರೀಯ ಸಂಘದ ಉಪಾಧ್ಯಕ್ಷ ಗಂಗಾಧರ ಉಗ್ರಾಣಿ ಮತ್ತು ವಾಸುದೇವ ನಡುಮನೆ,ಜೊತೆ ಕಾರ್ಯದರ್ಶಿ ಶ್ರೀನಿವಾಸ ಉಗ್ರಾಣಿ,ದಿನೇಶ ಉಗ್ರಾಣಿ,ಶ್ರೀಧರ ಹೊಸ್ಮನೆ,ನಾಗೇಶ್ ಅಪ್ಪಯ್ಯನ ಮನೆ,ರಾಧಾಕೃಷ್ಣ ಕೊಡಪಾಡಿ,ಕಾರ್ಯದರ್ಶಿ ಶ್ರೀಧರ ಎನ್ ಸಕ್ಲಾತಿ,ಸುರೇಶ ನಡುಮನೆ ಉಪಸ್ಥಿತರಿದ್ದರು.ಅಪ್ಪಯ್ಯನ ಮನೆ ಮಂಜುನಾಥ […]

ಭಾರಿ ಮಳೆಗೆ ಮನೆ ಗೋಡೆ ಕುಸಿತ:5 ಲಕ್ಷ.ರೂ ನಷ್ಟ

ಕುಂದಾಪುರ:ನಿರಂತರವಾಗಿ ಸುರಿದ ಭಾರಿ ಗಾಳಿ ಮಳೆಗೆ ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಮ್ಮುಂಜೆ ನರಸಿಂಹ ಆಚಾರ್ಯ ಅವರ ಮನೆ ಗೋಡೆ ಕುಸಿತ ಗೊಂಡು ಭಾಗಶಹ ಹಾನಿ ಉಂಟಾಗಿದೆ.ಅಂದಾಜು 5.ಲಕ್ಷ.ರೂ ನಷ್ಟ ಸಂಭವಿಸಿದ ಘಟನೆ ಬುಧವಾರ ನಡೆದಿದೆ.ಕರಾವಳಿ ಭಾಗದಲ್ಲಿ ನಾಲ್ಕು ದಿನಗಳಿಂದ ಎಡಬಿಡದೆ ಸುರಿಯುತ್ತಿದ್ದ ಧಾರಕಾರ ಮಳೆ ಗಾಳಿ ಅಬ್ಬರಕ್ಕೆ ಮನೆಗಳ ಮೇಲೆ ಮರ ಬಿದ್ದು ಹಾನಿ ಆಗಿದ್ದು ಮಾತ್ರವಲ್ಲದೆ.ಮನೆಗಳ ಗೋಡೆ ಕುಸಿತಗೊಂಡಿದ್ದು ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.

ಕುರು ದ್ವೀಪ ಪ್ರದೇಶ ಆವರಿಸಿದ ನೆರೆ

ಬೈಂದೂರು:ಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಸುರಿದ ಭಾರಿ ಮಳೆಗೆ ಸೌಪರ್ಣಿಕಾ ನದಿ ಉಕ್ಕಿ ಹರಿದ ಪರಿಣಾಮ ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರು ದ್ವೀಪದಲ್ಲಿ ಮಂಗಳವಾರ ಮತ್ತೆ ನೆರೆ ಕಾಣಿಸಿಕೊಂಡಿದ್ದು.ಕೆಂಪು ಓಕುಳಿ ನೆರೆ ನೀರು ಕುರು ದ್ವೀಪ ಪ್ರದೇಶವನ್ನು ಆವರಿಸಿದೆ.ಕಳೆದ ಒಂದು ವಾರಗಳ ಹಿಂದೆ ಕಾಣಿಸಿ ಕೊಂಡಿದ್ದ ನೆರೆ ಸೋಮವಾರ ಸುರಿದ ಭಾರಿ ಮಳೆಗೆ ನದಿಯಲ್ಲಿ ನೀರಿನ ಮಟ್ಟ ಏರಿಕೆ ಆಗಿದ್ದರಿಂದ ಮಂಗಳವಾರ ಎರಡನೇ ಬಾರಿಗೆ ನೆರೆ ನೀರು ಕುರು ದ್ವೀಪ ಪ್ರದೇಶಕ್ಕೆ ಲಗ್ಗೆ ಇಟ್ಟಿದೆ.ನದಿಯಲ್ಲಿ […]

You cannot copy content of this page