ಕುಂದಾಪುರ ಶಾಸಕರ ನೂತನ ಕಛೇರಿ ಉದ್ಘಾಟನೆ

ಕುಂದಾಪುರ:ಕುಂದಾಪುರ ಹೃದಯ ಭಾಗದಲ್ಲಿರುವ ತಾಲೂಕು ಪಂಚಾಯತ್ ಕಟ್ಟಡದಲ್ಲಿ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಅವರ ನೂತನ ಕಛೇರಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.ಮಾಜಿ ಶಾಸಕ ಧಾರ್ಮಿಕ ಮುಖಂಡರಾದ ಅಪ್ಪಣ್ಣ ಹೆಗ್ಡೆ ಅವರು ಶಾಸಕರ ನೂತನ ಕಛೇರಿಯನ್ನು ಉದ್ಘಾಟಿಸಿ ಶುಭಹಾರೈಸಿದರು.ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ,ಬಿಜಿಪಿ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ,ಕಾಡೂರು ಸುರೇಶ್ ಶೆಟ್ಟಿ,ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ವಕ್ವಾಡಿ,ಸುರೇಶ್ ಶೆಟ್ಟಿ ಗೊಪಾಡಿ,ಬಾರ್ಕೂರು ಶಾಂತರಾಮ ಶೆಟ್ಟಿ,ಸಂಪತ್ ಶೆಟ್ಟಿ ಉಪಸ್ಥಿತರಿದ್ದರು.ಜನ ಸಾಮಾನ್ಯರಿಗೆ ನೆರವು ಆಗುವ ದೃಷ್ಟಿಯಿಂದ ಶಾಸಕರ ಕಛೇರಿಯನ್ನು ತೆರೆಯಲಾಗಿದ್ದು,ಸಾರ್ವಜನಿಕರ […]

ಹೊಗೆ ಮೀನು ಶಿಕಾರಿ ಜೋರು

ಕುಂದಾಪುರ:ಎಡಬಿಡದೆ ಸುರಿದ ಬಾರಿ ಮಳೆಗೆ ಹಳ್ಳ,ಕೊಳ್ಳ,ಗದ್ದೆಗಳು ತುಂಬಿ ತೋಡಿನಲ್ಲಿ ನೀರು ಹರಿದ ಪರಿಣಾಮ ಬಡಾಕೆರೆ ಭಾಗದಲ್ಲಿ ಹೊಗೆ ಮೀನುಗಳ ರಾಶಿ ಕಂಡು ಬಂದಿದೆ,ಸ್ಥಳೀಯರು ಭರ್ಜರಿ ಆಗಿ ಮೀನಿನ ಶಿಕಾರಿಯನ್ನು ಮಾಡಿದರು.ಮೊದಲ ಮಳೆಗೆ ಹಿನ್ನಿರಿನಿಂದ ಮೀನುಗಳು ತೋಡಿನ ಮೂಲಕ ಗದ್ದೆಗಳತ್ತಾ ಧಾವಿಸಿ ಬರುತ್ತವೆ ಇದು ಒಂದೆರಡು ದಿನಗಳಿಗೆ ಮಾತ್ರ ಸೀಮಿತವಾಗುವ ಸಂದರ್ಭವಾಗಿದೆ.

ಚರಂಡಿಗೆ ಬಿದ್ದು ವಯೋವೃದ್ಧ ಸಾವು,ಸಾರ್ವಜನಿಕರು ಆಕ್ರೋಶ

ಕುಂದಾಪುರ:ರಾಷ್ಟ್ರೀಯ ಹೆದ್ದಾರಿಯಲ್ಲಿನ ಚರಂಡಿ ಹೊಂಡಕ್ಕೆ ಬಿದ್ದು ವಯೋವೃದ್ಧರೊಬ್ಬರು ಮೃತಪಟ್ಟ ಘಟನೆ ತೆಕ್ಕಟ್ಟೆಯಲ್ಲಿ ಶುಕ್ರವಾರ ನಡೆದಿದೆ.ಚರಂಡಿ ಅವ್ಯವಸ್ಥೆಯಿಂದ ಹಿರಿಯ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಸಂಬಂಧಪಟ್ಟ ಇಲಾಖೆ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು,ಚರಂಡಿ ವ್ಯವಸ್ಥೆಯನ್ನು ಸರಿ ಪಡಿಸುವಂತೆ ಆಗ್ರಹಿಸಿದ್ದಾರೆ

You cannot copy content of this page