ಸ್ಕೂಟರ್‍ನಲ್ಲಿ ಗೋಮಾಂಸ ಸಾಗಾಟ:ಆರೋಪಿ ಅರೆಸ್ಟ್

ಕುಂದಾಪುರ:ಜೂನ್.21 ರಂದು ಸ್ಕೂಟರ್‍ನಲ್ಲಿ ಅಕ್ರಮವಾಗಿ ಗೋಮಾಂಸವನ್ನು ಸಾಗಾಟ ಮಾಡುತ್ತಿದ್ದ ಗಂಗೊಳ್ಳಿ ಮೀನು ಮಾರ್ಕೆಟ್ ಬಳಿ ನಿವಾಸಿ ಅಬ್ದುಲ್ ರಹೀಮ್ (35) ಎಂಬಾತನನ್ನು ಮುಳ್ಳಿಕಟ್ಟೆ-ಗಂಗೊಳ್ಳಿ ಮುಖ್ಯ ರಸ್ತೆ ಹೊಸಾಡು ಗ್ರಾಮದ ಗುಹೇಶ್ವರ ದೇವಸ್ಥಾನಕ್ಕೆ ಸಂಪರ್ಕಕಲ್ಪಿಸುವ ಕ್ರಾಸ್ ರಸ್ತೆಯಲ್ಲಿ ಗಂಗೊಳ್ಳಿ ಠಾಣೆ ಪೆÇಲೀಸರು ಬಂಧಿಸಿ ಕಾನೂನುಕ್ರಮ ಜರುಗಿಸಿದ್ದಾರೆ.ಬಂಧಿತ ಆರೋಪಿತ ನಿಂದ 7500.ರೂ ಮೌಲ್ಯದ 25 ಕೆ.ಜಿ ದನದ ಮಾಂಸ,ಕೃತ್ಯಕ್ಕೆ ಬಳಸಿದ ಸ್ಕೂಟರ್ ಮತ್ತು ಕಾರನ್ನು ವಶಪಡಿಸಿಕೊಳ್ಳಲಾಗಿದೆ.ಆರೋಪಿಯನ್ನು ನ್ಯಾಯಾಲಕ್ಕೆ ಹಾಜರು ಪಡಿಸಲಾಗಿದೆ.ಗಂಗೊಳ್ಳಿ ಠಾಣೆ ಪಿಎಸ್‍ಐ ಪವನ್ ನಾಯಕ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಗಿದ್ದು.ಸಿಬ್ಬಂದಿಗಳಾದ […]

ಜೂನ್.29 ರಂದು ಭೀಮ ಶಕ್ತಿ ಸಮಾವೇಶ

ಬೈಂದೂರು:ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‍ವಾದ ಜಿಲ್ಲಾ ಸಮಿತಿ ವತಿಯಿಂದ ಬೈಂದೂರು ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಭೀಮ ಶಕ್ತಿ ಸಮಾವೇಶ ಜೂನ್.29 ರಂದು ಬೈಂದೂರು ರೋಟರಿ ಸಮುದಾಯ ಭವನದಲ್ಲಿ ನಡೆಯಲಿದೆ.ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಕಾರ್ಯಕ್ರಮ ಉದ್ಘಾಟಿಸಲಿದ್ದು,ಜಿಲ್ಲಾ ಪ್ರಧಾನ ಸಂಚಾಲಕ ಟಿ.ಮಂಜುನಾಥ ಗಿಳಿಯಾರು ಅಧ್ಯಕ್ಷತೆ ವಹಿಸಲಿದ್ದಾರೆ.ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಿದ್ದು.ಅತಿಥಿಗಣ್ಯರು ಇವೊಂದು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಆಯುರ್ವೇದ ವೈದ್ಯ ಡಾ.ಶ್ರೀನಿವಾಸ್ ಪೈ

ಮುಳ್ಳಿಕಟ್ಟೆ:ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ನಿವಾಸಿ ಆಯುರ್ವೇದ ವೈದ್ಯ ಡಾ.ಶ್ರೀನಿವಾಸ ಪೈ (62) ಹೃದಯಘಾತದಿಂದ ಸೋಮವಾರ ನಿಧನರಾದರು.ಅವರಿಗೆ ಪತ್ನಿ,ಮಗಳು,ತಂದೆ,ಇಬ್ಬರು ಸಹೋದರ,ಇಬ್ಬರು ಸಹೋದರಿ ಇದ್ದಾರೆ.ಕುಂದಾಬಾರಂದಾಡಿ ಹಕ್ಲಾಡಿ,ಹೊಸಾಡು ಮುಳ್ಳಿಕಟ್ಟೆಯಲ್ಲಿ ಸೇವೆಯನ್ನು ಸಲ್ಲಿಸಿರುವ ಡಾ.ಶ್ರೀನಿವಾಸ ಪೈ ಗಿಡಮೂಲಿಕೆ ವೈದ್ಯರೆಂದು ಪ್ರಸಿದ್ಧಿ ಪಡೆದಿದ್ದರು.10 ರೂಪಾಯಿಗೆ ಔಷಧವನ್ನು ನೀಡುತ್ತಿದ್ದ ಅವರು ಬಡವರ ಪಾಲಿನ ವೈದ್ಯರೆಂದು ಖ್ಯಾತಿ ಹೊಂದಿದ್ದರು.

You cannot copy content of this page