ಕೊಲ್ಲೂರಿನಲ್ಲಿ ಚಿನ್ನಾಭರಣ ಕಳವುಗೈದ ಆರೋಪಿ ಬಂಧನ
ಕುಂದಾಪುರ:ಕೊಲ್ಲೂರು ದೇವಿಯ ದರ್ಶನಕ್ಕೆ ಜೂನ್ 4ರಂದು ಬಂದಿದ್ದ ಮಹಿಳೆಯ ಪರ್ಸ್ ನಿಂದ ಕಳುವಾಗಿದ್ದ ಹದಿಮೂರೂವರೆ ಪವನ್ ಚಿನ್ನಾಭರಣ ಕಳವಿಗೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಖಾಸಗಿ ಬಸ್ಸೊಂದರಲ್ಲಿ ಕೆಲಸ ಮಾಡುತ್ತಿದ್ದ ತೀರ್ಥಹಳ್ಳಿ ಮೂಲದ ಗಿರೀಶ್ ಬಿ.ಜಿ. (32) ನನ್ನು ಬಂಧಿಸಿದ ಪೊಲೀಸರು ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.ಪ್ರಕರಣದ ಜಾಡನ್ನು ಬೆನ್ನತ್ತಿದ ಪೊಲೀಸರು ಸಿಸಿ ಕೆಮೆರಾದಲ್ಲಿ ಸೆರೆಯಾಗಿದ್ದ ದೃಶ್ಯಗಳನ್ನು ಪರಿಶೀಲನೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.ಆರೋಪಿ ಎಗರಿಸಿದ್ದ ಎನ್ನಲಾದ 7½ ಪವನ್ ಚಿನ್ನದ ಚೈನ್,3 ಪವನ್ ತೂಕದ ಎರಡು ಚಿನ್ನದ ಬಳೆ,1½ ಪವನ್ […]