ಕಟ್ ಬೇಲ್ತೂರು ಪಂಚಾಯತ್ ಉಪಾಧ್ಯಕ್ಷರಾಗಿ ರಾಮ ಶೆಟ್ಟಿ ಬಾಳಿಕೆರಿ ಆಯ್ಕೆ

ಕುಂದಾಪುರ:ಕಟ್ ಬೇಲ್ತೂರು ಗ್ರಾಮ ಪಂಚಾಯತಿಯ ನೂತನ ಉಪಾಧ್ಯಕ್ಷರಾಗಿ ಶ್ರೀ ರಾಮ ಶೆಟ್ಟಿ ಬಾಳಿಕೆರಿ ಅವರು ಆಯ್ಕೆಯಾಗಿದ್ದಾರೆ.ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು,ಅಭಿವೃದ್ಧಿ ಕಾರ್ಯ ಸಹಿತ ಸಾಮಾನ್ಯ ಜನರ ಕಷ್ಟಕ್ಕೆ ಸ್ಪಂದನೆ ಮಾಡಲಾಗುವುದೆಂದ ಕಟ್ ಬೇಲ್ತೂರು ಪಂಚಾಯತ್ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಶ್ರೀರಾಮ ಶೆಟ್ಟಿ ಅವರು ತಮ್ಮ ಮನದ ಇಂಗಿತವನ್ನು ಹಂಚಿಕೊಂಡಿದ್ದಾರೆ.ಉಪಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಶ್ರೀರಾಮ ಶೆಟ್ಟಿ ಬಾಳಿಕೆರಿ ಅವರಿಗೆ ದೇವಲ್ಕುಂದ ಗ್ರಾಮಸ್ಥರು ಹಾಗೂ ಬಾಳಿಕೆರಿ,ಜಾಡಿ ಫ್ರೆಂಡ್ಸ್ ಸರ್ವ ಸದಸ್ಯರು ಮತ್ತು ಹರೆಗೋಡು,ಕಟ್ ಬೇಲ್ತೂರು ಗ್ರಾಮಸ್ಥರು ಮತ್ತು ಕೆಂಚನೂರು ಹಾಗೂ ಹಾಲಾಡಿ ಮನೆ […]

ಆಗಸ್ಟ್ 21.ರಂದು ಶ್ರೀ ನಾಗಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ನಾಗರ ಪಂಚಮಿ ಆಚರಣೆ

ಕುಂದಾಪುರ:ಹೊಸಾಡು ಗ್ರಾಮದ ಅರಾಟೆ –ಮುಳ್ಳಿಕಟ್ಟೆ ಶ್ರೀ ನಾಗಕನಿಕಾ ಪರಮೇಶ್ವರಿ ದೇವಸ್ಥಾನ ಹಣಿಮಕ್ಕಿಯಲ್ಲಿ ಆಗಸ್ಟ್ 21 ರಂದು ಸೋಮವಾರ ನಾನಾ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಾಗರ ಪಂಚಮಿ ಹಬ್ಬ ಜರುಗಲಿದೆ.ನಾಗರ ಪಂಚಮಿ ಹಬ್ಬದ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ವಿಶೇಷ ಪೂಜಾಭಿಷೇಕ,ಮಂಗಳಾರತಿ ಹಾಗೂ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆ ತನಕ ಪ್ರಸಾದ ವಿತರಣೆ ನಡೆಯಲಿದೆ.ದೇವಸ್ಥಾನದಲ್ಲಿ ನಡೆಯಲಿರುವ ದೇವತಾ ಕಾರ್ಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಳದವರು ಕೇಳಿಕೊಂಡಿದ್ದಾರೆ. (ಹೊಸಾಡು ಗ್ರಾಮದ ಅರಾಟೆ –ಮುಳ್ಳಿಕಟ್ಟೆ […]

ಮುಳುಗುಜ್ಞ ದಿನೇಶ ಖಾರ್ವಿಗೆ ಸನ್ಮಾನ

ಕಾರವಾರ:ಮುದಗ ನಿರಾಶ್ರಿತರ ಹಾಗೂ ಸ್ಥಳೀಯ ಬೋಟ್ ಮಾಲೀಕರ ಸಂಘದ ವತಿಯಿಂದ ಸಮಾಜ ಸೇವಕ ಮುಳುಗುತಜ್ಞ ದಿನೇಶ ಖಾರ್ವಿ ಗಂಗೊಳ್ಳಿ ಅವರನ್ನು ಕಾರವಾರದ ಸಂಘದ ಕಛೇರಿಯಲ್ಲಿ ಶುಕ್ರವಾರ ಸನ್ಮಾನಿಸಲಾಯಿತು.ನಿರಾಶ್ರಿತರ ಹಾಗೂ ಸ್ಥಳೀಯ ಬೋಟ್ ಮಾಲೀಕರ ಸಂಘದ ಅಧ್ಯಕ್ಷ ಯಶ್ವಂತ ಖಾರ್ವಿ,ಉಪಾಧ್ಯಕ್ಷ ದಾಮೋದರ ಜಂಗಾ ತಾಂಡೇಲ,ದೇವದಾಸ ದುರ್ಗೇಕರ್,ಗಣೇಶ ಸಿ.ಕೆ,ಶ್ರೀಕಾಂತ ಪಾಟ ತಾಂಡೇಲ, ಅಶೋಕ ಹರಿಕಾಂತ,ಗಿರಿಧರ ಈರಾ ತಾಂಡೇಲ,ಮಾರುತಿ ನಾರಾಯಣ ಹರಿಕಾಂತ,ಜಯವಂತ ನಾರಾಯಣ ಹರಿಕಾಂತ,ಮಹಾಬಲೇಶ್ವರ ರಾಮ ಹರಿಕಾಂತ ಮುದಗ ಆಮದಳ್ಳಿ,ಜಗದೀಶ ಉಪಸ್ಥಿತರಿದ್ದರು.

You cannot copy content of this page