ಆಲೂರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ರಾಜೇಶ್ ದೇವಾಡಿಗ ಆಯ್ಕೆ

ಕುಂದಾಪುರ:ಆಲೂರು ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಪಂಚಾಯತ್ ಸದಸ್ಯರಾದ ರಾಜೇಶ್ ಎನ್ ದೇವಾಡಿಗ ಹಾಗೂ ಉಪಾಧ್ಯಕ್ಷರಾಗಿ ಸಿಂಗಾರಿ ತಾರಿಬೇರು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಆಲೂರು ಗ್ರಾಮ ಪಂಚಾಯತಿಯಲ್ಲಿ ಕಾಂಗ್ರೆಸ್ ಪಕ್ಷದ 08 ಸದಸ್ಯರು ಹಾಗೂ ಬಿಜೆಪಿ ಪಕ್ಷದ 06 ಸದಸ್ಯರು ಸೇರಿ ಒಟ್ಟು 14 ಸದಸ್ಯರಿದ್ದಾರೆ.ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಸದಸ್ಯರು ತಟಸ್ಥವಾದ ಧೋರಣೆಯನ್ನು ತಳೆದಿದ್ದರಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡರು.

ಜೀವಂತ ಹಾವುಗಳೊಂದಿಗೆ ನಾಗರ ಪಂಚಮಿ ಆಚರಣೆ

ಉಡುಪಿ:ಉರಗ ಚಿಕಿತ್ಸಕರು ಹಾಗೂ ರಕ್ಷಕರಾದ ಮಜೂರು ಗೊವರ್ಧನ ಭಟ್ ಪ್ರತೀ ವರ್ಷದಂತೆ ಈ ಬಾರಿಯೂ ನಾಗರ ಪಂಚಮಿಯಂದು ಎರಡು ಜೀವಂತ ನಾಗರಹಾವುಗಳಿಗೆ ಜಲಾಭಿಷೇಕ ಮಾಡುವುದರೊಂದಿಗೆ ತನು ಹೊಯ್ದು ಆರತಿ ಎತ್ತಿ ಪೂಜೆ ಸಲ್ಲಿಸಿದ್ದಾರೆ. ಉರಗ ತಜ್ಞರಾಗಿರುವ ಗೋವರ್ಧನ್ ಭಟ್ ಗಾಯಗೊಂಡ ಹಾವುಗಳನ್ನು ರಕ್ಷಣೆ ಮಾಡಿ ಕಾಡಿಗೆ ಬಿಡುವ ಹವ್ಯಾಸ  ಹೊಂದಿದ್ದಾರೆ.ಕೆಲ ದಿನಗಳ ಹಿಂದೆ ರಿಕ್ಷಾದ ಅಡಿಗೆ ಬಿದ್ದಿದ್ದ ಒಂದು ಹಾವು ಮತ್ತು ನಾಯಿ ಕಚ್ಚಿ ಗಾಯಗೊಳಿಸಿದ್ದ ಇನ್ನೊಂದು ಹಾವು ಸಹಿತ ಎರಡು ಹಾವುಗಳನ್ನು ತಮ್ಮ‌ಮನೆಯಲ್ಲಿಟ್ಟು ಶುಶ್ರೂಷೆ ನೀಡುತ್ತಿದ್ದು ಆ […]

ಶ್ರೀಕ್ಷೇತ್ರ ಶ್ರೀ ಗುಡ್ಡಮ್ಮಾಡಿ ದೇವಸ್ಥಾನ

ಕುಂದಾಪುರ:ಪ್ರಸಿದ್ಧ ಶ್ರೀ ಕ್ಷೇತ್ರ ಗುಡ್ಡಮ್ಮಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರ ಪಂಚಮಿ ಹಬ್ಬ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸೋಮವಾರ ಜರುಗಿತು.ನಾಗರ ಪಂಚಮಿ ಹಬ್ಬದ ಪ್ರಯುಕ್ತ ಸಂತಾನಕಾರಕನಾದ ಶ್ರೀ ಸುಬ್ರಹ್ಮಣ್ಯ ದೇವರಿಗೆ ಸೀಯಾಳಭಿಷೇಕ, ತನು ಸೇವೆ,ಹಣ್ಣುಕಾಯಿ ಮತ್ತು ಮಂಗಳಾರತಿ ಸೇವೆ ಹಾಗೂ ಹುಗ್ಗಿ ಸೇವೆ ನಡೆಯಿತು.ನೂರಾರು ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

You cannot copy content of this page