ಪುಸ್ತಕ,ಕ್ರೀಡಾ ಸಾಮಾಗ್ರಿ ವಿತರಣೆ

ಕುಂದಾಪುರ:ಬೈಂದೂರು ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಕಡಿಕೆ-ನಾಡ ಶಾಲೆಯಲ್ಲಿ ಪುಸ್ತಕ ಮತ್ತು ಕ್ರೀಡಾ ಸಾಮಾಗ್ರಿ ವಿತರಣೆ ಕಾರ್ಯಕ್ರಮ ನಡೆಯಿತು.ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ನಾಗೇಶ್ ಭಟ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ನಾಡ ಗ್ರಾ.ಪಂ ಅಧ್ಯಕ್ಷ ದಿನೇಶ್ ಶೆಟ್ಟಿ,ಉಪಾಧ್ಯಕ್ಷೆ ಪದ್ದು ಪೂಜಾರಿ,ಸದಸ್ಯ ಪ್ರತ್ವಿಷ್ ಶೆಟ್ಟಿ,ಚಂದ್ರಶೇಖರ್ ಶೆಟ್ಟಿ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಜಯ್ ಮೆಂಡನ್,ಶಾಲಾ ಮುಖ್ಯೋಪಾಧ್ಯಾಯರಾದ ನಾಗರಾಜ್ ಶೆಟ್ಟಿ,ಎಸ್‍ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು.ಕಡಿಕೆ ಆಮನೆ ದಿ.ರಾಮಣ್ಣ ಶೆಟ್ಟಿ ಸ್ಮರಣಾರ್ಥವಾಗಿ ಪ್ರಸಾದ್ ಶೆಟ್ಟಿ ಅವರು 35,000.ರೂ ಮೌಲ್ಯದ ಪುಸ್ತಕವನ್ನು ಕೊಡುಗೆ ಆಗಿ ನೀಡಿದರು.ಯುವ ಸಬಲೀಕರಣ ಹಾಗೂ […]

ಸಂಪರ್ಕ ರಸ್ತೆಯನ್ನು ಪುನರ್ ನಿರ್ಮಾಣ ಮಾಡಿಕೊಂಡ ಮೀನುಗಾರರು,ಸರ್ಕಾರದ ನಿರುತ್ಸಾಹ ಧೋರಣೆ

ಕುಂದಾಪುರ:ಬಿಪರ್ ಜಾಯ್ ಚಂಡಮಾರುತದ ಪ್ರಭಾವದಿಂದ ಕಡಲಬ್ಬರ ಉಂಟಾಗಿ ಬೈಂದೂರು ತಾಲೂಕಿನ ಮರವಂತೆ ಕರಾವಳಿ ಭಾಗದ ಫಿಶರೀಷ್ ರಸ್ತೆ ಬಿರುಕು ಬಿಟ್ಟು ಸಂಪರ್ಕ ಕಡಿತವಾಗಿದ್ದರೂ ಸರಕಾರ ಮತ್ತು ಜನಪ್ರತಿನಿಧಿಗಳು,ಇಲಾಖಾಧಿಕಾರಿಗಳು ಯಾವುದೇ ರೀತಿ ಕ್ರಮಗಳನ್ನು ಕೈಗೊಳ್ಳದೆ ಇದ್ದಿದ್ದರಿಂದ ಬೇಸತ್ತ ಮೀನುಗಾರರು ರಸ್ತೆ ಸಂಪರ್ಕ ವ್ಯವಸ್ಥೆಗಾಗಿ ಶ್ರೀರಾಮ ಮಂದಿರ ಮರವಂತೆ ಮೀನುಗಾರರ ಸೇವಾ ಸಮಿತಿ ವತಿಯಿಂದ ಸುಮಾರು 10.ಲಕ್ಷ.ರೂ ವ್ಯಯಿಸಿ ಕಡಲ ದಂಡೆಗೆ ಕಲ್ಲುಗಳನ್ನು ಹಾಕಿ ಸುಮಾರು 100.ಮೀಟರ್ ವರೆಗಿನ ಸಂಪರ್ಕ ರಸ್ತೆಯನ್ನು ಪುನರ್ ನಿರ್ಮಾಣ ಮಾಡಿಕೊಂಡಿದ್ದಾರೆ. ಮರವಂತೆ ಕಡಲ ತಡಿಯ […]

ರಷ್ಯಾದಲ್ಲಿ ಆಂತರಿಕ ಬಿಕ್ಕಟ್ಟು,ವ್ಯಾಗ್ನರ್ ವಿರುದ್ಧ ಪುಟಿನ್ ಆಕ್ರೋಶ

ಬೆಂಗಳೂರು:ರಷ್ಯಾದಲ್ಲಿ ಬಂಡಾಯವೆದ್ದಿರುವ ಖಾಸಗಿ ಸೇನಾ ಗುಂಪಿನಿಂದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉಕ್ರೇನ್ ಮೇಲಿನ ದಾಳಿ ಆರಂಭವಾದ ನಂತರ ರಷ್ಯಾದಲ್ಲಿ ಅತ್ಯಂತ ದೊಡ್ಡ ಆಂತರಿಕ ಬಿಕ್ಕಟ್ಟು ಉಂಟಾಗಿದೆ. ಖಾಸಗಿ ಸೇನಾ ಗುಂಪು (ಮರ್ಸಿನರಿ) ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೊಝಿನ್ ಅವರು ತಮ್ಮ ಪಡೆಯು 25,000 ಸೈನಿಕರೊಂದಿಗೆ ರಷ್ಯಾದೊಳಗೆ ನುಗ್ಗಿದೆ ಎಂದು ಹೇಳಿಕೊಂಡಿದ್ದಾರೆ.ರಷ್ಯಾ ಸೇನಾ ನಾಯಕತ್ವವನ್ನು ಉರುಳಿಸುವ ಪ್ರಯತ್ನವಾಗಿ ತನ್ನ ಸಶಸ್ತ್ರ ಪಡೆಗಳನ್ನು ಮಾಸ್ಕೋದ ಕಡೆ 1200 ಕಿಮೀ ದೂರದಿಂದ ಕಳುಹಿಸಲಾಗಿದೆ ಎಂದು ಪ್ರಿಗೊಝಿನ್ ಹೇಳಿದ್ದಾರೆ. […]

You cannot copy content of this page